ಪಹಲ್ಗಾಮ್ ನಲ್ಲಿ ಉಗ್ರರಿಂದ ಹತ್ಯಾಕಾಂಡ ಖಂಡಿಸಿ ಪಂಜಿನಿ ಮೆರವಣಿಗೆ

| Published : Apr 28 2025, 11:46 PM IST

ಪಹಲ್ಗಾಮ್ ನಲ್ಲಿ ಉಗ್ರರಿಂದ ಹತ್ಯಾಕಾಂಡ ಖಂಡಿಸಿ ಪಂಜಿನಿ ಮೆರವಣಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಹಿಂದೂ ಧರ್ಮ ಪವಿತ್ರ ಧರ್ಮ. ಅದರ ರಕ್ಷಣೆ ಅತ್ಯಗತ್ಯವಾಗಿದೆ. ಸರ್ವಧರ್ಮ, ಜಾತಿ, ಜನಾಂಗಗಳನ್ನು ಒಳಗೊಂಡಿರುವ ನಮ್ಮ ದೇಶದ ಏಕತೆಗೆ ಭಂಗ ತರುವ ಉಗ್ರ ಚಟುವಟಿಕೆ ನಡೆಯದಂತೆ ಸರ್ಕಾರಗಳು ಜಾಗೃತ ವಹಿಸುವ ಜತೆಗೆ ಬೇಹುಗಾರಿಕೆ ಬಲಪಡಿಸಬೇಕು ಮತ್ತು ಸತ್ತವರ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬುವ ಕೆಲಸವಾಬೇಕು.

ಕನ್ನಡಪ್ರಭ ವಾರ್ತೆ ಮದ್ದೂರು

ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರಿಂದ ನಡೆದ ಹತ್ಯಾಕಾಂಡ ಖಂಡಿಸಿ, ತಾಲೂಕಿನ ಬೆಸಗರಹಳ್ಳಿಯಲ್ಲಿ ರಾಜ್ಯ ರೈತ ಸಂಘ ಏಕೀಕರಣ ಸಮಿತಿ ಸದಸ್ಯರು ಮತ್ತು ಸಾರ್ವಜನಿಕರು ಪಂಜಿನ ಮೆರವಣಿಗೆ ನಡೆಸಿ ಭಾನುವಾರ ರಾತ್ರಿ ಆಕ್ರೋಶ ವ್ಯಕ್ತಪಡಿಸಿದರು.

ಅಮಾಯಕ ಪ್ರವಾಸಿಗರ ಮೇಲೆ ಉಗ್ರರು ಅಮಾನುಷವಾಗಿ ದಾಳಿ ಮಾಡಿ ಹಣೆಗೆ ಗುಂಡಿಕ್ಕಿ ಕೊಂದಿರುವುದನ್ನು ತೀವ್ರವಾಗಿ ಖಂಡಿಸಿದರು. ಈ ಘಟನೆಯಲ್ಲಿ ಪಾಲ್ಗೊಂಡ ಉಗ್ರರಿಗೆ ತಕ್ಕ ಶಿಕ್ಷೆ ನೀಡಬೇಕು ಮತ್ತು ಪಾಕಿಸ್ತಾನಿ ಬೆಂಬಲಿತ ಭಯೋತ್ಪಾದಕ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದರು.

ರೈತ ಮುಖಂಡ ಸೊ.ಶಿ.ಪ್ರಕಾಶ್ ಮಾತನಾಡಿ, ದೇಶದ ಹಿತದೃಷ್ಟಿಯಿಂದ ಯುದ್ಧ ಅನಿವಾರ್ಯವಾದರೆ ನಮ್ಮ ಸೇನೆ ಸದಾ ಸಿದ್ಧವಿದ್ದು, ಇಂತಹ ಉಗ್ರರ ಚಟುವಟಿಕೆಗಳನ್ನು ಪೋಷಿಸುವ ಪಾಕಿಸ್ತಾನಿಗಳನ್ನು ಸರ್ಕಾರಗಳು ಸದೆಬಡಿಯಬೇಕೆಂದು ಎಂದು ಆಗ್ರಹಿಸಿದರು.

ಹಿಂದೂ ಧರ್ಮ ಪವಿತ್ರ ಧರ್ಮ. ಅದರ ರಕ್ಷಣೆ ಅತ್ಯಗತ್ಯವಾಗಿದೆ. ಸರ್ವಧರ್ಮ, ಜಾತಿ, ಜನಾಂಗಗಳನ್ನು ಒಳಗೊಂಡಿರುವ ನಮ್ಮ ದೇಶದ ಏಕತೆಗೆ ಭಂಗ ತರುವ ಉಗ್ರ ಚಟುವಟಿಕೆ ನಡೆಯದಂತೆ ಸರ್ಕಾರಗಳು ಜಾಗೃತ ವಹಿಸುವ ಜತೆಗೆ ಬೇಹುಗಾರಿಕೆ ಬಲಪಡಿಸಬೇಕು ಮತ್ತು ಸತ್ತವರ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬುವ ಕೆಲಸವಾಬೇಕು ಎಂದು ಒತ್ತಾಯಿಸಿದರು.

ಗ್ರಾಮದ ಬೆಸಗರಹಳ್ಳಿ ಕೆರೆಯಿಂದ ಪ್ರಮುಖ ಬೀದಿಗಳಲ್ಲಿ ಪಂಜಿನ ಮೆರವಣಿಗೆ ನಡೆಸಿ, ನಂತರ ಬಸ್ ನಿಲ್ದಾಣಕ್ಕೆ ಆಗಮಿಸಿ ಪಂಜಿನ ಪ್ರತಿಭಟನೆ ನಡೆಸಿದರು. ಈ ವೇಳೆ ರೈತ ಸಂಘದ ಮುಖಂಡ ಕೀಳಘಟ್ಟ ನಂಜುಂಡಯ್ಯ, ಪಣ್ಣೆದೊಡ್ಡಿ ವೆಂಕಟೇಶ್, ಪ್ರಭುಲಿಂಗ, ದಯಾನಂದ್, ಜಗದೀಶ್, ಡಿ.ವೆಂಕಟೇಶ್, ಕೃಷ್ಣ, ರಾಮಣ್ಣ, ಚೆನ್ನಪ್ಪ, ಉಮೇಶ್, ಲಿಂಗರಾಜು, ಲೋಕೇಶ್, ರಾಜೇಶ್, ಮಹಾಲಿಂಗಯ್ಯ ಇದ್ದರು.