ನಮ್ಮ ನೆಲದಲ್ಲಿನ ಕಲೆ ನಮ್ಮ ಸಂಸ್ಕೃತಿಯ ಪ್ರತೀಕ. ಜೊತೆಗೆ ಜೀವದ ಮೌಲ್ಯ ಆದರ್ಶಗಳನ್ನು ಜಗ್ತತ್ತಿಗೆ ತೋರಿಸುವ ಸಾಧನವಾಗಿದೆ ಎಂದು ಹಿರಿಯ ರಂಗ ನಿರ್ದೇಶಕ ಬಿ ಎಚ್ ಮರುಳಪ್ಪ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ತಿಪಟೂರು

ನಮ್ಮ ನೆಲದಲ್ಲಿನ ಕಲೆ ನಮ್ಮ ಸಂಸ್ಕೃತಿಯ ಪ್ರತೀಕ. ಜೊತೆಗೆ ಜೀವದ ಮೌಲ್ಯ ಆದರ್ಶಗಳನ್ನು ಜಗ್ತತ್ತಿಗೆ ತೋರಿಸುವ ಸಾಧನವಾಗಿದೆ ಎಂದು ಹಿರಿಯ ರಂಗ ನಿರ್ದೇಶಕ ಬಿ ಎಚ್ ಮರುಳಪ್ಪ ಅಭಿಪ್ರಾಯಪಟ್ಟರು.

ತಾಲೂಕಿನ ಹೊನ್ನವಳ್ಳಿ ಹೋಬಳಿ ಹರಚನಹಳ್ಳಿ ಗ್ರಾಮದಲ್ಲಿ ಭಜರಂಗಿ ಬಾಯ್ಸ್ ಹಾಗೂ ಗ್ರಾಮಸ್ತರ ಸಂಯುಕ್ತಾಶ್ರಯದಲ್ಲಿ ನಡೆದ ಕಲ್ಪ ಕುಸುಮ ಕಲಾ ಸಂಘದ ವಾರ್ಷಿಕೋತ್ಸವ ಹಾಗೂ ರಂಗಗೀತೆ, ಭಜನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಯಾಂತ್ರಿಕ ಯುಗದ ನಾಗಲೋಟದಲ್ಲಿ ಬದುಕನ್ನು ನಡೆಸುತ್ತಿರುವ ಇಂದಿನ ಜನರು ಕ್ಷಣವೂ ಬಿಡುವಿಲ್ಲದಂತೆ ದುಡಿದು ದಣಿಯುತ್ತಿದ್ದಾರೆ ಇದರಿಂದ ದೇಹಕ್ಕೆ ಮನಸ್ಸಿಗೆ ತುಸು ನೆಮ್ಮದಿ ಇಲ್ಲವಾಗಿ ಎಲ್ಲದರಲ್ಲೂ ನಿರಾಸಕ್ತಿ ಹೊಡಿದ್ದಾರೆ ಇದು ದೂರವಾಗಬೇಕು ನಮ್ಮ ಪೂರ್ವಜರು ದುಡಿದು ದಣಿವ ಜೀವಸಕ್ಕೆ ಕೊಂಚ ಉತ್ಸಾಹ ಉಲ್ಲಾಸ ಸಿಗುವಂತಿದ್ದರೆ ಅದು ನಾಟಕ ರಂಗಭೂಮಿ ಮತ್ತು ಜಾನಪದ ಕಲೆಯಿಂದ ಸಾಧ್ಯ ಎಂದು ತೋರಿಸಿಕೊಟ್ಟಿದ್ದಾರೆ ಎಂದರು.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಂಗಭೂಮಿ ಕಲಾವಿದ ಟಿ. ಎಚ್. ಬಸವರಾಜು ಮಾತನಾಡಿ ಹರಚನಹಳ್ಳಿಯಂತ ಗ್ರಾಮೀಣ ಭಾಗದಲ್ಲಿ ಎಲ್ಲ ಗ್ರಾಮಸ್ತರು ಯುವಕರು ಮಹಿಳೆಯರು ಒಟ್ಟಾಗಿ ಸೇರಿ ಉತ್ಸಾಹದಿಂದ ಸಂಘಟಿತರಾಗಿ ಕಲೆಗೆ ಪ್ರೋತ್ಸಾಹ ಕೊಡುತ್ತಿರುವುದು ನಿಜಕ್ಕೂ ಹೆಮ್ಮೆ ಪಡುವಂತದ್ದು ಎಂದರು. ವೇದಿಕೆಯಲ್ಲಿ ರಾಜಶೇಖರಯ್ಯ ದಯಾನಂದ, ಸಾರ್ಥವಳ್ಳಿ, ಶಿವಕುಮಾರ್, ವಾಸುದೇವರಹಳ್ಳಿ ಸಿದ್ದಲಿಂಗಯ್ಯ ಗಂಗಾಧರಪ್ಪ, ರೇಣುಕುಮಾರ್, ಮೋಹನ್ ಕುಮಾರ್, ಪಟೇಲ್, ಉಮೇಶ್, ಹೇಮೇಶ್, ಸಿದ್ದರಾಜು, ಮಲ್ಲಿಕಾರ್ಜುನಯ್ಯ, ರಾಜಪ್ಪ ಮುಂತಾದವರು ಇದ್ದರು.

ರಂಗನಿರ್ದೇಶಕ ಮಹೇಶ್ ಗಂಟಿಗನಪಾಳ್ಯ ನರೇಶ್ ಉಮಾಶಂಕರ್ ರಾಯಚಾರವರ ಸಾರಥ್ಯದಲ್ಲಿ ಕಲ್ಪಕುಸುಮ ಕಲಾವಿದರಿಂದ ರಂಗಗೀತೆ ಮಹಿಳಾ ಕಲಾವಿದರಿಂದ ಭಜನಾ ಕಾರ್ಯಕ್ರಮ ನಡೆಯಿತು.