ಸಾರಾಂಶ
ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ವ್ಯವಸ್ಥಿತವಾಗಿ ನಡೆಯುತ್ತಿರುವಂತಹ ಸಂಚು, ಮತ್ತು ಕ್ಷೇತ್ರದ ಧರ್ಮಾಧಿಕಾರಿ ವಿರುದ್ಧ ನಡೆಯುವಂತಹ ಅಪಪ್ರಚಾರ ವಿರೋಧಿಸಿ ಮೂಲ್ಕಿ ಸೀಮೆಯ ಅರಸ ಶ್ರೀ ದುಗ್ಗಣ್ಣ ಸಾವಂತರ ಅಧ್ಯಕ್ಷತೆಯಲ್ಲಿ ಅರಮನೆಯ ಧರ್ಮ ಚಾವಡಿಯಲ್ಲಿ ಸಭೆ ನಡೆಯಿತು.
ಕನ್ನಡಪ್ರಭ ವಾರ್ತೆ ಮೂಲ್ಕಿ
ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ವ್ಯವಸ್ಥಿತವಾಗಿ ನಡೆಯುತ್ತಿರುವಂತಹ ಸಂಚು, ಮತ್ತು ಕ್ಷೇತ್ರದ ಧರ್ಮಾಧಿಕಾರಿ ವಿರುದ್ಧ ನಡೆಯುವಂತಹ ಅಪಪ್ರಚಾರ ವಿರೋಧಿಸಿ ಮೂಲ್ಕಿ ಸೀಮೆಯ ಅರಸ ಶ್ರೀ ದುಗ್ಗಣ್ಣ ಸಾವಂತರ ಅಧ್ಯಕ್ಷತೆಯಲ್ಲಿ ಅರಮನೆಯ ಧರ್ಮ ಚಾವಡಿಯಲ್ಲಿ ಸಭೆ ನಡೆಯಿತು.ದೇವಸ್ಥಾನದ ಆಡಳಿತ ಸಮಿತಿ, ಭಜನಾ ಮಂಡಳಿ ಸಮಿತಿ, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡರು.
ಈ ಸಭೆಯಲ್ಲಿ ಕ್ಷೇತ್ರಕ್ಕೆ ಮತ್ತು ಧರ್ಮಾಧಿಕಾರಿಗೆ ನೈತಿಕ ಬೆಂಬಲ ನೀಡುವ , ಪರವಾಗಿ ಹೊಯ್ಗೆಗುಡ್ಡೆ ಶ್ರೀ ಉಮಾಮಹೇಶ್ವರಿ ದೇವಸ್ಥಾನದ ಮೊಕ್ತೇಸರ ರಾಮ ಭಟ್, ಸಸಿಹಿತ್ಲು ಶ್ರೀ ಸಾರಂತಾಯ ಗರಡಿಯ ಸಮಿತಿಯ ಪದಾಧಿಕಾರಿ ಪರಮಾನಂದ ಸಾಲಿಯನ್, ಪ್ರಿಯದರ್ಶಿನಿ ಕೋಪರೇಟಿವ್ ಸೊಸೈಟಿ ಅಧ್ಯಕ್ಷ ವಸಂತ್ ಬರ್ನಾಡ್ ಮತ್ತಿತರರು ಕ್ಷೇತ್ರದ ಬಗ್ಗೆ ಇರುವ ಅಪಾರ ನಂಬಿಕೆ ಮತ್ತು ಶ್ರೀ ಕ್ಷೇತ್ರದಿಂದ ನಡೆಯುವಂತಹ ಜನಪರ ಕೆಲಸಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಸಭೆಯಲ್ಲಿ ಪಾವಂಜೆ ದೇವಾಡಿಗ ಸಮಾಜ ಸೇವಾ ಸಂಘದ ಅಧ್ಯಕ್ಷ ಅಣ್ಣಪ್ಪ ದೇವಾಡಿಗ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಒಕ್ಕೂಟದ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ ಚೇಳಾಯರು, ಬೆಳ್ಳಾಯರು ಚಂದ್ರಮೌಳೇಶ್ವರ ದೇವಸ್ಥಾನದ ಪ್ರತಿನಿಧಿ ಪ್ರವೀಣ್ ಶೆಟ್ಟಿ, ಶಶಿ ಕೊಲ್ನಾಡು, ಕಲ್ಲಾಪು ಶ್ರೀ ವೀರಭದ್ರ ಮಹಾಮಾಯಿ ದೇವಸ್ಥಾನದ ಕರುಣಾಕರ ಶೆಟ್ಟಿಗಾರ್ , ಪಾವಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಸಮಿತಿಯ ಸುಭಾಸ್ ಸಸಿಹಿತ್ಲು , ಊರ ಪರ ಊರ ಸದಸ್ಯರು ಇದ್ದರು. ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷ ವಿನೋದ್ ಸಾಲಿಯನ್ ಬೆಳ್ಳಾಯರು ಸ್ವಾಗತಿಸಿ ವಂದಿಸಿದರು.