ಓವರ್‌ ಲೋಡ್‌ ೫ ಟಿಪ್ಪರ್‌ಗೆ ₹4.78 ಲಕ್ಷ ದಂಡ

| Published : Aug 04 2025, 11:45 PM IST

ಸಾರಾಂಶ

ಕೇರಳ ರಾಜ್ಯಕ್ಕೆ ಓವರ್‌ ಲೋಡ್‌ ಎಂ.ಸ್ಯಾಂಡ್‌ ಹಾಗೂ ಕಲ್ಲು ಸಾಗಾಣಿಕೆಗೆ ಯತ್ನಿಸಿದ್ದ ಐದು ಟಿಪ್ಪರ್‌ಗಳಿಗೆ ₹೪,೭೮,೬೩೬ ಲಕ್ಷ ದಂಡವನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ವಿಧಿಸಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಕೇರಳ ರಾಜ್ಯಕ್ಕೆ ಓವರ್‌ ಲೋಡ್‌ ಎಂ.ಸ್ಯಾಂಡ್‌ ಹಾಗೂ ಕಲ್ಲು ಸಾಗಾಣಿಕೆಗೆ ಯತ್ನಿಸಿದ್ದ ಐದು ಟಿಪ್ಪರ್‌ಗಳಿಗೆ ₹೪,೭೮,೬೩೬ ಲಕ್ಷ ದಂಡವನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ವಿಧಿಸಿದೆ. ಕಳೆದ ಮೂರು ದಿನಗಳ ಹಿಂದೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಸೂಚನೆ ಮೇರೆಗೆ ತೆರಕಣಾಂಬಿ ಸಬ್‌ ಇನ್ಸ್‌ಪೆಕ್ಟರ್‌ ಮಹೇಶ್‌ ಗುಂಡ್ಲುಪೇಟೆ ಠಾಣಾ ಸರಹದ್ದಿನ ಮದ್ದೂರು ಚೆಕ್‌ ಪೋಸ್ಟ್‌ ಬಳಿಕ ದಾಳಿ ನಡೆಸಿ ೧೧ ಟಿಪ್ಪರ್‌ ಗಳನ್ನು ವಶಕ್ಕೆ ಪಡೆದು ಗುಂಡ್ಲುಪೇಟೆ ಪೊಲೀಸರಿಗೆ ಹಸ್ತಾಂತರಿದ್ದರು.

೧೧ ಟಿಪ್ಪರ್‌ ಗಳಲ್ಲಿ ಓವರ್‌ ಲೋಡ್‌ ಎಂ.ಸ್ಯಾಂಡ್‌ ಹಾಗೂ ಕಲ್ಲು ಸಾಗಾಣಿಕೆಗೆ ಯತ್ನಿಸಿದ್ದ ಟಿಪ್ಪರ್‌ ಗಳಲ್ಲಿ ಐದು ಟಿಪ್ಪರ್‌ ಗಳಿಗೆ ಭೂ ವಿಜ್ಞಾನಿ ಜನಾರ್ಧನ್‌, ಪೊಲೀಸರು, ಆರ್‌ಟಿಒ ಪತ್ರದ ಆಧಾರದ ಮೇಲೆ ದಂಡ ವಿಧಿಸಿದ್ದಾರೆ. ಕಳೆದ ಮೂರು ದಿನಗಳಿಂದ ವಶಕ್ಕೆ ಪಡೆದ ಟಿಪ್ಪರ್‌ ಗಳು ಪಟ್ಟಣದ ಹೊರ ವಲಯದ ಬಸವೇಶ್ವರ ಕನ್ವೆಕ್ಸನ್‌ ಹಾಲ್‌ ಬಳಿ ನಿಂತಿವೆ.

ಕೇರಳ ರಾಜ್ಯಕ್ಕೆ ಓವರ್‌ ಲೋಡ್‌ ಎಂ.ಸ್ಯಾಂಡ್‌ ಹಾಗೂ ಕಲ್ಲು ಸಾಗಾಣಿಕೆ ವಿಚಾರ ಗೊತ್ತಿದ್ದು, ಹೇಳದ ಗುಂಡ್ಲುಪೇಟೆ ಠಾಣಾ ವಿಶೇಷ ಪೇದೆ ಮೇಲೆ ಕ್ರಮ ವಾಗುತ್ತಾ? ಎಂಬ ಪ್ರಶ್ನೆ ಎದ್ದಿದೆ.