ಸಾರಾಂಶ
ಸದಸ್ಯತ್ವ ಅಭಿಯಾನಕ್ಕೆ ಎಲ್ಲ ವಾರ್ಡ್‌ಗಳ ಹಾಲಿ ಮತ್ತು ಮಾಜಿ ಸದಸ್ಯರು, ಪ್ರಮುಖರು ಹಾಗೂ ಬೂತ್ ಮಟ್ಟದ ಕಾರ್ಯಕರ್ತರು ಸಹಕಾರ ನೀಡಬೇಕು.
ಕನ್ನಡಪ್ರಭ ವಾರ್ತೆ ಯಾದಗಿರಿ
ಬಿಜೆಪಿ ಯುವ ಮೋರ್ಚಾ ವತಿಯಿಂದ ಬಿಜೆಪಿ ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮದ ಅಂಗವಾಗಿ ನಗರದ ವಾರ್ಡ್ ನಂ. 9, 10 ಮತ್ತು 11ರಲ್ಲಿ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಶ್ರೀಧರ್ ರಾಯಚೂರಕರ್, ನಗರಸಭೆ ಮಾಜಿ ಉಪಾಧ್ಯಕ್ಷೆ ಪ್ರಭಾವತಿ ಕಲಾಲ ಮತ್ತು ಕಾರ್ಯಕರ್ತರು ಪ್ರತಿ ಮನೆ ಮನೆಗೆ ತೆರಳಿ ಸದಸ್ಯತ್ವ ನೋಂದಣಿ ಮಾಡಿಸಿದರು.ಯುವ ಮೋರ್ಚಾ ಜಿಲ್ಲಾಧ್ಯಕ್ಷ ಶ್ರೀಧರ್ ರಾಯಚೂರಕರ್ ಮಾತನಾಡಿ, ಸದಸ್ಯತ್ವ ಅಭಿಯಾನಕ್ಕೆ ಎಲ್ಲ ವಾರ್ಡ್‌ಗಳ ಹಾಲಿ ಮತ್ತು ಮಾಜಿ ಸದಸ್ಯರು, ಪ್ರಮುಖರು ಹಾಗೂ ಬೂತ್ ಮಟ್ಟದ ಕಾರ್ಯಕರ್ತರು ಸಹಕಾರ ನೀಡಬೇಕು. ಸದಸ್ಯತ್ವ ಅಭಿಯಾನದ ಮೂಲಕ ಪಕ್ಷ ಸಂಘಟಿಸಿ, ನಾಯಕತ್ವ ಬೆಳೆಸಬೇಕು. ಬೂತ್‌ನಲ್ಲಿ ಪ್ರತಿ ಮನೆ ಮನೆಗೆ ತಲುಪುವ ಮೂಲಕ ನಗರದಲ್ಲಿ ಅತೀ ಹೆಚ್ಚು ಸದಸ್ಯರನ್ನು ನೋಂದಾಯಿಸಿ ಸದಸ್ಯತ್ವ ಅಭಿಯಾನ ಯಶಸ್ವಿಗೊಳಿಸಬೇಕು ಎಂದರು.
ನಗರಸಭೆ ಮಾಜಿ ಉಪಾಧ್ಯಕ್ಷೆ ಪ್ರಭಾವತಿ ಕಲಾಲ ಮಾತನಾಡಿ, ಬಿಜೆಪಿ ಅತೀ ಹೆಚ್ಚು ಕಾರ್ಯಕರ್ತರ ಪಡೆ ಹೊಂದಿದೆ. ವ್ಯಕ್ತಿಗಿಂತ ಪಕ್ಷ, ಪಕ್ಷಕ್ಕಿಂತ ದೇಶ ದೊಡ್ಡದು ಎಂಬ ಭಾವನೆ ಬಿಜೆಪಿ ಹೊಂದಿದೆ. ಸದಸ್ಯತ್ವ ಅಭಿಯಾನಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದರು.ಸದಸ್ಯತಾ ಅಭಿಯಾನದ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಮಲ್ಲು ಕೋಲಿವಾಡ, ಮಂಜುನಾಥ್ ಗುತ್ತೇದಾರ, ಯುವ ಮಾಜಿ ಜಿಲ್ಲಾಧ್ಯಕ್ಷ ಮೌನೇಶ್ ಬೆಳಗೇರಾ, ವಿಕಾಸ್ ಚವ್ಹಾಣ, ಮಲ್ಲು ಅಂಬಿಗೇರ, ಖಂಡು ಪಾಮಳ್ಳಿ, ಶ್ರೀನಿವಾಸ ಮ್ಯಾಳಗಿ, ಸಾಬರೆಡ್ಡಿ ಮ್ಯಾಳಗಿ, ಭೀಮು ಚಿಂತನಹಳ್ಳಿ, ಮುತ್ತುರಾಜ ಕುಂಬಾರ, ಮಲ್ಲು, ಮಹೇಶ, ಸೇರಿದಂತೆ ಇತರರಿದ್ದರು.