ಕನ್ನಡಪ್ರಭ ವಾರ್ತೆ ಬಾಗಲಕೋಟೆ ಅನಾಥ ಮಕ್ಕಳೂ ಯಾವುದೇ ಕೊರತೆ ಬಾರದಂತೆ ಸಮಾಜದಲ್ಲಿ ಬದುಕಿ ಬಾಳಬೇಕು. ಅವರಿಗಾಗಿ ಬಾಗಲಕೋಟೆಯ ಆಶ್ರಯಧಾಮ ಆಶ್ರಯ ಕಲ್ಪಿಸಿದೆ. ಆದರೆ, ಅದು ದಾನಿಗಳಿಂದಲೇ ನಡೆಯುತ್ತದೆ. ಹೀಗಾಗಿ, ಆಶ್ರಯಧಾಮದ ಐದು ಜನ ಅನಾಥ ಮಕ್ಕಳನ್ನು ಶೈಕ್ಷಣಿಕ ದತ್ತು ಪಡೆದು, ಅವರಿಗೆ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ರೋಟರಿ ಕ್ಲಬ್ ನೂತನ ಅಧ್ಯಕ್ಷ ವಿಜಯಕುಮಾರ ಹೊಸುರ ಹೇಳಿದರು
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಅನಾಥ ಮಕ್ಕಳೂ ಯಾವುದೇ ಕೊರತೆ ಬಾರದಂತೆ ಸಮಾಜದಲ್ಲಿ ಬದುಕಿ ಬಾಳಬೇಕು. ಅವರಿಗಾಗಿ ಬಾಗಲಕೋಟೆಯ ಆಶ್ರಯಧಾಮ ಆಶ್ರಯ ಕಲ್ಪಿಸಿದೆ. ಆದರೆ, ಅದು ದಾನಿಗಳಿಂದಲೇ ನಡೆಯುತ್ತದೆ. ಹೀಗಾಗಿ, ಆಶ್ರಯಧಾಮದ ಐದು ಜನ ಅನಾಥ ಮಕ್ಕಳನ್ನು ಶೈಕ್ಷಣಿಕ ದತ್ತು ಪಡೆದು, ಅವರಿಗೆ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ರೋಟರಿ ಕ್ಲಬ್ ನೂತನ ಅಧ್ಯಕ್ಷ ವಿಜಯಕುಮಾರ ಹೊಸುರ ಹೇಳಿದರು.ವಿದ್ಯಾಗಿರಿಯ ಬಾಲಾಜಿ ಮಂದಿರದಲ್ಲಿ ರೋಟರಿ ಕ್ಲಬ್‌ನ 2026-27ನೇ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ ಅವರು, ಆಶ್ರಯಧಾಮದಲ್ಲಿ ಒಟ್ಟು 20 ಅನಾಥ ಮಕ್ಕಳು ಆಶ್ರಯ ಪಡೆದಿದ್ದಾರೆ. ಒಂದು ಮಗುವಿನ ಒಂದು ವರ್ಷದ ಶೈಕ್ಷಣಿಕ ಮತ್ತು ಇತರೆ ವೆಚ್ಚ ₹ 25 ಸಾವಿರ ತಗಲುತ್ತದೆ. ರೋಟರಿ ಕ್ಲಬ್‌ನಿಂದ ಆರಂಭದಲ್ಲಿ ಐದು ಮಕ್ಕಳ ದತ್ತು ಪಡೆದು, ₹ 1.25 ಲಕ್ಷ ಆರ್ಥಿಕ ನೆರವು ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮಕ್ಕಳ ದತ್ತು ಪಡೆದು, ಶಿಕ್ಷಣಕ್ಕೆ ಉತ್ತೇಜನ ನೀಡಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.ಜಿಲ್ಲೆಯ ನಿರುದ್ಯೋಗಿ ಯುವಕ-ಯುವತಿಯರಿಗಾಗಿ ಬೃಹತ್ ಉದ್ಯೋಗ ಮೇಳ, ಅರಣ್ಯ ಇಲಾಖೆಯ ನೆರವಿನೊಂದಿಗೆ 100 ವಿವಿಧ ಸಸಿ ನೆಡುವುದು, ಆರ್ಥಿಕವಾಗಿ ಹಿಂದುಳಿದ ಒಬ್ಬ ಡಯಾಲಿಸಿಸ್ ರೋಗಿಗೆ ಚಿಕಿತ್ಸೆಗೆ ಆರ್ಥಿಕ ನೆರವು, ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ, ತಾಯಂದಿರರಿಗೆ ಪೌಷ್ಠಿಕ ಆಹಾರ ಪದ್ಧತಿ, ಹಿರಿಯ ನಾಗರಿಕರಿಗೆ ಆರೋಗ್ಯ ಶಿಬಿರ, ಸ್ವಚ್ಛ ಭಾರತಕ್ಕಾಗಿ ಜಾಗೃತಿ ಕಾರ್ಯಕ್ರಮ ಹೀಗೆ ಹಲವು ಸೇವಾ ಕಾರ್ಯ ನಡೆಸಲಾಗುವುದು ಎಂದು ತಿಳಿಸಿದರು.ಮುಖ್ಯ ಅತಿಥಿಯಾಗಿದ್ದ ಬಿವಿವಿ ಸಂಘದ ಆಡಳಿತಾಧಿಕಾರಿ ಡಾ.ವಿಜಯಕುಮಾರ ಕಟಗಿಹಳ್ಳಿಮಠ ಮಾತನಾಡಿ, ರೋಟರಿ ಕ್ಲಬ್‌ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಆದ ಖ್ಯಾತಿ ಇದೆ. ಪೊಲೀಯೋ ಮುಕ್ತ ಭಾರತಕ್ಕಾಗಿ ರೋಟರಿ ಕ್ಲಬ್ ಸಲ್ಲಿಸಿದ ಸೇವೆ ಅವಿಸ್ಮರಣೀಯ. ಜಿಲ್ಲೆಯಲ್ಲೂ ಕ್ಲಬ್ ಅತ್ಯುತ್ತಮ ಸೇವೆ ಸಲ್ಲಿಸುತ್ತಿದೆ. ಈ ಬಾರಿ ಅನಾಥ ಮಕ್ಕಳನ್ನು ಶೈಕ್ಷಣಿಕ ದತ್ತು ಪಡೆದಿರುವುದು ಅತ್ಯಂತ ಶ್ಲಾಘನೀಯ ಕಾರ್ಯ ಎಂದರು.ರೋಟರಿ ಕ್ಲಬ್ ಶಾಸನ ಸಭೆಯ ಜಿಲ್ಲೆಯ ಪ್ರತಿನಿಧಿ ಡಾ.ಪ್ರಾಣೇಶ ಜಹಾಗೀರದಾರ, ನೂತನ ಅಧ್ಯಕ್ಷ ವಿಜಯಕುಮಾರ ಹೊಸೂರ, ಕಾರ್ಯದರ್ಶಿ ಡಾ.ಅವಿನಾಶ ಕಟ್ಟಿಮನಿ, ಖಜಾಂಚಿ ತುಕಾರಾಮ ಟಿ.ಎನ್ ಹಾಗೂ ಪದಾಧಿಕಾರಿಗಳಿಗೆ ಸೇವಾ ದೀಕ್ಷೆ ನೀಡಿದರು. ಇದೇ ವೇಳೆ ಪತ್ರಿಕಾ ದಿನಾಚರಣೆ ಅಂಗವಾಗಿ ಪತ್ರಕರ್ತರಾದ ಜಗದೀಶ ಗಾಣಗೇರ, ಮಂಜುನಾಥ ತಳವಾರ, ವೈದ್ಯರ ದಿನಾಚರಣೆ ಅಂಗವಾಗಿ ಡಾ.ಕುಸುಮಾ ಮಾಗಿ, ಡಾ.ರಜನಿ ಪಾಟೀಲ, ಡಾ.ನಿವೇದಿತಾ ಭಾವಿ, ಡಾ.ಬಸವೇಶ ಪಾಟೀಲ, ಡಾ.ಬಾಲಚಂದ್ರ ಅಂಕದ ಹಾಗೂ ಲೆಕ್ಕ ಪರಿಶೋಧಕರ ದಿನಾಚರಣೆ ಅಂಗವಾಗಿ ಶಿವಯ್ಯ ಎಮ್ಮಿ, ವಿಕಾಶ ತಿಪಶೆಟ್ಟಿ ಅವರನ್ನು ರೋಟರಿ ಕ್ಲಬ್‌ನಿಂದ ಸನ್ಮಾನಿಸಲಾಯಿತು.ರೋಟರಿ ಕ್ಲಬ್ ಸಹಾಯಕ ಗವರ್ನರ್ ಡಾ.ಕಿರಣ ಜಾಲಿಹಾಳ, ನಿಕಟಪೂರ್ವ ಅಧ್ಯಕ್ಷ ಮಲ್ಲಿಕಾರ್ಜುನ ಹದ್ಲಿ, ಡಾ.ಗಿರೀಶ ಮಸೂರಕರ, ನಾರಾಯಣ ಹೆರಕಲ್, ಸಂತೋಷ ಪಾಟೀಲ, ಪ್ರಕಾಶ ಭೂತಲ, ಮಲ್ಲಿನಾಥ ಹಿರೇಮಠ, ಮಹಾದೇವ ದಂಧರಗಿ, ಮಲ್ಲನಗೌಡ ಪಾಟೀಲ, ವಿಜಯ ಬುರಲಿ, ಚಂದ್ರಶೇಖರ ಕಟಗೇರಿ, ಎಸ್.ಕೆ.ಯಡಹಳ್ಳಿ, ಡಾ.ಪ್ರಲ್ಹಾದ ಹುಯಿಲ್ಗೋಳ, ಶ್ರೀಧರ ದಾಸ, ಶಿವಕುಮಾರ ನಂದಿಕೋಲಮಠ, ಬಸವರಾಜ ಪರ್ವತಿಮಠ, ರವಿ ಪಾಟೀಲ, ಡಾ.ಬಸವರಾಜ ಕಡಿವಾಲ, ಸಂತೋಷ ನಾವಲಗಿ, ವಿಶ್ವನಾಥ ವೈಜಾಪುರ ಮುಂತಾದವರು ಉಪಸ್ಥಿತರಿದ್ದರು.---------ಕೋಟ್‌ರೋಟರಿ ಕ್ಲಬ್, ಒಂದು ಅಂತಾರಾಷ್ಟ್ರೀಯ ಸೇವಾ ಸಂಸ್ಥೆಯಾಗಿದೆ. ಈ ಕ್ಲಬ್ ಮೂಲಕ ಸಾಮಾಜಿಕ ಸೇವೆ ಸಲ್ಲಿಸಲು ನನಗೊಂದು ಅವಕಾಶ ಸಿಕ್ಕಿದೆ. ಎಲ್ಲ ಪದಾಧಿಕಾರಿಗಳು, ಸದಸ್ಯರು ಸೇರಿ ಸಮಾಜಮುಖಿ ಕಾರ್ಯವನ್ನು ಮುಂದುವರಿಸುತ್ತೇವೆ. ನಮ್ಮ ಅವಧಿಯಲ್ಲಿ 21ಕ್ಕೂ ಅಧಿಕ ಸಮಾಜ ಸೇವಾ ಕಾರ್ಯ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.ವಿಜಯಕುಮಾರ ಹೊಸೂರ, ರೋಟರಿ ಕ್ಲಬ್ ನೂತನ ಅಧ್ಯಕ್ಷ