ಸಾರಾಂಶ
ಬಾದಾಮಿ: ಈಗಿರುವ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ನಾವು ಮಾಡಿದ್ದಲ್ಲ. ಬ್ರಿಟಿಷರು ಮಾಡಿದ ಶಿಕ್ಷಣ ವ್ಯವಸ್ಥೆಯನ್ನು 75 ವರ್ಷಗಳಿಂದ ಮುಂದುರಿಸಿಕೊಂಡು ಹೊರಟಿದ್ದಾರೆ ಎಂದು ಗದಗ ವಿಜಯಪೂರ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಹೇಳಿದರು. ಭಾನುವಾರ ವಿಶ್ವಚೇತನ ಸಂಸ್ಥೆ ವತಿಯಿಂದ ನಗರದ ಶಿವಯೋಗಮಂದಿರ ಶಾಖಾಮಠದ ಆವರಣದಲ್ಲಿ ಹಮ್ಮಿಕೊಂಡಿದ್ದ ನಮ್ಮ ಭವ್ಯ ಭಾರತ ಉಪನ್ಯಾಸ ನೀಡಿದರು. ಅಮೆರಿಕದವರು ಪ್ರಜ್ಞಾವಂತರಾಗುವುದಕ್ಕೆ ಮತ್ತು ಭಾರತೀಯರು ಪ್ರಜ್ಞಾಹೀನರಾಗುವುದಕ್ಕೆ ಅನೇಕ ಕಾರಣಗಳಿವೆ ಎಂದರು.
ಕನ್ನಡಪ್ರಭ ವಾರ್ತೆ ಬಾದಾಮಿ
ಈಗಿರುವ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ನಾವು ಮಾಡಿದ್ದಲ್ಲ. ಬ್ರಿಟಿಷರು ಮಾಡಿದ ಶಿಕ್ಷಣ ವ್ಯವಸ್ಥೆಯನ್ನು 75 ವರ್ಷಗಳಿಂದ ಮುಂದುರಿಸಿಕೊಂಡು ಹೊರಟಿದ್ದಾರೆ ಎಂದು ಗದಗ ವಿಜಯಪೂರ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.ಭಾನುವಾರ ವಿಶ್ವಚೇತನ ಸಂಸ್ಥೆ ವತಿಯಿಂದ ನಗರದ ಶಿವಯೋಗಮಂದಿರ ಶಾಖಾಮಠದ ಆವರಣದಲ್ಲಿ ಹಮ್ಮಿಕೊಂಡಿದ್ದ ನಮ್ಮ ಭವ್ಯ ಭಾರತ ಉಪನ್ಯಾಸ ನೀಡಿದರು. ಅಮೆರಿಕದವರು ಪ್ರಜ್ಞಾವಂತರಾಗುವುದಕ್ಕೆ ಮತ್ತು ಭಾರತೀಯರು ಪ್ರಜ್ಞಾಹೀನರಾಗುವುದಕ್ಕೆ ಅನೇಕ ಕಾರಣಗಳಿವೆ. ನಮ್ಮಲ್ಲಿರುವ ಅರ್ಥಹೀನ ವ್ಯವಸ್ಥೆ ಬೇರೆ ಯಾವ ದೇಶದಲ್ಲೂ ಇಲ್ಲ ಎಂದರು.
ಈ ದೇಶವನ್ನು ಉದ್ಧಾರವಾಗುವುದಕ್ಕೆ ಬಿಡಬಾರದು ಎಂದು ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಇವರು ಏಳಿಗೆ ಆಗಬಾರದು ಎಂದು ಹಳೆಯ ಶಿಕ್ಷಣ ವ್ಯವಸ್ಥೆ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಎಲ್ಲ ಸಾಹಿತಿಗಳು ವಿಜ್ಞಾನ ವಿಷಯ ಓದಿಲ್ಲ. ಎಲ್ಲರೂ ಕಲಾ ವಿಭಾಗ ಓದಿದವರು. ಯಾರೂ ಪುಸ್ತಕ ಓದುವ ಗೋಜಿಗೆ ಹೋಗುವುದಿಲ್ಲ. ಇಂದು ಹೇಳುವ ಇತಿಹಾಸದ ಪಾಠದಲ್ಲಿ ನಮ್ಮ ಭಾರತದ ಸೋಲಿನ ನಕಾರಾತ್ಮಕ ಭಾವನೆ ಮಕ್ಕಳಲ್ಲಿ ಬಿಂಬಿಸುತ್ತೇವೆ. ಅದೇ ಬೇರೆ ದೇಶದಲ್ಲಿ ನಮ್ಮ ದೇಶದ ಬಗ್ಗೆ ಒಳ್ಳೆಯ ಭಾವನೆ ಪಾಠ ಹೇಳುತ್ತಾರೆ. ನಮ್ಮ ದೇಶದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.ಸಂಸ್ಥೆಯ ಕಾರ್ಯದರ್ಶಿ ಇಷ್ಟಲಿಂಗ ಶಿರಶಿ ಸ್ವಾಗತಿಸಿದರು. ಉಜ್ವಲ ಬಸರಿ ನಿರೂಪಿಸಿ ವಂದಿಸಿದರು.ನಮ್ಮ ರಾಮಕೃಷ್ಣ ಆಶ್ರಮ ಯಾವುದೇ ರಾಜಕೀಯ ಪಕ್ಷದ ಸಂಬಂಧ ಹೊಂದಿಲ್ಲ. ನಮ್ಮಲ್ಲಿ ಪಕ್ಷಾತೀತವಾಗಿದೆ. ಸಂಸ್ಥೆಯ ಬಗ್ಗೆ ನಾವು ಇದ್ದದ್ದನ್ನು ಹೇಳುತ್ತೇವೆ
-ಶ್ರೀ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ, ರಾಮಕೃಷ್ಣ ಆಶ್ರಮ.