ಸಾರಾಂಶ
ಕಾಯಕವೇ ಕೈಲಾಸ ಎಂಬುದನ್ನು ನಾವೆಲ್ಲರೂ ಅರಿಯಬೇಕು ಅಂದಾಗ ಬಲಿಷ್ಠ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ ಎಂದರು.
ಅಣ್ಣಿಗೇರಿ: ಮಾನವ ಧರ್ಮ ಶ್ರೇಷ್ಠ ಎಂದು ವೈಚಾರಿಕ ತತ್ವ ಸಿದ್ಧಾಂತ ಸಾರಿದ ಅಣ್ಣ ಬಸವಾದಿ ಶರಣರು ನಾಡು ನಮ್ಮದು ಎಂದು ಡಿಐಜಿಪಿ ರವಿ ಡಿ, ಚನ್ನಣ್ಣವರ ಹೇಳಿದರು.
ಗುದ್ನೇಶ್ವರ ಸ್ವಾಮೀಜಿ ಸ್ಮರಣೋತ್ಸವ ಸುವರ್ಣ ಸಂಭ್ರಮ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.ಕಾಯಕವೇ ಕೈಲಾಸ ಎಂಬುದನ್ನು ನಾವೆಲ್ಲರೂ ಅರಿಯಬೇಕು ಅಂದಾಗ ಬಲಿಷ್ಠ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ ಎಂದು ಹೇಳಿದರು,
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಆಧ್ಯಾತ್ಮಿಕ ಚಿಂತನೆಯಿಂದ ಜೀವನ ಸಾರ್ಥಕ ಎಂದರು.ಹೊಸಳ್ಳಿಯ ಶ್ರೀ ಬೂದೀಶ್ವರ ಸ್ವಾಮೀಜಿ, ಅಣ್ಣಿಗೇರಿ ದಾಸೋಹ ಮಠದ ಡಾ. ಶಿವಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಇದೇ ವೇಳೆ ವಿವಿಧ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಬ್ದುಲ್ ಖಾದರ್ ನಡಕಟ್ಟಿನ, ಮಹಾಬಲೇಶ್ವರ ಹೆಬಸೂರು, ಚಂದ್ರುಗೌಡ ಕಿತ್ತೂರು, ಶಿವಾನಂದ ಹೊಸಳ್ಳಿ, ಐ.ಜಿ. ಸಮುದ್ರಿ, ಎಚ್.ಎಂ. ಸಿದ್ದಲಿಂಗಯ್ಯ, ಸೇವಾ ಸಮಿತಿ ಅಧ್ಯಕ್ಷ ಷಣ್ಮುಖನ್ ಗುರಿಕಾರ, ಚಂಬಣ್ಣ ಹಾಳದೋಟರ್, ಶಿವಶಂಕರ್ ಕಲ್ಲೂರ, ವಿರೇಶ್ ಶಾನಬೋಗರ, ಶಿವಯೋಗಿ ಸುರಕೋಡ ಸೇರಿದಂತೆ ಹಲವರಿದ್ದರು.