ಆಡಳಿತಕ್ಕಿಂತ ಮೊದಲು ಸಂಘಟನೆ

| Published : Jun 30 2025, 12:34 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ತಾಳಿಕೋಟೆ ಸಂಘಟನೆ ಎನ್ನುವುದು ಒಂದು ನಿರ್ದಿಷ್ಠ ಗುರಿ ಸಾಧಿಸಲು ಜನರು ಒಗ್ಗಟ್ಟಾಗಿ ಕಟ್ಟಿಕೊಳ್ಳುವ ಒಂದು ವ್ಯವಸ್ಥೆಯಾಗಿದೆ. ಸಂಘಟನೆ ಎಂಬುದು ವ್ಯವಹಾರಗಳಲ್ಲಿ ಸರ್ಕಾರಗಳಲ್ಲಿ ಮತ್ತು ಇತರೆ ಸಂಸ್ಥೆಗಳಲ್ಲಿ ಪ್ರಮುಖವಾಗಿ ಪ್ರಾಮಾಣಿಕ ಮನೋಭಾವದಿಂದ ಸ್ಥಾನಮಾನ ಗಿಟ್ಟಿಸಿಕೊಳ್ಳುವುದಾಗಿದೆ ಎಂದು ದಲಿತ ಸೇವಾ ಸಮಿತಿ ಅಂಬೇಡ್ಕರ್ ದಾರಿ ಎಂಬ ಸಂಘಟನೆಯ ಅಧ್ಯಕ್ಷ ಬಸವರಾಜ ಕಟ್ಟಿಮನಿ ಹೇಳಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಸಂಘಟನೆ ಎನ್ನುವುದು ಒಂದು ನಿರ್ದಿಷ್ಠ ಗುರಿ ಸಾಧಿಸಲು ಜನರು ಒಗ್ಗಟ್ಟಾಗಿ ಕಟ್ಟಿಕೊಳ್ಳುವ ಒಂದು ವ್ಯವಸ್ಥೆಯಾಗಿದೆ. ಸಂಘಟನೆ ಎಂಬುದು ವ್ಯವಹಾರಗಳಲ್ಲಿ ಸರ್ಕಾರಗಳಲ್ಲಿ ಮತ್ತು ಇತರೆ ಸಂಸ್ಥೆಗಳಲ್ಲಿ ಪ್ರಮುಖವಾಗಿ ಪ್ರಾಮಾಣಿಕ ಮನೋಭಾವದಿಂದ ಸ್ಥಾನಮಾನ ಗಿಟ್ಟಿಸಿಕೊಳ್ಳುವುದಾಗಿದೆ ಎಂದು ದಲಿತ ಸೇವಾ ಸಮಿತಿ ಅಂಬೇಡ್ಕರ್ ದಾರಿ ಎಂಬ ಸಂಘಟನೆಯ ಅಧ್ಯಕ್ಷ ಬಸವರಾಜ ಕಟ್ಟಿಮನಿ ಹೇಳಿದರು.ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಂಘಟನೆ ಎಂಬುದು ಈಗಿನ ದಿನಮಾನದಿಂದ ಬಂದಿದ್ದಲ್ಲ. ಇತಿಹಾಸ ಕಾಲದಿಂದಲೂ ಬಂದಿದ್ದಾಗಿದ್ದು ಮಾನವ ಸಂಘ ಜೀವಿಯಾಗಿದ್ದರಿಂದ ಒಂದಿಲ್ಲೊಂದು ಸಂಘಟನೆಯನ್ನು ರೂಪಿಸಿಕೊಂಡಿದ್ದಾನೆ. ಸಂಘಟನೆ ಎಂಬುದು ಆಡಳಿತಕ್ಕಿಂತಲೂ ಮೊದಲನೆಯದು. ಒಂದು ಸಾಧನಾ ರಚನಾತ್ಮಕ ಸಂಬಂಧ ಏರ್ಪಡಿಸಲು ಕಾರ್ಯ ಮತ್ತು ವ್ಯಕ್ತಿಗಳ ಸಂಬಂಧ ಬೇಡುತ್ತದೆ. ನಮ್ಮ ದಲಿತ ಸೇವಾ ಸಮಿತಿ ಎಂಬುದು ಅಧಿಕೃತವಾಗಿದ್ದು, ಸೇವಾ ಕಾರ್ಯ ಮಾಡುವ ಸಂಘಟನೆಗೆ ಔಪಚಾರಿಕ ಸಂಘಟನೆ ಎಂದು ಹೇಳಬಹುದಾಗಿದೆ ಎಂದರ.ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ತತ್ವ ಸಿದ್ದಾಂತದೊಂದಿಗೆ ಶಿಕ್ಷಣ, ಸಂಘಟನೆ, ಹೋರಾಟ ಎಂಬ ಈ ಮೂರು ತತ್ವ ಸಿದ್ದಾಂತ ಹೋರಾಟದಡಿಯಲ್ಲಿ ಸಾಮಾಜಿಕ ಆರ್ಥಿಕ ಹಾಗೂ ಶೈಕ್ಷಣಿಕ ಹಕ್ಕುಗಳನ್ನು ಪಡೆಯುವ ಉದ್ದೇಶದಿಂದ ಸಂಘಟನೆ ಕಟ್ಟಲಾಗಿದೆ. ಇವೆಲ್ಲವುಗಳನ್ನು ಪಡೆಯಲು ನಾವು ಸಾಕಷ್ಟು ಹೋರಾಟಗಳನ್ನಾಗಲಿ, ಚಳುವಳಿಗಳನ್ನಾಗಲಿ ಮಾಡಲು ಸಿದ್ದರಿದ್ದೇವೆ. ಇಂತಹ ವಿಷಯ ಕುರಿತು ನಮ್ಮ ಸಂಘಟನೆ ಮುಂದಾದಲ್ಲಿ ಎಲ್ಲ ಸಾರ್ವಜನಿಕರೂ ಸಹ ಸಹಕಾರ ನೀಡಬೇಕು. ನಮ್ಮ ಸೇವಾ ಕಾರ್ಯದಲ್ಲಿ ಸತ್ಯ ಧರ್ಮ ಪ್ರೇಮ ಶಾಂತಿಗಳ ವಿಚಾರಗಳೇ ಹೊರಹೊಮ್ಮುತ್ತವೆ ಎಂದು ಭರವಸೆ ನೀಡಿದರು.ಅಧ್ಯಕ್ಷ ಕಟ್ಟಿಮನಿ ಮಾತನಾಡಿ, ರಾಜ್ಯದಾದ್ಯಂತ ಸಾಮಾಜಿಕ ಸಮಾನತೆಗಾಗಿ ಭದ್ರತೆಗಾಗಿ ಅಷ್ಪ್ರುಶ್ಯತೆ ನಿವಾರಣೆಗಾಗಿ ಆರೋಗ್ಯದಾಯಕವಾದ ಹೋರಾಟ ಮಾಡಲಾಗುತ್ತದೆ. ಉತ್ತಮ ಗುಣಮಟ್ಟದ ಶಿಕ್ಷಣ ಪಡೆಯಲು ಶೈಕ್ಷಣಿಕ ಅಭಿವೃದ್ದಿಗಾಗಿ ಸಮುದಾಯದ ಜನರಲ್ಲಿ ತಿಳುವಳಿಕೆ ನೀಡುವದರೊಂದಿಗೆ ಅಕ್ಷರ ಕ್ರಾಂತಿಗೆ ನಾಂದಿ ಹಾಡುತ್ತೇವೆ. ದಲಿತ ಜನಾಂಗದ ಬಡವರ ಹಾಗೂ ಮಹಿಳೆಯರ ಆರ್ಥಿಕ ಅಭಿವೃದ್ದಿಗಾಗಿ ಸರ್ಕಾರದ ಯೋಜನೆಗಳನ್ನು ಹಾಗೂ ಸೌಲಭ್ಯಗಳನ್ನು ಪಡೆಯಲು ಮಾರ್ಗದರ್ಶನವನ್ನು ನಮ್ಮ ಸಂಘಟನೆ ನೀಡುತ್ತದೆ. ಅಲ್ಲದೇ ಇದರಿಂದ ನಮ್ಮ ಜನಾಂಗದ ಆರ್ಥಿಕ ಅಭಿವೃದ್ದಿಗೆ ಸಾಧ್ಯವಾಗಬಹುದು ಎಂಬುದನ್ನು ನಾವು ಅರಿತಿದ್ದೇವೆ. ಈ ಕ್ರೀಯಾಶೀಲ ಸಂಘಟಕರೊಂದಿಗೆ ಅವರ ಸಹಯೋಗದೊಂದಿಗೆ ಸಂಘಟನೆಯನ್ನು ಸ್ಥಾಪಿಸಲು ಯುವ ಜನಾಂಗಕ್ಕೆ ಆದ್ಯತೆ ನೀಡುತ್ತೇವೆ. ಮುಖ್ಯವಾಗಿ ರಾಜ್ಯದಲ್ಲಿ ಭ್ರಷ್ಟಾಚಾರ ನಿರ್ಮೂಲನೆಗೆ ಮೊಟ್ಟ ಮೊದಲು ಆದ್ಯತೆ ನೀಡಲಾಗುವದೆಂದರು.ಈ ವೇಳೆ ರಾಜ್ಯ ಸಮಿತಿ ಪದಾಧಿಕಾರಿಗಳ ಪಟ್ಟಿಯನ್ನು ಅಧ್ಯಕ್ಷ ಬಸವರಾಜ ಕಟ್ಟಿಮನಿ ಬಿಡುಗಡೆ ಗೊಳಿಸಿದರು. ಭೀಮು ಚವನಭಾವಿ ಸಂಘಟನೆಯ ಕಾರ್ಯಚಟುವಟಿಕೆಗಳ ಕುರಿತು ಮಾತನಾಡಿದರು. ಪರಶುರಾಮ ಚಲವಾದಿ ಸ್ವಾಗತಿಸಿ, ವಂದಿಸಿದರು.

ಬಾಕ್ಸ್‌

ಸಂಘಟನೆಯ ಪದಾಧಿಕಾರಿಗಳುದಲಿತ ಸೇವಾ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿಯನ್ನಾಗಿ ಅಶೋಕ ಚಲವಾದಿ, ರಾಜ್ಯ ಉಪಾಧ್ಯಕ್ಷರಾಗಿ ಶಿವಶಂಕರ ಕಟ್ಟಿಮನಿ, ಸಿದ್ದಪ್ಪ ಹೊಸಮನಿ, ರಾಜ್ಯ ಖಜಾಂಚಿ ಎಸ್.ಸಿ.ಕೊಡಗಾನೂರ, ರಾಜ್ಯ ಕಾರ್ಯದರ್ಶಿಯಾಗಿ ಸಂಜೀವಕುಮಾರ ಕಟ್ಟಿಮನಿ, ರಾಜ್ಯ ಸಮಿತಿ ಸದಸ್ಯರನ್ನಾಗಿ ಸಿದ್ದಪ್ಪ ಬಸರಿಕಟ್ಟಿ, ಬಸವರಾಜ ತಳವಾರ, ಸದಾಶಿವ ತಳವಾರ ಅವರನ್ನು ನೇಮಕ ಮಾಡಲಾಗಿದೆ.