ಹಲವೆಡೆ ಬಿರುಗಾಳಿ ಸಹಿತ ಸುರಿದ ಮಳೆ: ಮನೆ ಮೇಲ್ಚಾವಣಿಗೆ ಹಾನಿಬೆಳೆದು ನಿಂತಿದ್ದ ಬಾಳೆ, ಕಬ್ಬು ನೆಲಕಚ್ಚಿ ರೈತರಿಗೆ ಅಪಾರ ಪ್ರಮಾಣದ ನಷ್ಟವನ್ನುಂಟು ಮಾಡಿದೆ. ಗಾಳಿ ರಭಸಕ್ಕೆ ಪೂರ್ವಿಕರು ನಿರ್ಮಿಸಿದ್ದ ಹಳೆ ಮನೆಗಳಲ್ಲಿ ವಾಷಿಸುತ್ತಿರುವ ನಿವಾಸಿಗಳನ್ನು ಸಂಕಷ್ಟಕ್ಕೆ ದೂಡುವಂತೆ ಮಾಡಿದೆ. ಬಿಸಿಲಿನ ತಾಪಮಾನಕ್ಕೆ ಬೆಂದು ಹೋಗುತ್ತಿದ್ದ ಜನತೆ ಇದೀಗ ಮಳೆ ಬಂತು ಎಂಬ ಖುಷಿಯಲ್ಲಿದ್ದರೆ, ಮತ್ತೊಂದೆಡೆ ಭಾರೀ ಬಿರುಗಾಳಿಯಿಂದಾಗಿ ಅವಘಢಗಳು ಸಂಭವಿಸಿ ಜೀವ ಭಯದಲ್ಲಿ ಬದುಕುವ ಆತಂಕ ಎದುರಾಗಿದೆ.