ಪಡುಬೆಳ್ಳೆ ಶ್ರೀ ನಾರಾಯಣಗುರು ಪ್ರೌಢಶಾಲಾ ಶಿಕ್ಷಕಿ ಗೀತಾ ಪಿ.ಗೆ ಬೀಳ್ಕೊಡುಗೆ

| Published : Feb 24 2025, 12:33 AM IST

ಪಡುಬೆಳ್ಳೆ ಶ್ರೀ ನಾರಾಯಣಗುರು ಪ್ರೌಢಶಾಲಾ ಶಿಕ್ಷಕಿ ಗೀತಾ ಪಿ.ಗೆ ಬೀಳ್ಕೊಡುಗೆ
Share this Article
  • FB
  • TW
  • Linkdin
  • Email

ಸಾರಾಂಶ

ಪಡುಬೆಳ್ಳೆ ಶ್ರೀ ನಾರಾಯಣಗುರು ಪ್ರೌಢಶಾಲೆಯಲ್ಲಿ ೩೪ ವರ್ಷ ಸೇವೆ ಸಲ್ಲಿಸಿದ ಹಿರಿಯ ಶಿಕ್ಷಕಿ ಗೀತಾ ಪಿ. ವಯೋನಿವೃತ್ತಿ ಹೊಂದಿದ ಪ್ರಯುಕ್ತ ವಿದ್ಯಾರ್ಥಿಗಳು ಸೇರಿದಂತೆ ಹಳೆವಿದ್ಯಾರ್ಥಿಗಳು, ಆಡಳಿತ ಮಂಡಳಿ, ಪೋಷಕರು, ವಿದ್ಯಾರ್ಥಿಗಳು ಸಂಯುಕ್ತವಾಗಿ ಏರ್ಪಡಿಸಿದ ವಿದಾಯ ಸಮಾರಂಭದಲ್ಲಿ ದಂಪತಿಯನ್ನು ಸನ್ಮಾನಿಸಿ ಶುಭ ವಿದಾಯ ಕೋರಲಾಯಿತು.

ಕನ್ನಡಪ್ರಭ ವಾರ್ತೆ ಕಾಪು

ಇಲ್ಲಿನ ಪಡುಬೆಳ್ಳೆ ಶ್ರೀ ನಾರಾಯಣಗುರು ಪ್ರೌಢಶಾಲೆಯಲ್ಲಿ ೩೪ ವರ್ಷ ಸೇವೆ ಸಲ್ಲಿಸಿದ ಹಿರಿಯ ಶಿಕ್ಷಕಿ ಗೀತಾ ಪಿ. ವಯೋನಿವೃತ್ತಿ ಹೊಂದಿದ ಪ್ರಯುಕ್ತ ವಿದ್ಯಾರ್ಥಿಗಳು ಸೇರಿದಂತೆ ಹಳೆವಿದ್ಯಾರ್ಥಿಗಳು, ಆಡಳಿತ ಮಂಡಳಿ, ಪೋಷಕರು, ವಿದ್ಯಾರ್ಥಿಗಳು ಸಂಯುಕ್ತವಾಗಿ ಏರ್ಪಡಿಸಿದ ವಿದಾಯ ಸಮಾರಂಭದಲ್ಲಿ ದಂಪತಿಯನ್ನು ಸನ್ಮಾನಿಸಿ ಶುಭ ವಿದಾಯ ಕೋರಲಾಯಿತು.ಸಮಾರಂಭದ ಅಧ್ಯಕ್ಷತೆಯನ್ನು ಆಡಳಿತ ಮಂಡಳಿ ಸದಸ್ಯ ಶಿವಾಜಿ ಎಸ್. ಸುವರ್ಣ ವಹಿಸಿದ್ದರು. ಆಡಳಿತ ಮಂಡಳಿಯ ಹಿರಿಯ ಸದಸ್ಯರಾದ ಜಯಶಂಕರ್, ಕಟಪಾಡಿ ಶಂಕರ ಪೂಜಾರಿ, ಸುರೇಶ ಪೂಜಾರಿ, ಬಿಲ್ಲವರ ಅಸೋಸಿಯೇಶನ್ ಮುಂಬೈ ಮಹಿಳಾ ಘಟಕ ಅಧ್ಯಕ್ಷೆ ಶಕುಂತಳ ಕೋಟ್ಯಾನ್, ಕಾಪು ತಾಲೂಕು ಯುವಜನ ಮತ್ತು ಕ್ರೀಡಾ ಅಧಿಕಾರಿ ರಿತೇಶ್ ಶೆಟ್ಟಿ ಸೂಡ, ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕ ರಾಘವೇಂದ್ರ ಸಾಲಿಯಾನ್, ಪಿಟಿಎ ಅಧ್ಯಕ್ಷೆ ಲಕ್ಷ್ಮೀ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.ಆರಂಭದಲ್ಲಿ ಶಿಕ್ಷಕ ಹರೀಶ್ ಶೆಟ್ಟಿ ಸೂಡ ಅವರು ಶಿಕ್ಷಕಿ ಗೀತಾ ಪಿ. ಅವರ ಸೇವೆಯನ್ನು ಸ್ಮರಿಸಿ ಅಭಿನಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಸುರೇಶ ದೇವಾಡಿಗ ಸ್ವಾಗತಿಸಿದರು. ಶಿಕ್ಷಕಿ ಅರುಂಧತಿ ಪ್ರಭು ಮತ್ತು ಸುರೇಶ್ ನಾಯ್ಕ್ ನಿರೂಪಿಸಿದರು. ಸಂಘಟಕ ವಿಜಯ್‌ಧೀರಜ್ ವಂದಿಸಿದರು.