ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮ ವಲಯದಂಚಿನ ಕಂಟ್ರೀ ಕ್ಲಬ್‌ನಲ್ಲಿ ಅನುಮತಿ ಪಡೆಯದೆ ಹೊಸ ಕಟ್ಟಡ ನಿರ್ಮಿಸಿದ್ದಕ್ಕೆ ಮಂಗಲ ಗ್ರಾಪಂ ಈ ಮೊದಲು ನೀಡಿದ್ದರೂ ಕಡೆಗಣಿಸಲಾಗಿತ್ತು. ಈಗ ಮತ್ತೆ ನೋಟಿಸ್ ನೀಡಿದ್ದು, ಹೊಸ ಕಟ್ಟಡ ತೆರವುಗೊಳಿಸಬೇಕು ಎಂದು ಸೂಚನೆ ನೀಡಿದೆ.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮ ವಲಯದಂಚಿನ ಕಂಟ್ರೀ ಕ್ಲಬ್‌ನಲ್ಲಿ ಅನುಮತಿ ಪಡೆಯದೆ ಹೊಸ ಕಟ್ಟಡ ನಿರ್ಮಿಸಿದ್ದಕ್ಕೆ ಮಂಗಲ ಗ್ರಾಪಂ ಈ ಮೊದಲು ನೀಡಿದ್ದರೂ ಕಡೆಗಣಿಸಲಾಗಿತ್ತು. ಈಗ ಮತ್ತೆ ನೋಟಿಸ್ ನೀಡಿದ್ದು, ಹೊಸ ಕಟ್ಟಡ ತೆರವುಗೊಳಿಸಬೇಕು ಎಂದು ಸೂಚನೆ ನೀಡಿದೆ.ಪಿಡಿಒ ಮೋಹನ್ ಕುಮಾರ್ ಕಂಟ್ರೀ ಕ್ಲಬ್ ಗೆ ನೋಟಿಸ್ ನೀಡಿದ್ದಾರೆ. ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕರು ಹಾಗೂ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿಗೆ ಪತ್ರ ರವಾನಿಸಿದ್ದಾರೆ.
ಪತ್ರದ ಸಾರಾಂಶ:ಕಂಟ್ರೀ ಕ್ಲಬ್ ನಲ್ಲಿ ಅನುಮತಿ ಪಡೆಯದೆ ಹೊಸದಾಗಿ ಕಟ್ಟಡ ನಿರ್ಮಾಣ ಮಾಡುತ್ತಿರುವ ಬಗ್ಗೆ ನೋಟಿಸ್ ನೀಡಿದ್ದರೂ ಕಂಟ್ರೀ ಕ್ಲಬ್ ೭ ದಿನಗಳಾದರೂ ಸಮಜಾಯಿಸಿ ನೀಡಿಲ್ಲ. ಕರ್ನಾಟಕ ಸರ್ಕಾರದ ಅಧಿಸೂಚನೆ ಹಾಗೂ ಪರಿಸರ ಮತ್ತು ಅರಣ್ಯ ಸಚಿವಾಲಯದ ಅಧಿಸೂಚನೆಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದೀರಾ?. ಪ್ರಚಲಿತ ಕಾನೂನು ಮತ್ತು ನಿಯಮಗಳನ್ವಯ ಅನಧಿಕೃತವಾಗಿ ನಿರ್ಮಿಸಿರುವ ಹೊಸ ಕಟ್ಟಡವನ್ನು ತಕ್ಷಣವೇ ನಿಮ್ಮ ಸ್ವಂತ ವೆಚ್ಚದಲ್ಲಿ ತೆರವುಗೊಳಸಬೇಕು ಎಂದು ಗ್ರಾಪಂ ಪಿಡಿಒ ನೋಟಿಸ್‌ನಲ್ಲಿ ಸೂಚಿಸಿದ್ದಾರೆ.