ಸಾರಾಂಶ
ವರ್ತಕರ ಅನುಕೂಲಕ್ಕಾಗಿ ಸಮಯ ಬದಲಾವಣೆ ಮಾಡುತ್ತಿರುವುದು ಸರಿಯಲ್ಲ. ಆ ಕಡೆ ಟೊಮೆಟೋ, ಈ ಕಡೆ ತರಕಾರಿ ಮಂಡಿಗಳನ್ನ ನಡೆಸುತ್ತಿರುವ ವರ್ತಕರ ಅನುಕೂಲಕ್ಕಾಗಿ ಸಮಾಯಾವಕಾಶ ಬದಲಾವಣೆ ಮಾಡುತಿದ್ದಾರೆ. ಇದರಿಂದ ರೈತರಿಗೆ ತೊಂದರೆಯಾಗುತ್ತದೆ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಈ ಹಿಂದೆ ರೈತರು ಬೆಳೆದ ತರಕಾರಿ ಟೊಮೆಟೋವನ್ನು ಅವರಿಗೆ ಅನುಕೂಲವಾದ ಸಮಯಕ್ಕೆ ಮರುಕಟ್ಟೆಗೆ ತಂದು ಮಾರಾಟ ಮಾಡುತಿದ್ದರು. ಆದರೆ ಈಗ ಎಪಿಎಂಸಿ ಮಾರುಕಟ್ಟೆ ಕಾರ್ಯದರ್ಶಿ ಇದ್ದಕ್ಕಿಂದಂತೆ ಸಮಯ ಬದಲಾವಣೆ ಮಾಡಿ ಹನ್ನೊಂದು ಗಂಟೆ ನಂತರವೇ ಹರಾಜು ಕೂಗುವುದಾಗಿ ಆದೇಶ ಹೊರಡಿಸಿದ್ದಾರೆಂದು ವಿರೋಧಿಸಿ ರಾಜ್ಯ ರೈತಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಗೆ ಮನವಿ ಸಲ್ಲಿಸಿದರು. ಚಿಕ್ಕಬಳ್ಳಾಪುರದ ಎಪಿಎಂಸಿ ಮಾರುಟ್ಟೆಯಲ್ಲಿ ರೈತರು ಬೆಳೆಯುವ ತರಕಾರಿ ಹಣ್ಣು ಮಾರಾಟಕ್ಕೆ ಬೆಳಿಗ್ಗೆ ಎಂಟು ಗಂಟೆಗೆ ಅವಕಾಶ ಕಲ್ಪಿಸಿದ್ದರು. ಆದ್ದರಿಂದ ರೈತ ತನ್ನ ಸಮಯಾನುಕೂಲ ನೋಡಿಕೊಂಡು ಮಾರುಕಟ್ಟೆಗೆ ಸರಕು ತಂದು ಮಾರಾಟ ಮಾಡುತಿದ್ದರು. ಆದರೆ ಗುರುವಾರದಿಂದ ಹರಾಜು ಸಮಯವನ್ನ ಹನ್ನೊಂದು ಗಂಟೆ ನಂತರ ನಡೆಸಲಾಗುವುದೆಂದು ಎಪಿಎಂಸಿ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ ಎಂದು ಆರೋಪಿಸಿದರು.ಆದೇಶ ಹಿಂಪಡೆಯಲು ಆಗ್ರಹ
ಕಾರ್ಯದರ್ಶಿ ಹೊರಡಿಸಿರುವ ಈ ಆದೇಶ ವಾಪಸ್ ಪಡೆದು ಈ ಹಿಂದೆ ಇದ್ದ ಸಮಯವನ್ನೆ ಮುಂದುವರೆಸಬೇಕೆಂದು ಒತ್ತಾಯಿಸಿ ರಾಜ್ಯ ರೈತಸಂಘ ಚಂದ್ರಶೇಖರ್ ಬಣದ ಕಾರ್ಯಕರ್ತರು ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.ವ್ಯಾಪಾರಿಗಳಿಗೆ ಅನುಕೂಲ
ಈ ವೇಳೆ ಮಾತನಾಡಿದ ಸಂಘದ ಕಾರ್ಯದರ್ಶಿ ಗೋಪಾಲ್, ಈಗಿದ್ದ ವ್ಯವಸ್ಥೆ ಪ್ರತಿಯೊಬ್ಬ ರೈತನಿಗೂ ಅನುಕೂಲ ಇದೆ. ಆದರೆ ವರ್ತಕರ ಅನುಕೂಲಕ್ಕಾಗಿ ಸಮಯ ಬದಲಾವಣೆ ಮಾಡುತ್ತಿರುವುದು ಸರಿಯಲ್ಲ. ಆ ಕಡೆ ಟೊಮೆಟೋ, ಈ ಕಡೆ ತರಕಾರಿ ಮಂಡಿಗಳನ್ನ ನಡೆಸುತ್ತಿರುವ ವರ್ತಕರ ಅನುಕೂಲಕ್ಕಾಗಿ ಸಮಾಯಾವಕಾಶ ಬದಲಾವಣೆ ಮಾಡುತಿದ್ದಾರೆ. ಇದರಿಂದ ರೈತರಿಗೆ ತೊಂದರೆಯಾಗುತ್ತದೆ ಆದ್ದರಿಂದ ಯಾವುದೆ ಕಾರಣಕ್ಕೂ ಸಮಯ ಬದಲಾವಣೆ ಮಾಡಬಾರದು ಎಂದು ಒತ್ತಾಯಿಸಿದರು.ಈ ವೇಳೆ ಸಂಘದ ತಾಲೂಕು ಅಧ್ಯಕ್ಷ ರಾಮಾಂಜಿನಪ್ಪ ,ಜಂಟಿ ಕಾರ್ಯದರ್ಶಿ ಶ್ರೀನಿವಾಸ್, ಉಪಾಧ್ಯಕ್ಷ ಮುನಿಕೃಷ್ಣಪ್ಪ, ಬೊಮ್ಮನಹಳ್ಳಿ ಅಶ್ವಥಪ್ಪ, ಜನಾರ್ದನ್, ನಾರಾಯಣಸ್ವಾಮಿ ಮತ್ತಿತರರು ಇದ್ದರು.
ಸಿಕೆಬಿ-8 ಚಿಕ್ಕಬಳ್ಳಾಪುರ ತಾಲ್ಲೂಕು ಕಚೇರಿ ಮುಂದೆ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.