ಶಿರಸಿ ಸಾರಿಗೆ ವಿಭಾಗದಲ್ಲಿ ಒಟ್ಟು 559 ಬಸ್‌ಗಳಿದ್ದು, ಈ ಪೈಕಿ 506 ಬಸ್‌ಗಳು ಸಂಚಾರದಲ್ಲಿವೆ. ಅದರಲ್ಲೂ ಜಿಲ್ಲೆಯ ಹದಗೆಟ್ಟ ರಸ್ತೆಗಳಿಂದಾಗಿ ಬಸ್‌ಗಳು ಪದೇ ಪದೇ ಕೆಟ್ಟು ನಿಲ್ಲುತ್ತಿರುವುದು ಸಾರಿಗೆ ಸಂಸ್ಥೆಗೆ ಪ್ರಮುಖ ಸವಾಲಾಗಿದೆ.

ಕಾರವಾರ: ರಾಜ್ಯ ಸರ್ಕಾರವು ಸಾರಿಗೆ ಸಂಸ್ಥೆ ಬಸ್‌ ಗಳ ಪ್ರಯಾಣ ದರ ಹೆಚ್ಚಳದ ಬಗ್ಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.

ಆಗಾಗ ಕೆಟ್ಟು ನಿಲ್ಲುವ ಬಸ್ ಗಳು, ನಿಗದಿತ ಸಮಯಕ್ಕೆ ತೆರಳದ ಬಸ್ ಗಳಿಂದ ಜನತೆ ಬೇಸತ್ತಿರುವಾಗಲೆ ದರ ಏರಿಕೆ ಪ್ರಯಾಣಿಕರ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಶಿರಸಿ ಸಾರಿಗೆ ವಿಭಾಗದಲ್ಲಿ ಒಟ್ಟು 559 ಬಸ್‌ಗಳಿದ್ದು, ಈ ಪೈಕಿ 506 ಬಸ್‌ಗಳು ಸಂಚಾರದಲ್ಲಿವೆ. ಅದರಲ್ಲೂ ಜಿಲ್ಲೆಯ ಹದಗೆಟ್ಟ ರಸ್ತೆಗಳಿಂದಾಗಿ ಬಸ್‌ಗಳು ಪದೇ ಪದೇ ಕೆಟ್ಟು ನಿಲ್ಲುತ್ತಿರುವುದು ಸಾರಿಗೆ ಸಂಸ್ಥೆಗೆ ಪ್ರಮುಖ ಸವಾಲಾಗಿದೆ.

ರಸ್ತೆಗಳ ದುಸ್ಥಿತಿಯಿಂದ ಬಸ್‌ಗಳ ಬಿಡಿಭಾಗಗಳು ಶೀಘ್ರವಾಗಿ ಹಾಳಾಗುತ್ತಿದ್ದು, ನಿರ್ವಹಣೆ ಮತ್ತು ದುರಸ್ತಿ ಕಾರ್ಯದ ಹೊರೆ ಸಾರಿಗೆ ಸಂಸ್ಥೆಯ ಮೇಲೆ ಹೆಚ್ಚಾಗಿದೆ. ಇದರಿಂದ ಲಭ್ಯವಿರುವ ಬಸ್‌ಗಳ ಸಮರ್ಪಕ ಬಳಕೆಯೂ ಕಷ್ಟವಾಗಿದೆ. ಇದರ ನಡುವೆ ಮುಂದಿನ ಏಪ್ರಿಲ್‌ನಲ್ಲಿ ಕೆಲವು ಚಾಲಕರು ಹಾಗೂ ನಿರ್ವಾಹಕರು ನಿವೃತ್ತರಾಗಲಿದ್ದು, ಇದರಿಂದ ಸಿಬ್ಬಂದಿ ಕೊರತೆ ಉಂಟಾಗುವ ಸಾಧ್ಯತೆಯಿದೆ. ಈಗಾಗಲೇ ಬಸ್‌ಗಳ ಲಭ್ಯತೆ ಹಾಗೂ ಸಂಚಾರ ನಿರ್ವಹಣೆಯ ಸವಾಲು ಎದುರಿಸುತ್ತಿರುವ ಸಾರಿಗೆ ವಿಭಾಗಕ್ಕೆ ಸಿಬ್ಬಂದಿ ಕೊರತೆಯ ಆತಂಕವೂ ಎದುರಾಗಲಿದೆ. ಜನತೆ ಸಾರಿಗೆ ಸಂಸ್ಥೆಯ ಮೇಲೆ ಮುನಿಸಿಕೊಂಡಿರುವಾಗಲೆ ದರ ಹೆಚ್ಚಳ ಇನ್ನಷ್ಟು ಆಕ್ರೋಶಕ್ಕೆ ಕಾರಣವಾಗಿದೆ.

ಬಸ್‌ ಪ್ರಯಾಣದರ ಎಷ್ಟು ಏರಿಕೆ?

ಎಲ್ಲಿಂದ? ಎಲ್ಲಿಗೆ? ಹಳೆ ದರ ಹೊಸ ದರ

ಕಾರವಾರದಿಂದ ಅಂಕೋಲಾ 58-79

ಕಾರವಾರದಿಂದ ಕುಮಟಾ 97-116

ಕಾರವಾರದಿಂದ ಹೊನ್ನಾವರ 147-173

ಕಾರವಾರದಿಂದ ಭಟ್ಕಳ 199 237

ಕಾರವಾರದಿಂದ ಶಿರಸಿ 161-193

ಕಾರವಾರದಿಂದ ಯಲ್ಲಾಪುರ146 174

ಕಾರವಾರದಿಂದ ಹಳಿಯಾಳ 177-207

ಕಾರವಾರದಿಂದ ದಾಂಡೇಲಿ 140-171

ಕಾರವಾರದಿಂದ ಜೋಯಿಡಾ 112 -137