ಸಿದ್ದಾಪುರ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪಾಲಿಬೆಟ್ಟ ವರ್ತಕರ ಸಂಘದ ವತಿಯಿಂದ ಪಾಲಿಬೆಟ್ಟ ಪಶುವೈದ್ಯ ಆಸ್ಪತ್ರೆ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮ ನಡೆಯಿತು.

ಪಶು ವೈದ್ಯಾಧಿಕಾರಿ ಡಾ. ನವೀನ್ ಗಿಡ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿ, ಗಿಡ ನೆಡುವುದರಿಂದ ಮುಂದಿನ ಪೀಳಿಗೆಗೆ ಉಪಕಾರವಾಗುವುದರ ಜೊತೆಗೆ ಉತ್ತಮ ಗಾಳಿ ಮತ್ತು ಆರೋಗ್ಯಕರ ಪರಿಸರ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ. ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಗಿಡಗಳನ್ನು ನೆಟ್ಟು ಬೆಳೆಸುವ ಮೂಲಕ ಪರಿಸರದ ಬಗ್ಗೆ ಕಾಳಜಿ ವಹಿಸಬೇಕು ಎಂದು ಕರೆ ನೀಡಿದರು.

ಪಾಲಿಬೆಟ್ಟ ವರ್ತಕರ ಸಂಘದ ಅಧ್ಯಕ್ಷ ಎಂ.ಯು. ಮುನೀರ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಕಾರ್ಯದರ್ಶಿ ಶೀಬಾ, ಚೆಶೈರ್ ಹೋಮ್‌ನ ಮುಖ್ಯೋಪಾಧ್ಯಾಯ ಶಿವರಾಜ್, ವರ್ತಕರ ಸಂಘದ ಖಜಾಂಚಿ ಅಬೂಬಕರ್, ಉಪಾಧ್ಯಕ್ಷ ಟಿ.ಜಿ. ವಿಜೇಶ್ ಹಾಗೂ ಮೈಕಲ್, ಪ್ರಧಾನ ಕಾರ್ಯದರ್ಶಿ ಶಮೀರ್, ಕಾರ್ಯದರ್ಶಿಗಳಾದ ಫೈಜಲ್ ಮತ್ತು ಎಚ್.ಡಿ. ಅಯ್ಯಪ್ಪ, ಸಲಹೆಗಾರ ಪುತ್ತಂ ಪ್ರದೀಪ್ ಮತ್ತಿತರರಿದ್ದರು.