ಪಾವಗಡ ಪುರಸಭೆಗೆ ಅಧ್ಯಕ್ಷರಾಗಿ ಪಿ.ಎಚ್‌.ರಾಜೇಶ್‌ ಆಯ್ಕೆ

| Published : Aug 29 2024, 12:59 AM IST / Updated: Aug 29 2024, 01:00 AM IST

ಪಾವಗಡ ಪುರಸಭೆಗೆ ಅಧ್ಯಕ್ಷರಾಗಿ ಪಿ.ಎಚ್‌.ರಾಜೇಶ್‌ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಇಲ್ಲಿನ ಪುರಸಭೆಗೆ ಅಧ್ಯಕ್ಷರಾಗಿ ಪಿ.ಎಚ್‌.ರಾಜೇಶ್‌ ಹಾಗೂ ಉಪಾಧ್ಯಕ್ಷೆಯಾಗಿ ಗೀತಾ ಹನುಮಂತರಾಯಪ್ಪ ಅವಿರೋಧವಾಗಿ ಬುಧವಾರ ಆಯ್ಕೆಯಾದರು.

ಪಾವಗಡ: ಇಲ್ಲಿನ ಪುರಸಭೆಗೆ ಅಧ್ಯಕ್ಷರಾಗಿ ಪಿ.ಎಚ್‌.ರಾಜೇಶ್‌ ಹಾಗೂ ಉಪಾಧ್ಯಕ್ಷೆಯಾಗಿ ಗೀತಾ ಹನುಮಂತರಾಯಪ್ಪ ಅವಿರೋಧವಾಗಿ ಬುಧವಾರ ಆಯ್ಕೆಯಾದರು.

ಕಳೆದ 2 ವರ್ಷದ ಬಳಿಕ ನ್ಯಾಯಾಲಯ ತೀರ್ಪು ಜಾರಿಯಾದ ಬೆನ್ನಲೆ ಕ್ರಮವಹಿಸಿದ ರಾಜ್ಯ ಚುನಾವಣೆ ಆಯೋಗ ಜಿಲ್ಲಾಧಿಕಾರಿ ಆದೇಶನ್ವಯ ಚುನಾವಣೆ ನಡೆಯಿತು. ಸದಸ್ಯ ರ ಸರ್ವಾನುಮತದಿಂದ ಸಾಮಾನ್ಯ ಮೀಸಲು ಕ್ಷೇತ್ರದಿಂದ ಪರಿಶಿಷ್ಟ ಪಂಗಡದ ಪಿ.ಎಚ್‌.ರಾಜೇಶ್‌ ಹಾಗೂ ಸಾಮಾನ್ಯ ಮಹಿಳಾ ಮೀಸಲು ಕ್ಷೇತ್ರದಿಂದ ಗೀತಾ ಹನುಮಂತರಾಯಪ್ಪ ಆಯ್ಕೆಯಾಗಿದ್ದಾರೆ.

ಪುರಸಭೆಯ ಅಧ್ಯಕ್ಷ ಪಿ.ಎಚ್‌.ರಾಜೇಶ್ ಮಾತನಾಡಿ, ಬೆಂಬಲಿಸಿದ ಪುರಸಭೆಯ ಎಲ್ಲಾ ಸದಸ್ಯರಿಗೆ ಅಭಾರಿಯಾಗಿದ್ದೇನೆ. ಕಾಂಗ್ರೆಸ್‌ ಒಂದು ಸಿದ್ದಾಂತದ ಪಕ್ಷ, ಇಲ್ಲಿ ಎಲ್ಲರಿಗೂ ನ್ಯಾಯ ಸಿಗಲಿದೆ. ಪುರಸಭೆಯ ವಿವಿಧ ಯೋಜನೆ ಅಡಿಯಲ್ಲಿ ನನ್ನ ಸೇವಾ ಅವಧಿಯಲ್ಲಿ ನ್ಯಾಯ ಸತ್ಯ ಧರ್ಮದ ಮೂಲಕ ಬಡವರ ಪರ ಕೆಲಸ ನಿರ್ವಹಿಸಿ ಪಟ್ಟಣಾಭಿವೃದ್ದಿಗೆ ವಿಶೇಷ ಒತ್ತು ನೀಡುತ್ತೇನೆ ಎಂದು ತಿಳಿಸಿದರು.

ಚುನಾವಣೆ ಅಧಿಕಾರಿಯಾಗಿ ಉಪವಿಭಾಗಧಿಕಾರಿ ಗೂಟೂರು ಶಿವಪ್ಪ ಕಾರ್ಯನಿರ್ವಹಸಿದರು. ಮುಖ್ಯಾಧಿಕಾರಿ ಜಾಫರ್‌ ಷರೀಫ್‌, ಶಂಷುದ್ದೀನ್‌, ಹರೀಶ್‌, ಗುರಪ್ಪ ರಾಮಾಂಜಿನಪ್ಪ,ಪುರಸಭೆ ಉಪಾಧ್ಯಕ್ಷೆ ಗೀತಾ ಹನುಮಂತರಾಯಪ್ಪ ಮಾತನಾಡಿದರು. ಸುದೇಶ್‌ಬಾಬು, ತೆಂಗಿನಕಾಯಿ ರವಿ, ರೊಪ್ಪ ಐ.ಜಿ.ನಾಗರಾಜಪ್ಪ, ಸುಮಾ ಅನಿಲ್‌, ತಿಪ್ಪೇಸ್ವಾಮಿ, ನಾಗರ್ಜುನರೆಡ್ಡಿ, ಸೂಲನಾಯಕನಹಳ್ಳಿ ಮಾರಪ್ಪ, ನಾರಾಯಣಪ್ಪ ಇದ್ದರು.