ನಮ್ಮ ಸರ್ಕಾರ ಶಿಕ್ಷಣಕ್ಕೆ ಹುಚ್ಚು ಅನುದಾನ ಒದಗಿಸುತ್ತಿದೆ

| Published : Oct 20 2024, 01:50 AM IST

ನಮ್ಮ ಸರ್ಕಾರ ಶಿಕ್ಷಣಕ್ಕೆ ಹುಚ್ಚು ಅನುದಾನ ಒದಗಿಸುತ್ತಿದೆ
Share this Article
  • FB
  • TW
  • Linkdin
  • Email

ಸಾರಾಂಶ

ಹಿರಿಯೂರು: ನಾನು ಶಾಸಕನಾಗಿದ್ದಾಗಲೆಲ್ಲಾ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಾ ಬಂದಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.

ಹಿರಿಯೂರು: ನಾನು ಶಾಸಕನಾಗಿದ್ದಾಗಲೆಲ್ಲಾ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಾ ಬಂದಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.

ನಗರದ ವೇದಾವತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕ್ರೀಡೆ, ಸಾಂಸ್ಕೃತಿಕ, ರಾಷ್ಟ್ರೀಯ ಸೇವಾ ಯೋಜನೆ, ಯೂತ್ ರೆಡ್ ಕ್ರಾಸ್, ರೋವರ್ಸ್ ಮತ್ತು ರೇoಜರ್ಸ್ ಚಟುವಟಿಕೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತಾಲೂಕಿನಲ್ಲಿ ತೋಟಗಾರಿಕೆ ಕಾಲೇಜು ಸೇರಿದಂತೆ, ಐಮಂಗಲ, ಜವನಗೊಂಡನಹಳ್ಳಿ, ದೇವರಕೊಟ್ಟ ಹಾಗೂ ಯಲ್ಲದಕೆರೆ ಭಾಗದಲ್ಲಿ ಎಲ್ಲಾ ರೀತಿಯ ಶಾಲಾ ಕಾಲೇಜುಗಳನ್ನು ಸ್ಥಾಪಿಸಿ ಶಿಕ್ಷಣಕ್ಕೆ ಬೇಕಾಗಿರುವ ಎಲ್ಲಾ ಸವಲತ್ತುಗಳನ್ನು ಒದಗಿಸಿಕೊಟ್ಟಿದ್ದೇನೆ. ವಿದ್ಯಾರ್ಥಿ, ವಿದ್ಯಾರ್ಥಿನಿಯರ ವ್ಯಾಸಂಗಕ್ಕೆ ಬೇಕಾದ ಸೌಲಭ್ಯ ಒದಗಿಸುವಲ್ಲಿ ನಾನೆಂದು ಹಿಂದೆ ಸರಿದಿಲ್ಲ ಎಂದ ಅವರು, ಶಿಕ್ಷಣಕ್ಕೆ ಎಷ್ಟು ಶಕ್ತಿಯಿದೆ, ಪ್ರಾಮುಖ್ಯತೆ ಇದೆಯೆಂಬುದರ ಅರಿವಿರುವುದರಿಂದ ನನ್ನ ಅಧಿಕಾರದ ಎಲ್ಲಾ ಸಮಯದಲ್ಲೂ ಸರ್ಕಾರದಿಂದ ಕೆಲವೊಮ್ಮೆ ವೈಯಕ್ತಿಕವಾಗಿ ನೆರವು ನೀಡುತ್ತಾ ಬಂದಿದ್ದೇನೆ ಎಂದು ತಿಳಿಸಿದರು.

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರ ಶಿಕ್ಷಣಕ್ಕೆ ಸಾವಿರಾರು ಕೋಟಿ ರು. ಹಣವನ್ನು ಖರ್ಚು ಮಾಡುತ್ತಾ ಶಿಕ್ಷಣ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡುತ್ತಾ ಬರುತ್ತಿದೆ. ವಿದ್ಯಾರ್ಥಿಗಳು ಉದಾಸೀನ ಮಾಡದೇ ಜ್ಞಾನಾರ್ಜನೆಯತ್ತ ಗಮನ ಹರಿಸಬೇಕು ಎಂದರು.

ಇದೇ ವೇಳೆ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಕಾಲೇಜು ವತಿಯಿಂದ ಮೂರು ಸಾವಿರ ಹಾಗೂ ಸಚಿವರು ವೈಯಕ್ತಿಕವಾಗಿ 10 ಸಾವಿರ ನಗದು ನೀಡಿದರು.

ಈ ಸಂದರ್ಭದಲ್ಲಿ ಪ್ರಾಚಾರ್ಯ ಡಿ.ಆರ್.ಹನುಮಂತರಾಯ, ಡಾ.ಅಣ್ಣಪ್ಪ ಸ್ವಾಮಿ, ಪ್ರೊ.ಪುಷ್ಪಲತಾ, ನಗರಸಭೆ ಅಧ್ಯಕ್ಷ ಅಜಯ್ ಕುಮಾರ್, ಉಪಾಧ್ಯಕ್ಷೆ ಅಂಬಿಕಾ ಆರಾಧ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಖಾದಿ ರಮೇಶ್, ಈರಲಿಂಗೇಗೌಡ, ವಾಣಿ ಕಾಲೇಜಿನ ಪ್ರಾoಶುಪಾಲ ಡಾ ಆರ್ ಮಹೇಶ್, ಪ್ರೊ.ಚೈತ್ರಾ, ಪ್ರೊ ನಾಗರಾಜ್, ಡಾ.ಧನಂಜಯ, ನಗರಸಭೆ ಸದಸ್ಯರಾದ ಸಣ್ಣಪ್ಪ, ಮಂಜುಳಾ, ಮುಖಂಡರಾದ ಗಿಡ್ಡೋಬನಹಳ್ಳಿ ಅಶೋಕ್, ಕಲ್ಲಟ್ಟಿ ಹರೀಶ್, ಸಾದತ್ ವುಲ್ಲಾ, ವಿ.ಗಿರೀಶ್ ಮತ್ತಿತರರಿದ್ದರು.