ಅನಧಿಕೃತ ತಡೆಗೋಡೆ: ಅಧಿಕಾರಿಗಳ ತಂಡ ಪರಿಶೀಲನೆಬನಹಟ್ಟಿಯಲ್ಲಿ ಮೂರು ದಶಕಗಳ ಹಿಂದೆ ಅನಧಿಕೃತವಾಗಿ ನಿರ್ಮಾಣ ಮಾಡಿರುವ ತಡೆಗೋಡೆ ತೆರವುಗೊಳಿಸುವಂತೆ ಆಗ್ರಹಿಸಿ ಸರ್ಕಾರ ಮಟ್ಟದಲ್ಲಿನ ಇಲಾಖೆಗಳಿಗೆ ಎಲ್ಲ ದಾಖಲೆಗಳನ್ನು ಒದಗಿಸಿ ಹೋರಾಟಕ್ಕೆ ಇಳಿದಿದ್ದ ಸಾರ್ವಜನಿಕರಿಗೆ ಸಿಹಿ ಸುದ್ದಿ ಸಿಕಿದೆ. ಗುರುವಾರ ಬೆಳಗ್ಗೆ ಭೂಮಾಪನಾ, ತಹಸೀಲ್ದಾರ್, ನಗರಸಭೆ ಹಾಗೂ ನಗರ ಯೋಜನಾ ಪ್ರಾಧಿಕಾರ ಅಧಿಕಾರಿಗಳ ನೇತೃತ್ವದಲ್ಲಿ ಭೂ ಅಳತೆಯೊಂದಿಗೆ ಗಡಿ ಗುರುತಿಸುವ ಕಾರ್ಯ ನಡೆಯಿತು.