ಸಂಘಟನೆಗಳು ಸಾಮಾಜಿಕ ಜವಾಬ್ದಾರಿ ಅರಿಯಬೇಕು: ಶ್ರೀ

| Published : Jul 06 2024, 12:52 AM IST

ಸಾರಾಂಶ

ಹೊಸಕೋಟೆ: ದೇಶದ ಅಭಿವೃದ್ಧಿಯಲ್ಲಿ ಸಂಘಟನೆಗಳ ಪಾತ್ರ ಕೂಡ ಅತ್ಯಗತ್ಯವಾಗಿದೆ. ಸಾಮಾಜಿಕ ಜವಾಬ್ದಾರಿ ಅರಿತು ಸಂಘಟನೆಗಳು ಕೆಲಸ ಮಾಡಬೇಕು ಎಂದು ವಿಜಯಪುರ ಬಸವ ಕಲ್ಯಾಣ ಮಠದ ಮಠಾಧೀಶ ಮಹದೇವ ಸ್ವಾಮೀಜಿ ತಿಳಿಸಿದರು.

ಹೊಸಕೋಟೆ: ದೇಶದ ಅಭಿವೃದ್ಧಿಯಲ್ಲಿ ಸಂಘಟನೆಗಳ ಪಾತ್ರ ಕೂಡ ಅತ್ಯಗತ್ಯವಾಗಿದೆ. ಸಾಮಾಜಿಕ ಜವಾಬ್ದಾರಿ ಅರಿತು ಸಂಘಟನೆಗಳು ಕೆಲಸ ಮಾಡಬೇಕು ಎಂದು ವಿಜಯಪುರ ಬಸವ ಕಲ್ಯಾಣ ಮಠದ ಮಠಾಧೀಶ ಮಹದೇವ ಸ್ವಾಮೀಜಿ ತಿಳಿಸಿದರು.

ನಗರದ ಸರ್ಕಾರಿ ಆಸ್ಪತ್ರೆ ವೃತ್ತದ ಬಳಿ ಜಾಂಭವ ಯುವ ಸೇನೆಯ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಶ್ರೀಗಳು,

ಪ್ರಸ್ತುತ ದೇಶದಲ್ಲಿ ಹಲವಾರು ಕ್ಷೇತ್ರಗಳಲ್ಲಿ ನ್ಯಾಯ ಸಿಗದೆ ಪರಿತಪಿಸುವ ಜನರು ಹೆಚ್ಚಿದ್ದಾರೆ. ಅಂತಹವರ ಬದುಕಿಗೆ ಧ್ವನಿಯಾಗುವ ಕೆಲಸ ಸಂಘಟನೆಗಳು ಮಾಡಬೇಕು. ಜಾಂಭವ ಯುವ ಸೇನೆ ರಾಜ್ಯದಲ್ಲಿ ನೊಂದ ದಲಿತರ ಬದುಕಿಗೆ ಆಸರೆಯಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಘಟನೆ ಶಾಖೆಗಳನ್ನು ತೆರೆದು ಹೋರಾಟದ ಹಾದಿಯ ಮೂಲಕ ಸಮಾಜದ ಉನ್ನತಿಗೆ ಶ್ರಮಿಸುತ್ತಿರವುದು ಶ್ಲಾಘನೀಯ ಎಂದು ಹೇಳಿದರು.

ಜಾಂಭವ ಯುವಸೇನೆ ಸಂಘಟನೆ ರಾಜ್ಯಾಧ್ಯಕ್ಷ ಡಾ.ರಮೇಶ್ ಚಕ್ರವರ್ತಿ ಮಾತನಾಡಿ, ನಮ್ಮ ಸಂಘಟನೆ ಹೋರಾಟದ ಜತೆ ಸಮಾಜ ಸೇವೆಯಲ್ಲೂ ನಿರಂತರವಾಗಿ ತೊಡಗಿಸಿಕೊಂಡಿದ್ದು ನಗರದಲ್ಲಿ ೫೦೦ ಮಕ್ಕಳಿಗೆ ಕಲಿಕಾ ಸಾಮಗ್ರಿ ಹಾಗೂ ನಗರಸಭೆ ಪೌರ ಕಾರ್ಮಿಕರಿಗೆ ಸೀರೆ ವಿತರಣೆ ಮಾಡಲಾಗಿದೆ ಎಂದು ಹೇಳಿದರು.

ಕಚೇರಿ ಉದ್ಘಾಟನೆ ಬಳಿಕ ಶ್ರೀ ಮಹದೇವ ಸ್ವಾಮೀಜಿ ಅವರನ್ನು ಬೆಳ್ಳಿ ಪಲ್ಲಕ್ಕಿಯಲ್ಲಿ ನಗರದ ಕೆಇಬಿ ವೃತ್ತದಿಂದ ತಾಲೂಕು ಕಚೇರಿವರೆಗೆ ಮೆರವಣಿಗೆ ಮಾಡಲಾಯಿತು. ಬಳಿಕ ಜಿಕೆಬಿಎಂಎಸ್ ಶಾಲೆ ಆವರಣದಲ್ಲಿ ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಿಸಲಾಯಿತು.

ಬಿಎಸ್‌ಎಸ್ ರಾಷ್ಟ್ರೀಯ ಅಧ್ಯಕ್ಷ ಹೂಡಿ ಚಿನ್ನಿ, ರಾಜ್ಯಾಧ್ಯಕ್ಷ ಚಿಂತಾಮಣಿ ಅಮರ್, ಪುರಸಭೆ ಮಾಜಿ ಅಧ್ಯಕ್ಷ ಎಂ.ಮೂರ್ತಿ, ಮುಖಂಡ ದೊಡ್ಡಹುಲ್ಲೂರು ನಾರಾಯಣಸ್ವಾಮಿ, ಸಾಲುಮರದ ತಿಮ್ಮಕ್ಕನವರ ಪುತ್ರ ಉಮೇಶ್, ಅಂಬೇಡ್ಕರ್ ಮೂಲ ನಿವಾಸಿ ಸಂಘದ ರಾಜ್ಯಾಧ್ಯಕ್ಷ ಮುನಿಮಾರಪ್ಪ, ಯುವ ಘಟಕದ ಅಧ್ಯಕ್ಷ ಮುನಿರಾಜ್, ಚಂದ್ರಾಸ್, ಚಂದ್ರಶೇಖರ್ ಕ್ಯಾಲಸನಹಳ್ಳಿ, ಆನಂದ್, ಗುಬ್ಬಿಲೋಕಿ, ಕೋಲಾರ ಶ್ರೀನಿವಾಸ್, ಜಾಂಭವ ಯುವಸೇನೆ ರಾಜ್ಯಾಧ್ಯಕ್ಷ ರಮೇಶ್ ಚಕ್ರವರ್ತಿ, ಉಪಾಧ್ಯಕ್ಷ ಮಲ್ಕಪ್ಪ ಬಾಗೇವಾಡಿ, ಬೆಳಗಾವಿ ಅಧ್ಯಕ್ಷ ರವಿ, ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಶ್ರೀನಿವಾಸ್, ಗುಲ್ಬರ್ಗ ಜಿಲ್ಲಾಧ್ಯಕ್ಷ ಪರಶುರಾಮ್, ಬೀದರ್ ಜಿಲ್ಲಾಧ್ಯಕ್ಷ ಪೀಟರ್ ಸೇರಿ ಹಲವರು ಹಾಜರಿದ್ದರು.

ಫೋಟೋ: 5 ಹೆಚ್‌ಎಸ್‌ಕೆ 1 ಮತ್ತು 2

1: ಹೊಸಕೋಟೆಯಲ್ಲಿ ನಡೆದ ಜಾಂಭವ ಯುವಸೇನೆ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿಜಯಪುರ ಬಸವ ಕಲ್ಯಾಣ ಮಠದ ಮಹದೇವ ಸ್ವಾಮೀಜಿ ಅವರನ್ನು ಬೆಳ್ಳಿ ಪಲ್ಲಕ್ಕಿಯಲ್ಲಿ ಮೆರವಣಿಗೆ ನಡೆಸಲಾಯಿತು.

2: ಜಾಂಭವ ಯುವಸೇನೆ ಕಚೇರಿಯಲ್ಲಿ ಸಂಘಟನೆ ರಾಜ್ಯಾಧ್ಯಕ್ಷ ರಮೇಶ್ ಚಕ್ರವರ್ತಿ ಮಹದೇವ ಸ್ವಾಮೀಜಿ ಅವರನ್ನು ಅಭಿನಂದಿಸಿದರು.