ಸಾರಾಂಶ
ಉಡುಪಿ ಕಾಂಗ್ರೆಸ್ ಭವನದಲ್ಲಿ ಉಡುಪಿ ಬ್ಲಾಕ್ ಪರಿಶಿಷ್ಟ ಜಾತಿ ಘಟಕದ ಆಶ್ರಯದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 133ನೇ ಜನ್ಮ ದಿನಾಚರಣೆಯ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಂದ ರಚನೆಗೊಂಡ ನಮ್ಮ ಸಂವಿಧಾನ ವಿಶ್ವ ಮಾನ್ಯತೆ ಪಡೆದುಕೊಂಡಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಘನತೆ ಮತ್ತು ಸಮಾನತೆಯಿಂದ ಬದುಕಲು ಈ ಸಂವಿಧಾನ ಅವಕಾಶ ಮಾಡಿಕೊಟ್ಟಿದೆ. ವಿಶ್ವಮಾನ್ಯ ನ್ಯಾಯಶಾಸ್ತ್ರ ಮತ್ತು ರಾಜಕೀಯ ತಜ್ಞರಾಗಿದ್ದ ಅಂಬೇಡ್ಕರ್ ಅವರು ಕರಡು ಸಮಿತಿ ಅಧ್ಯಕ್ಷರಾಗಿ ರಚನೆ ಮಾಡಿದ್ದ ಈ ಸಂವಿಧಾನದಿಂದಾಗಿ ನಮ್ಮ ದೇಶ ಇಂದು ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ಇಂಥ ಸಂವಿಧಾನಕ್ಕೆ ಅಪಾಯ ಬರುವ ಎಲ್ಲ ಸಾಧ್ಯತೆಗಳು ಕಾಣುತ್ತಿವೆ. ಆದ್ದರಿಂದ ಈ ಸಂವಿಧಾನಕ್ಕೆ ಅಪಾಯವಾಗದಂತೆ ನಾವೆಲ್ಲರೂ ಎಚ್ಚರಿಕೆ ವಹಿಸಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷ ಎಂ.ಎ. ಗಪೂರ್ ಹೇಳಿದರು.ಅವರು ಸೋಮವಾರ ಉಡುಪಿ ಕಾಂಗ್ರೆಸ್ ಭವನದಲ್ಲಿ ಉಡುಪಿ ಬ್ಲಾಕ್ ಪರಿಶಿಷ್ಟ ಜಾತಿ ಘಟಕದ ಆಶ್ರಯದಲ್ಲಿ ಜರುಗಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 133ನೇ ಜನ್ಮ ದಿನಾಚರಣೆಯ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ಪ್ರಚಾರ ಸಮಿತಿ ಅಧ್ಯಕ್ಷ ಹರೀಶ್ ಕಿಣಿ, ಪಕ್ಷದ ಪ್ರಮುಖರಾದ ನಾಗೇಶ್ ಕುಮಾರ್, ಮುರುಳಿ ಶೆಟ್ಟಿ, ಮಹಾಬಲ ಕುಂದರ್, ದಿವಾಕರ್ ಕುಂದರ್, ಸತೀಶ್ ಮಂಚಿ, ಕಿಶನ್ ಕಸ್ತೂರ್ಬಾನಗರ, ಜೇಬಾ ಸೆಲ್ವ, ರವಿರಾಜ್ ಲಕ್ಷ್ಮೀನಗರ, ಲಕ್ಷ್ಮಣ್ ಅಂಬಲಪಾಡಿ ಇನ್ನಿತರ ಉಪಸ್ಥಿತರಿದ್ದರು.ಬ್ಲಾಕ್ ಪರಿಶಿಷ್ಟ ಜಾತಿ ಘಟಕ ಅಧ್ಯಕ್ಷ ಗಣೇಶ್ ನೆರ್ಗಿ ಸ್ವಾಗತಿಸಿದರು, ಉಡುಪಿ ನಗರಸಭೆಯ ಮಾಜಿ ಉಪಾಧ್ಯಕ್ಷ ಸಂಧ್ಯಾ ತಿಲಕ ವಂದಿಸಿದರು.