ಸಾರಾಂಶ
ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜನ್ಮ ದಿನವನ್ನು ಬಿಜೆಪಿ ವತಿಯಿಂದ ಆಚರಣೆ ಮಾಡಲಾಗುತ್ತಿದೆ ಎಂದು ಮಲೆ ಮಹದೇಶ್ವರ ಮಂಡಲದ ಬಿಜೆಪಿ ಅಧ್ಯಕ್ಷ ಚಂಗವಾಡಿ ರಾಜು ತಿಳಿಸಿದರು.
ಕನ್ನಡಪ್ರಭ ವಾರ್ತೆ, ಹನೂರುಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜನ್ಮ ದಿನವನ್ನು ಬಿಜೆಪಿ ವತಿಯಿಂದ ಆಚರಣೆ ಮಾಡಲಾಗುತ್ತಿದೆ ಎಂದು ಮಲೆ ಮಹದೇಶ್ವರ ಮಂಡಲದ ಬಿಜೆಪಿ ಅಧ್ಯಕ್ಷ ಚಂಗವಾಡಿ ರಾಜು ತಿಳಿಸಿದರು.
ತಾಲೂಕಿನ ರಾಮಪುರ ಗ್ರಾಮದಲ್ಲಿರುವ ಮಲೆ ಮಾದೇಶ್ವರ ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ ಪಂಡಿತ್ ದೀನ್ ಜನ್ಮ ದಿನಾಚರಣೆದಲ್ಲಿ ಮಾತನಾಡಿದರು.ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರಾಗಿ ಜನ ಸಂಘದ ಸದಸ್ಯರಾಗಿ ಪಕ್ಷದ ಒಳಿತಿಗಾಗಿ ಅಪಾರ ಸೇವೆ ಸಲ್ಲಿಸಿದ್ದಾರೆ. ಅವರ ಸಮಾಜ ಸೇವೆ ತತ್ವ ಆದರ್ಶಗಳನ್ನು ಪ್ರತಿಯೊಬ್ಬ ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಮುಖಂಡ ರಾಜೇಂದ್ರ ಮಾತನಾಡಿ, ಪಂಡಿತ್ ದೀನ್ ದಯಾಳ್ ಉಪಾಧ್ಯಾಯರು 1937ರಲ್ಲಿ ಆರ್‌ಎಸ್‌ಎಸ್‌ಗೆ ಸೇರಿದರು. ನಾನಾಜಿ ದೇಶಮುಖ್ ಮತ್ತು ಶ್ರೀ ಬಾಬು ಜುಗಾಡೆ ಅವರ ಪ್ರಭಾವಕ್ಕೆ ಒಳಗಾದವರು ಆರ್ ಎಸ್ ಎಸ್ ಶಿಕ್ಷಣ ವಿಭಾಗದಲ್ಲಿ ಶಿಕ್ಷಣ ಮತ್ತು ತರಬೇತಿಯನ್ನು ಪೂರ್ಣಗೊಳಿಸಿದ ನಂತರ 1951 ರಿಂದ 1967 ರವರೆಗೆ ಭಾರತೀಯ ಜನಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ಇಡೀ ದೇಶವೇ ತಿರುಗಿ ನೋಡುವಂತಹ ಬಲಪಂಥೀಯ ಚಿಂತಕರಾದರು ಎಂದರು.ಕಾರ್ಯದರ್ಶಿ ಮುರುಗೇಶ್, ಓಬಿಸಿ ಅಧ್ಯಕ್ಷ ಮಾದೇಶ್, ಎಸ್ ಸಿ ಮೋರ್ಚಾ ಅಧ್ಯಕ್ಷ ಮೌನೇಶ್, ಮುಖಂಡರಾದ ಅಶ್ವತ್, ರಾಜಣ್ಣ, ವಿಶ್ವಾಸ್, ಕಾಂತರಾಜ್, ರವಿ, ಮಹೇಶ್ ಇದ್ದರು.