ಜಗತ್ತೇ ತಿರುಗಿ ನೋಡುವಂತ ಪವಿತ್ರ ನೆಲ ನಮ್ಮದು

| Published : Mar 26 2024, 01:06 AM IST

ಸಾರಾಂಶ

ಬೈಲಹೊಂಗಲ: ಮಹಾರಾಣಿ ಎಂದಾಕ್ಷಣ ಯುರೋಪ್ ರಾಷ್ಟ್ರಗಳಲ್ಲಿ ಕಿರೀಟ ತೊಟ್ಟು ಅರಮನೆಯಲ್ಲಿ ವೈಭೋಗದಿಂದ ಸಿಂಹಾಸನದ ಮೇಲೆ ಕುಳಿತಿರುವವಳು ಎಂಬ ಭಾವವಿದೆ. ಆದರೆ, ನಮ್ಮ ನೆಲದಲ್ಲಿ ಮಹಾರಾಣಿ ಎಂದರೇ ತನ್ನ ಪ್ರಜೆಗಳ ರಕ್ಷಣೆಗಾಗಿ ಕಚ್ಚೆ ಕಟ್ಟಿಕೊಂಡು ಕತ್ತಿ, ಗುರಾಣಿ ಹಿಡಿದು ಧೈರ್ಯದಿಂದ ಹೋರಾಡಿದ ಬೆಳವಡಿ ಮಲ್ಲಮ್ಮ, ಕಿತ್ತೂರು ಚನ್ನಮ್ಮ, ಒನಕೆ ಓಬವ್ವ ರಾಣಿ ಅಬ್ಬಕ್ಕನಂತ ವೀರ ಮಹಿಳೆಯರು ನೆನಪಾಗುತ್ತಾರೆ ಎಂದು ಖ್ಯಾತ ವಾಗ್ಮಿ ಕುಮಾರಿ ಹಾರಿಕಾ ಮಂಜುನಾಥ ಹೇಳಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ ಮಹಾರಾಣಿ ಎಂದಾಕ್ಷಣ ಯುರೋಪ್ ರಾಷ್ಟ್ರಗಳಲ್ಲಿ ಕಿರೀಟ ತೊಟ್ಟು ಅರಮನೆಯಲ್ಲಿ ವೈಭೋಗದಿಂದ ಸಿಂಹಾಸನದ ಮೇಲೆ ಕುಳಿತಿರುವವಳು ಎಂಬ ಭಾವವಿದೆ. ಆದರೆ, ನಮ್ಮ ನೆಲದಲ್ಲಿ ಮಹಾರಾಣಿ ಎಂದರೇ ತನ್ನ ಪ್ರಜೆಗಳ ರಕ್ಷಣೆಗಾಗಿ ಕಚ್ಚೆ ಕಟ್ಟಿಕೊಂಡು ಕತ್ತಿ, ಗುರಾಣಿ ಹಿಡಿದು ಧೈರ್ಯದಿಂದ ಹೋರಾಡಿದ ಬೆಳವಡಿ ಮಲ್ಲಮ್ಮ, ಕಿತ್ತೂರು ಚನ್ನಮ್ಮ, ಒನಕೆ ಓಬವ್ವ ರಾಣಿ ಅಬ್ಬಕ್ಕನಂತ ವೀರ ಮಹಿಳೆಯರು ನೆನಪಾಗುತ್ತಾರೆ ಎಂದು ಖ್ಯಾತ ವಾಗ್ಮಿ ಕುಮಾರಿ ಹಾರಿಕಾ ಮಂಜುನಾಥ ಹೇಳಿದರು.

ತಾಲೂಕಿನ ಮಲ್ಲಮ್ಮನ ಬೆಳವಡಿಯ ವೀರರಾಣಿ ಮಲ್ಲಮ್ಮ ಮಹಿಳಾ ಪ್ರತಿಷ್ಠಾನದ ವತಿಯಿಂದ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಮಾತನಾಡಿ, ಈಡಿ ಜಗತ್ತೇ ತಿರುಗಿ ನೋಡುವಂತ ಇತಿಹಾಸವಿರುವ ವೀರನಾರಿಯರಿಗೆ ಜನ್ಮ ಕೊಟ್ಟ ಪವಿತ್ರ ನೆಲ ನಮ್ಮದು ಎಂದರು.ಬೆಳಗಾವಿಯ ಗಡಿ ತಜ್ಞ ಹಾಗೂ ಖ್ಯಾತ ವಕೀಲ ಡಾ.ರವೀಂದ್ರ ತೋಟಗೇರ ಮಾತನಾಡಿ, ದೇಶದ ಸಂವಿಧಾನದಲ್ಲಿ ಮಹಿಳೆಯರ ಸಬಲೀಕರಣಕ್ಕಾಗಿಯೇ ಶೇ.60 ರಷ್ಟು ಕಾನೂನುಗಳಿವೆ ಎಂದರು.ಸಂಘಟನೆ ಅಧ್ಯಕ್ಷೆ ಪ್ರೀತಿ ವಿಶ್ವನಾಥ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಮೂರುಸಾವಿರ ಮಠದ ಪ್ರಭುನೀಲಕಂಠ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.

ಗ್ರಾಮ ಪಂಚಾಯತಿ ಅಧ್ಯಕ್ಷ ಚಂದ್ರಶೇಖರಯ್ಯ ಕಾರಿಮನಿ, ಉಪಾಧ್ಯಕ್ಷೆ ಸಂಗೀತಾ ಕಿಣೇಕರ, ಉಪಾಧ್ಯಕ್ಷೆ ನೀಲವ್ವ ಕರೀಕಟ್ಟಿ, ಸದಸ್ಯೆಯರಾದ ಪಾರ್ವತಿ ಕರೀಕಟ್ಟಿ, ಶಕುಂತಲಾ ಕಾಡೇಶನವರ, ಶಶಿಕಲಾ ಕರೀಕಟ್ಟಿ, ಮಲ್ಲವ್ವ ಗೋದಳ್ಳಿ, ಶೋಭಾ ಕರೀಕಟ್ಟಿ, ಲಲಿತಾ ಬಳಿಗಾರ, ರತ್ನ ಕರೀಕಟ್ಟಿ, ಸಹನಾ ಚಿಕ್ಕನಗೌಡರ, ಈರವ್ವ ಕರೀಕಟ್ಟಿ, ವಸಂತಾ ನೇಸರಗಿ, ಶಶಿಕಲಾ ಕರೀಕಟ್ಟಿ, ಭಾರತಿ ಉಪ್ಪಿನ, ಮಮತಾ ಗರಗದ, ಜಯದೇವಿ ಅಂಗಡಿ, ತಂಗೆಮ್ಮ ಕಾರಿಮನಿ, ಸೌಮ್ಯ ತೇಗೂರ, ಬಸವ್ವ ಗೋದಳ್ಳಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಸವಿತಾ ಪಾಟೀಲ ಸ್ವಾಗತಿಸಿದರು. ಸಾಹಿತಿ ಜಿ.ವಿ.ಹಿರೇಮಠ ಪರಿಚಯಿಸಿದರು. ಪ್ರಕಾಶ ಹುಂಬಿ ಪ್ರಾಸ್ತಾವಿಕ ಮಾತನಾಡಿದರು. ಸೃಷ್ಟಿ ಮಂಗಳಗಟ್ಟಿ ನಿರೂಪಿಸಿದರು.