ಸಾರಾಂಶ
ಬಹುತೇಕ ಗ್ರಾಮಗಳಲ್ಲಿ ಜಲ ಜೀವನ್ ಯೋಜನೆ ಗುತ್ತಿಗೆದಾರರ ಬೇಜವಾಬ್ದಾರಿ ಮತ್ತು ಭ್ರಷ್ಟಾಚಾರದಿಂದ ಹಳ್ಳ ಹಿಡಿದಿದೆ, ರಸ್ತೆಗಳಲ್ಲಿ ಗುಂಡಿ ತೆಗೆದು ಪೈಪ್ ಗಳನ್ನು ಅಳವಡಿಸಿ, ಮುಚ್ಚದೇ ಇರುವುದರಿಂದ ತೊಂದರೆಯಾಗಿದೆ.
ಕನ್ನಡಪ್ರಭ ವಾರ್ತೆ ದಾಬಸ್‌ಪೇಟೆ
ಜಲ ಜೀವನ್ ಮಿಷನ್ ಯೋಜನೆಯಿಂದ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿನ ಉತ್ತಮ ರಸ್ತೆಗಳನ್ನು ಗುಂಡಿ ಮಾಡಿ, ಮುಚ್ಚದೆ ಇರುವುದರಿಂದ, ಹಲವಾರು ತೊಂದರೆಗಳಾಗುತ್ತಿವೆ ಎಂದು ಗ್ರಾಪಂ ಅಧ್ಯಕ್ಷರು ಹಾಗೂ ಸದಸ್ಯರೇ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ಹೊನ್ನೇನಹಳ್ಳಿ ಗ್ರಾಪಂನ ಕೆ.ಜಿ.ಶ್ರೀನಿವಾಸಪುರದಲ್ಲಿ ನಡೆಯಿತು. ಗ್ರಾಮಸಭೆಯಲ್ಲಿ ವಿಷಯ ಮಂಡಿಸಿದ ಇಲಾಖೆ ಅಧಿಕಾರಿ ಲಕ್ಷ್ಮಣ ಮಾಹಿತಿ ನೀಡಲು ಮುಂದಾಗುತ್ತಿದ್ದಂತೆ ಗ್ರಾಪಂ ಉಪಾಧ್ಯಕ್ಷ ರಾಜೇಶ್ ಕುಮಾರ್ ಮಾತನಾಡಿ, ಪಂಚಾಯತಿ ವ್ಯಾಪ್ತಿಯ ಬಹುತೇಕ ಗ್ರಾಮಗಳಲ್ಲಿ ಜಲ ಜೀವನ್ ಯೋಜನೆ ಗುತ್ತಿಗೆದಾರರ ಬೇಜವಾಬ್ದಾರಿ ಮತ್ತು ಭ್ರಷ್ಟಾಚಾರದಿಂದ ಹಳ್ಳ ಹಿಡಿದಿದೆ, ರಸ್ತೆಗಳಲ್ಲಿ ಗುಂಡಿ ತೆಗೆದು ಪೈಪ್ ಗಳನ್ನು ಅಳವಡಿಸಿ, ಮುಚ್ಚದೇ ಇರುವುದರಿಂದ ತೊಂದರೆಯಾಗಿದೆ, ಗ್ರಾಮದಲ್ಲಿ ಎರಡು ಓವರ್ ಹೆಡ್ ಟ್ಯಾಂಕ್ ಗಳು ಇವೆಯಾದರೂ ಪ್ರಯೋಜನವಿಲ್ಲಾ ಎಂದು ತರಾಟೆಗೆ ತೆಗೆದುಕೊಂಡರು, ಸಾರ್ವಜನಿಕರು, ಪಂಚಾಯತಿ ಸದಸ್ಯರಿಗೆ ಸಾಥ್ ನೀಡಿದರು.ಈ ಯೋಜನೆಯಲ್ಲಿ ಅವ್ಯವಹಾರ ಹೆಚ್ಚಾಗಿದೆ ಎಂದು ಸದಸ್ಯರಾದ ಉಮಾಶಂಕರ್, ಶಿವಾನಂದ್ ಆರೋಪಿಸಿದರು.
ಗ್ರಾಪಂ ಪಿಡಲೊಓ ಮಂಜಮ್ಮ ಮಾತನಾಡಿ, ಜಲ ಜೀವನ್ ಯೋಜನೆಯ ಅವ್ಯವಸ್ಥೆ ಕುರಿತು ಇಲಾಖೆಗೆ ಸಂಪೂರ್ಣ ಮಾಹಿತಿಯ ವರದಿ ನೀಡುತ್ತೇನೆ. ಸಾರ್ವಜನಿಕರು ಪಂಚಾಯತಿಯ ನರೇಗಾ ಯೋಜನೆ, ಸ್ವಚ್ಛ ಭಾರತ ಕಲ್ಪನೆ, ಬಯಲು ಮುಕ್ತ ಶೌಚಾಲಯದ ಯೊಜನೆ ಸದುಪಯೋಗ ಪಡಿಸಿಕೊಳ್ಳಿ ಎಂದರು. ಸಭೆಯಲ್ಲಿ ಗ್ರಾ.ಪಂ.ಉಪಾಧ್ಯಕ್ಷ ರಾಜೇಶ್ ಕುಮಾರ್, ನೋಡಲ್ ಅಧಿಕಾರಿ ತಿಲಕ್ ಕುಮಾರ್ ಹೆಗಡೆ, ಗ್ರಾಪಂ ಮಾಜಿ ಅಧ್ಯಕ್ಷರಾದ ಉಮೇಶ್, ಶಿವಾನಂದ್, ಚಿಕ್ಕೇಗೌಡ, ಸದಸ್ಯರಾದ ಶಿವಕುಮಾರ್ ನಾಯ್ಕ್, ಪ್ರೇಮ, ರೇವಮ್ಮ, ಮಂಜುಳ, ರಂಗಮ್ಮ, ಸುಮಿತ್ರಾ, ಕಾರ್ಯದರ್ಶಿ ಜಿ.ಬಿ.ಚಂದ್ರಯ್ಯ, ಸಿಬ್ಬಂದಿಗಳಾದ ರಮೇಶ್, ಚಂದ್ರಶೇಖರ್, ವೀರಭದ್ರಸ್ವಾಮಿ, ಕೃಷಿ ಅಧಿಕಾರಿ ರವಿಕುಮಾರ್, ಶಿಶು ಇಲಾಖೆ ಮೇಲ್ವಿಚಾರಕಿ ವಿಜಯಲಕ್ಷ್ಮೀ, ಸಿ.ಆರ್.ಪಿ.ರಾಮಕೃಷ್ಣಯ್ಯ, ಆರೋಗ್ಯ ಇಲಾಖೆಯ ವಿಲ್ಮ, ಕಂದಾಯ ಇಲಾಖೆಯ ಲೋಕೇಶ್, ಬಾಲಕೃಷ್ಣ, ಮಮತ, ತೋಟಗಾರಿಕೆ ಇಲಾಖೆಯ ವೆಂಕಟೇಶ್ ಬಾಬು, ಎಂಜಿನಿಯರ್ ಮುನಿಸ್ವಾಮಪ್ಪ, ಇನ್ನೀತರರಿದ್ದರು.