ಪಂಚಕಲ್ಯಾಣ ಪ್ರತಿಷ್ಠಾ ಮಹಾಮಹೋತ್ಸವ, ವಿಶ್ವಶಾಂತಿ ಮಹಾಯಾಗ

| Published : Feb 01 2025, 12:01 AM IST

ಸಾರಾಂಶ

ಶ್ರೀ1008 ಭಗವಾನ ಪಾರ್ಶ್ವನಾಥ ತೀರ್ಥಂಕರ ಜಿನಬಿಂಬದ ಭವ್ಯ ಪಂಚಕಲ್ಯಾಣ ಪ್ರತಿಷ್ಠಾ ಮಹಾಮಹೋತ್ಸವ ಹಾಗೂ ವಿಶ್ವಶಾಂತಿ ಮಹಾಯಾಗ ಫೆ.3 ರಿಂದ 9ರವರೆಗೆ 108 ಜಿನಸೇನ ಮುನಿಮಹಾರಾಜರ ಸಾನ್ನಿಧ್ಯದಲ್ಲಿ ನಡೆಯಲಿದೆ ಎಂದು ಚಂದ್ರಕಾಂತ ಪಾಟೀಲ ಹಾಗೂ ಪಂಚ ಕಮಿಟಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಯಮಕನಮರಡಿ

ಶ್ರೀ1008 ಭಗವಾನ ಪಾರ್ಶ್ವನಾಥ ತೀರ್ಥಂಕರ ಜಿನಬಿಂಬದ ಭವ್ಯ ಪಂಚಕಲ್ಯಾಣ ಪ್ರತಿಷ್ಠಾ ಮಹಾಮಹೋತ್ಸವ ಹಾಗೂ ವಿಶ್ವಶಾಂತಿ ಮಹಾಯಾಗ ಫೆ.3 ರಿಂದ 9ರವರೆಗೆ 108 ಜಿನಸೇನ ಮುನಿಮಹಾರಾಜರ ಸಾನ್ನಿಧ್ಯದಲ್ಲಿ ನಡೆಯಲಿದೆ ಎಂದು ಚಂದ್ರಕಾಂತ ಪಾಟೀಲ ಹಾಗೂ ಪಂಚ ಕಮಿಟಿ ತಿಳಿಸಿದರು.

ಗುರುವಾರ ಉಳ್ಳಾಗಡ್ಡಿ-ಖಾನಾಪುರದ ಜೈನ ಮಂದಿರದಲ್ಲಿ ಸುದ್ದಿಗೋಷ್ಠಿಯ ಉದ್ದೇಶಿಸಿ ಮಾತನಾಡಿ, ಫೆ.3ರಂದು ಧ್ವಜಾರೋಹಣ, ಗರ್ಭಕಲ್ಯಾಣ ಪೂರ್ವಾರ್ಧ, ಫೆ.4ರಂದು ಗರ್ಭಕಲ್ಯಾಣ ಉತ್ತರಾರ್ಧ ಕಾರ್ಯಕ್ರಮ, ನವಗೃಹ ಶಾಂತಿ ವಿಧಾನ ಕಾರ್ಯಕ್ರಮ, ಫೆ.5ರಂದು ಭಗವತ್ ಜನ್ಮ ಕಲ್ಯಾಣಕ ಕಾರ್ಯಕ್ರಮ,

ಫೆ.6ರಂದು ರಾಜ್ಯಾಭಿಷೇಕ, ದೀಕ್ಷಾ ಕಲ್ಯಾಣಿಕ, ಭೋಗದಿಂದ ತಪದ ಕಡೆಗೆ ಕಾರ್ಯಕ್ರಮ, ಫೆ. 7ರಂದು ಕೇವಲ ಜ್ಞಾನ ಕಲ್ಯಾಣ ಭಗವಂತರ ಆಹಾರ ವಿಧಿ ಮೌಂಜಿ ಭಂದನ ಸಂಸ್ಕಾರ ಕಾರ್ಯಕ್ರಮ, ಫೆ.8ರಂದು ಭವ್ಯ ರಥೋತ್ಸವ, ಫೆ. 9ರಂದು ನಿರ್ವಾಣ ಕಲ್ಯಾಣ (ಶಾಶ್ವತ ಮೋಕ್ಷ ಮಾರ್ಗ) ಶ್ರೀಕಲಿಕುಂಡ ಆರಾಧನಾ ವಿಧಾನ ಕಾರ್ಯಕ್ರಮ ಜರುಗಲಿದ್ದು, ಕಾರ್ಯಕ್ರಮದಲ್ಲಿ 108 ಸಂಯಮಸಾಗರ ಮುನಿ ಮಹಾರಾಜರು, ಕ್ಷುಲ್ಲಕ ಜಯಸೇನ ಮಹಾರಾಜರು, ನಾಂದಣಿ ಸಂಸ್ಥಾನ ಮಠದ ಜಿನಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿ ಹಾಗೂ ಕೊಲ್ಲಾಪುರ ಸಂಸ್ಥಾನಮಠದ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿ, ಉಳ್ಳಾಗಡ್ಡಿ-ಖಾನಾಪುರದ ಮರುಳಸಿದ್ದೇಶ್ವರ ಬ್ರಹನ್ಮಠದ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ಉಪಸ್ಥಿತರಿರುವರು.

ಮುಖ್ಯ ಅತಿಥಿಗಳಾಗಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಸಂಸದೆ ಪ್ರೀಯಾಂಕಾ ಜಾರಕಿಹೊಳಿ, ಮಾಜಿ ಸಚಿವ ವೀರಕುಮಾರ ಪಾಟೀಲ, ಮಾಜಿ ಸಂಸದ ರಮೇಶ ಕತ್ತಿ, ಉದ್ಯಮಿ ಉತ್ತಮ ಪಾಟೀಲ ಆಗಮಿಸಲಿದ್ದು, ಧಾರ್ಮಿಕ ಉಪನ್ಯಾಸಗಳು ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ. ದಾದಾಗೌಡಾ ಪಾಟೀಲ, ಬಾಬುಗೌಡ ಪಾಟೀಲ, ಹಣಮಂತಗೌಡ ಪಾಟೀಲ, ಜಿನಗೌಡ ಪಾಟೀಲ, ರಾಜು ಅವಟೆ, ಶಾಂತಿನಾಥ ಪಾಟೀಲ, ಆದಗೌಡ ಪಾಟೀಲ, ಪಂಡಿತ ಮಹಾವೀರ ಉಪಾಧ್ಯೆ ಹಾಗೂ ವೀರ ಸೇವಾದಳದ, ಪಾಶ್ವನಾಥ ಯುವ ಗ್ರುಫ್ ಸದಸ್ಯರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.