ಸಾರಾಂಶ
ಗೊಲ್ಲಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ನುರಾರು ಕೃಷಿ ಭೂಮಿ ಇದ್ದು, ರೈತರು ತಮ್ಮ ಜೀವನಾಡಿಯಾಗಿದೆ, ಇದರ ಜೊತೆಗೆ ಕೋಳಿ ಫಾರಂ ಶೆಡ್ಡ್‌ಗಳು ಇದ್ದು, ಇಲ್ಲಿ ಬಿಬಿಎಂಪಿ ತ್ಯಾಜ್ಯ ಸುರಿಯುವುದರಿಂದ ಕೋಳಿ ಉದ್ಯೋಮಕ್ಕೆ ತೊಂದರೆಯಾಗಲಿದೆ
ಕನ್ನಡಪ್ರಭ ವಾರ್ತೆ ಕೆಜಿಎಫ್ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಸ ವಿಲೇವಾರಿ ಮಾಡಲು ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮುಂದಾದರೆ ನಾವು ಪ್ರಾಣ ಬಿಡುತ್ತೇವೆಯೇ ಹೊರತು ತ್ಯಾಜ್ಯವನ್ನು ಈ ಭಾಗದಲ್ಲಿ ಸುರಿಯಲು ಬಿಡುವುದಿಲ್ಲ ಎಂದು ಟಿ. ಗೊಲ್ಲಹಳ್ಳಿ ಪಂಚಾಯಿತಿ ಅಧ್ಯಕ್ಷ ಮಂಜುನಾಥ್ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು. ಗೊಲ್ಲಹಳ್ಳಿ ಗ್ರಾಪಂ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಂಗಳೂರು ನಗರದ ಕಸವನ್ನು ಇಲ್ಲಿ ತಂದು ಸುರಿಯಲು ಜಿಲ್ಲಾಧಿಕಾರಿ ಅಕ್ರಂ ಪಾಷ ಸ್ಥಳ ಪರಿಶೀಲನೆ ನಡೆಸಿ ೩೦೦ ಎಕರೆ ಚಿನ್ನದ ಗಣಿಗಳನ್ನು ಭೂಮಿ ಗುರುತಿಸಿದ್ದು, ೩೦೦ ಎಕರೆ ಜಾಗದಲ್ಲಿ ಬೆಂಗಳೂರಿನ ತ್ಯಾಜ್ಯ ಸುರಿಯಲು ಜಿಲ್ಲಾಡಳಿತ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿದರು.
ಕೂಡಲೇ ಜಿಲ್ಲಾಧಿಕಾರಿಗಳು ಬೆಂಗಳೂರಿನ ತ್ಯಾಜ್ಯ ವಿಲೇವಾರಿ ಘಟಕ್ಕೆ ಇಲ್ಲಿ ಜಾಗ ನೀಡಬಾರದೆಂದು ಗೊಲ್ಲಹಳ್ಳಿ ಗ್ರಾಪಂ ವಿಶೇಷ ಸಭೆಯಲ್ಲಿ ಠರಾವು ಪಾಸ್ ಮಾಡಲಾಗುವುದೆಂದು ಅವರು ತಿಳಿಸಿದರು.ರೈತರನ್ನು ವಕ್ಕಲೆಬ್ಬಿಸಬೇಡಿಗೊಲ್ಲಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ನುರಾರು ಕೃಷಿ ಭೂಮಿ ಇದ್ದು, ರೈತರು ತಮ್ಮ ಜೀವನಾಡಿಯಾಗಿದೆ, ಇದರ ಜೊತೆಗೆ ಕೋಳಿ ಫಾರಂ ಶೆಡ್ಡ್‌ಗಳು ಇದ್ದು, ತ್ಯಾಜ್ಯ ಸುರಿಯುವುದರಿಂದ ಕೋಳಿ ಉದ್ಯೋಮಕ್ಕೆ ತೊಂದರೆಯಾಗಲಿದೆ. ಬೆಂಗಳೂರಿನ ತ್ಯಾಜ್ಯ ಘಟಕ್ಕೆ ಅನುಮತಿ ನೀಡಬಾರದೆಂದು ಸದಸ್ಯರು ಒತ್ತಾಯಿಸಿದರು.ಈ ಭಾಗದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬಡವರು ವಾಸಿಸುತ್ತಿದ್ದು ಕಸದ ವಾಸನೆಯಿಂದ ಸಾಂಕ್ರಾಮಿಕ ರೋಗಗಳು ಹರಡಲಿದೆ ರೋಗಗಳನ್ನು ಗುಣಪಡಿಸುವ ಶಕ್ತಿ ನಮ್ಮ ಜನರಲ್ಲಿ ಇಲ್ಲ. ಹಿಂದೆ ೨೦೧೬-೧೭ ರಲ್ಲಿ ಸಹ ಕೆಜಿಎಫ್ ನಗರ ಪ್ರದೇಶಗಳಲ್ಲಿ ಕಸ ಹಾಕಲು ಬಿಬಿಎಂಪಿ ಮುಂದಾಗಿತ್ತು, ಆದರೆ ಅಂದು ಪಕ್ಷಾತೀತವಾಗಿ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಯೋಜನೆ ಕೈಬಿಡಲಾಗಿತ್ತು ಎಂದರು.ತ್ಯಾಜ್ಯ ಸುರಿಯಲು ಬಿಡೋಲ್ಲ
ಆದರೆ ಮರಳಿ ಕಸ ಹಾಕುವ ಯತ್ನನಡೆಯುತ್ತಿದ್ಜು ಯಾವುದೇ ಕಾರಣಕ್ಕೂ ನಮ್ಮ ವ್ಯಾಪ್ತಿಯಲ್ಲಿ ತ್ಯಾಜ್ಯ ಹಾಕಲು ಬಿಡುವುದಿಲ್ಲ ಕಸದ ಬಗ್ಗೆ ಹೋರಾಟ ಮಾಡಲಾಗುವುದು ಎಂದು ಹೇಳಿದರು. ಈ ವೇಳೆ ಪಂಚಾಯಿತಿ ಸದಸ್ಯ ಗೋಪಿ, ಮತ್ತಿತರರು ಇದ್ದರು.