ತಾವರೆಕೆರೆ ತಲುಪಿದ ಪಂಡಿತಾರಾಧ್ಯ ಶ್ರೀಗಳ ಪಾದಯಾತ್ರೆ

| Published : Jan 30 2025, 01:48 AM IST

ಸಾರಾಂಶ

ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ನಮ್ಮ ನಡೆ ಸರ್ವೋದಯದ ಕಡೆಗೆ ಘೋಷಣೆಯಡಿ ಜ.27ರಿಂದ 30ರವರೆಗೆ ಸಾಣೇಹಳ್ಳಿಯಿಂದ ತಾಲೂಕಿನ ಸಂತೆಬೆನ್ನೂರು ಗ್ರಾಮದವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಈ ಪಾದಯಾತ್ರೆ ತಾಲೂಕಿನ ತಾವರೆಕೆರೆ ಗ್ರಾಮಕ್ಕೆ ಮಂಗಳವಾರ ಸಂಜೆ ಆಗಮಿಸಿತು.

- ನಮ್ಮ ನಡೆ ಸರ್ವೋದಯದೆಡೆಗೆ ಜನಜಾಗೃತಿ ಪಾದಯಾತ್ರೆ, ಸಾರ್ವಜನಿಕ ಸಭೆ - - - ಕನ್ನಡಪ್ರಭ ವಾರ್ತೆ ಚನ್ನಗಿರಿ

ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ನಮ್ಮ ನಡೆ ಸರ್ವೋದಯದ ಕಡೆಗೆ ಘೋಷಣೆಯಡಿ ಜ.27ರಿಂದ 30ರವರೆಗೆ ಸಾಣೇಹಳ್ಳಿಯಿಂದ ತಾಲೂಕಿನ ಸಂತೆಬೆನ್ನೂರು ಗ್ರಾಮದವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಈ ಪಾದಯಾತ್ರೆ ತಾಲೂಕಿನ ತಾವರೆಕೆರೆ ಗ್ರಾಮಕ್ಕೆ ಮಂಗಳವಾರ ಸಂಜೆ ಆಗಮಿಸಿತು.

ತಾವರೆಕೆರೆಯ ಶಿಲಾಮಠದ ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು, ಗ್ರಾಮದ ಭಕ್ತರು ಸ್ವಾಗತ ಕೋರಿ ಬರಮಾಡಿಕೊಂಡರು. ಅನಂತರ ಸಾರ್ವಜನಿಕ ಸಭೆ ನಡೆಸಿ, ರಾತ್ರಿ ತಾವರೆಕೆರೆ ಗ್ರಾಮದಲ್ಲಿಯೇ ವಾಸ್ತವ್ಯ ಹೂಡಿದರು.

ಜ.29ರಂದು ತಾವರೆಕೆರೆಯಿಂದ ಪಾದಯಾತ್ರೆ ಆರಂಭಿಸಿದ ಶ್ರೀಗಳ ತಂಡವು ಪಾಂಡೋಮಟ್ಟಿ ಗ್ರಾಮಕ್ಕೆ ಮಧ್ಯಾಹ್ನ ಆಗಮಿಸಿತು. ಈ ವೇಳೆ ಭಕ್ತರು ಜಯಕಾರ ಹಾಕುವ ಮೂಲಕ ಪಾದಯಾತ್ರಿಗಳಿಗೆ ಭವ್ಯ ಸ್ವಾಗತ ಕೋರಿದರು. ಬಳಿಕ ಸಾರ್ವಜನಿಕ ಸಭೆ ನಡೆಯಿತು.

ಶ್ರೀ ಪಂಡಿತಾರಾಧ್ಯ ಶಿವಾಚಾರ್ಯರು ಸಭೆಯಲ್ಲಿ ಮಾತನಾಡಿ, ಪರಿಸರ ಜಾಗೃತಿ, ಕೃಷಿ ಬಗ್ಗೆ ಮರುಚಿಂತನೆ, ಶಿಕ್ಷಣದಲ್ಲಿ ಪರಿವರ್ತನೆ, ಉತ್ತಮ ಆರೋಗ್ಯ ಸೇವೆ, ರಾಜಕೀಯ ಕ್ಷೇತ್ರದ ಸುಧಾರಣೆ ಮತ್ತು ಗಾಂಧೀಜಿಯವರ ಸರ್ವೋದಯ ತತ್ವಗಳನ್ನು ಸಾಕಾರಗೊಳಿಸುವ ವಿಚಾರ ಕುರಿತಂತೆ ಜನರಿಗೆ ಪಾದಯಾತ್ರೆ ನಡೆಸಿ, ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಪಾದಯಾತ್ರೆಯಲ್ಲಿ ಪಾಂಡೋಮಟ್ಟಿ ವಿರಕ್ತ ಮಠದ ಶ್ರೀ ಗುರುಬಸವ ಮಹಾಸ್ವಾಮೀಜಿ, ತಾವರೆಕೆರೆ ಶಿಲಾಮಠದ ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಚನ್ನಗಿರಿ ವಿರಕ್ತ ಮಠದ ಶ್ರೀ ಬಸವ ಜಯಚಂದ್ರ ಮಹಾಸ್ವಾಮಿಗಳು, ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಮಹಾಸ್ವಾಮೀಜಿ, ಮಂಡ್ಯದ ಕಲ್ಯಾಣ ಬಸವೇಶ್ವರ ಮಠದ ಶ್ರೀ ಓಂಕಾರೇಶ್ವರ ಸ್ವಾಮಿಗಳು, ಡಾ.ಸಂಜೀವ್ ಕುಲಕರ್ಣಿ, ವಿ.ಪ ಸದಸ್ಯ ಡಾ.ಧನಂಜಯಸರ್ಜಿ, ಮಾಜಿ ಶಾಸಕ ಮಹಿಮಾ ಜೆ.ಪಟೇಲ್, ಮಾಡಾಳು ಮಲ್ಲಿಕಾರ್ಜುನ್, ವಡ್ನಾಳ್ ಜಗದೀಶ್, ಚಂದ್ರಶೇಖರ್, ಲಿಂಗರಾಜು, ಗಿರೀಶ್, ಬಸವ ಲಿಂಗಪ್ಪ, ರಾಜಪ್ಪ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.

- - - -29ಕೆಸಿಎನ್‌ಜಿ1.ಜೆಪಿಜಿ: ಚನ್ನಗಿರಿ ತಾಲೂಕಿನ ತಾವರೆಕೆರೆ ಗ್ರಾಮದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಸಾಣೇಹಳ್ಳಿ ಶ್ರೀಗಳು ಮಾತನಾಡಿದರು. - - - (** ಈ ಪೋಟೋ-ಕ್ಯಾಪ್ಷನ್‌ ಪ್ಯಾನೆಲ್‌ಗೆ ಬಳಸಬಹುದು)

-29ಕೆಸಿಎನ್‌ಜಿ2.ಜೆಪಿಜಿ:

ಪರಿಸರ ಜಾಗೃತಿ, ಕೃಷಿ ಬಗ್ಗೆ ಮರುಚಿಂತನೆ, ಶಿಕ್ಷಣ ಮುಂತಾದ ಕ್ಷೇತ್ರಗಳಲ್ಲಿ ಸುಧಾರಣೆ ಜಾಗೃತಿ ಕುರಿತು ಸಾಣೇಹಳ್ಳಿಯ ಪಂಡಿತಾರಾಧ್ಯ ಶ್ರೀ ನೇತೃತ್ವದಲ್ಲಿ ನಮ್ಮ ನಡೆ ಸರ್ವೋದಯದ ಕಡೆಗೆ ಘೋಷಣೆಯಡಿ ಹಮ್ಮಿಕೊಂಡಿರುವ ಪಾದಯಾತ್ರೆ ಮಂಗಳವಾರ ಸಂಜೆ ತಾವರೆಕೆರೆ ಗ್ರಾಮ ತಲುಪಿದಾಗ ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯರ ಮುಂದಾಳತ್ವದಲ್ಲಿ ಭಕ್ತರು ಸ್ವಾಗತಿಸಿದರು.