ಸಾರಾಂಶ
ಯಲಬುರ್ಗಾ: ಹೆತ್ತವರನ್ನು ಪಾಲನೆ ಪೋಷಣೆ ಮಾಡುವ ಜವಾಬ್ದಾರಿ ಪ್ರತಿಯೊಬ್ಬ ಮಕ್ಳಳ ಮೇಲಿದೆ ಎಂದು ತಾಪಂ ಇಒ ನೀಲಗಂಗಾ ಬಬಲಾದ ಹೇಳಿದರು.
ಇಲ್ಲಿನ ತಾಪಂ ಸಭಾಂಗಣದಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ವೀರಭದ್ರೇಶ್ವರ ವಿಕಲಚೇತನರ ಸಂಸ್ಥೆ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸಂವಿಧಾನದಲ್ಲಿ ಪ್ರತಿಯೊಬ್ಬರ ರಕ್ಷಣೆಗೆ ಹಕ್ಕುಗಳಿವೆ. ಹಾಗೇ ಪಾಲಿಸಬೇಕಾದ ಕರ್ತವ್ಯಗಳಿವೆ. ಮಕ್ಕಳು ಸರಿದಾರಿಯಲ್ಲಿ ನಡೆಯಲು ಸಂಸ್ಕಾರ, ಸಂಸ್ಕೃತಿಯ ಮಾರ್ಗದರ್ಶನ ಮಾಡುವ ತಮ್ಮ ಮನೆಯ ಹಿರಿಯರನ್ನು ಕಾಳಜಿಯಿಂದ ನೋಡಿಕೊಳ್ಳಬೇಕು. ಹಿರಿಯ ನಾಗರಿಕರು ತಮ್ಮ ರಕ್ಷಣೆಗೆ ಇರುವ ಹಕ್ಕುಗಳ ಬಗ್ಗೆ ಮಾಹಿತಿ ತಿಳಿಯಬೇಕು ಎಂದರು.
ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ವೆಂಕಟೇಶ ದೇಶಪಾಂಡೆ ಮಾತನಾಡಿ, ಹಿರಿಯ ನಾಗರಿಕರ ಪಾಲನೆ ಪೋಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿ. ಹಿರಿಯರ ರಕ್ಷಣೆಗೆ ತೊಂದರೆ ಮತ್ತು ಮಕ್ಕಳಿಂದ ದೌರ್ಜನ್ಯ ನಡೆದರೆ ರಕ್ಷಣೆಗಾಗಿ ಹಿರಿಯ ನಾಗರಿಕರ ಸಂರಕ್ಷಣಾ ಕಾಯ್ದೆಯಡಿ ಕೋರ್ಟ್‌ಗೆ ಅರ್ಜಿ ಸಲ್ಲಿಸಬಹುದು. ರಾಜ್ಯ ಸರ್ಕಾರದಿಂದ ೬೬೧೭ ಜನರಿಗೆ ಪೋಷಣೆ ಭತ್ಯೆ ನೀಡಲಾಗುತ್ತಿದೆ. ಕೇಂದ್ರ ಸರ್ಕಾರದಿಂದ ೬೦೬೮ ಜನ ಪಡೆಯುತ್ತಿದ್ದಾರೆ. ಸೌಲಭ್ಯ ಪಡೆಯಲು ಪ್ರತಿ ಗ್ರಾಪಂನಲ್ಲಿ ವಿಆರ್‌ಡಬ್ಲು ಸಿಬ್ಬಂದಿಯಿಂದ ಅರ್ಹರು ಕಾರ್ಡ್ ಮಾಡಿಸಿಕೊಳ್ಳಬೇಕು ಎಂದರು.ಅಪರ ಸರ್ಕಾರಿ ವಕೀಲ ಮಲ್ಲನಗೌಡ ಪಾಟೀಲ್ ಮಾತನಾಡಿ, ಸಮಾಜದಲ್ಲಿ ಹಿರಿಯರಿಗೆ ಗೌರವ ಬರುವುದಾದರೆ, ತಮ್ಮ ಮಕ್ಕಳಿಗೆ ಸಂಸ್ಕಾರ ಕೊಡುವುದು ಬಹಳ ಮುಖ್ಯ. ನಮ್ಮ ಏಳಿಗೆಗೆ ಕಾರಣರಾದ ಹಿರಿಯರನ್ನು ಪ್ರತಿಯೊಬ್ಬರೂ ಗೌರವದಿಂದ ಕಾಣಬೇಕು ಎಂದರು.
ಸಹಾಯಕ ಸರ್ಕಾರಿ ಅಭಿಯೋಜಕ ರವಿ ಹುಣಸಿಮರದ, ಪಪಂ ಮುಖ್ಯಾಧಿಕಾರಿ ನಾಗೇಶ, ನಿವೃತ್ತ ಶಿಕ್ಷಕ ಅಶೋಕ ಮಾಲಿಪಾಟೀಲ್ ಮಾತನಾಡಿದರು. ಇದೆ ವೇಳೆ ಹಿರಿಯ ನಾಗರಿಕರಿಗೆ ಸಾಧನ ಸಲಕರಣೆ ವಿತರಿಸಲಾಯಿತು.ಈ ಸಂದರ್ಭ ನಿವೃತ್ತ ನೌಕರರ ಸಂಘದ ಖಜಾಂಚಿ ಮಹಾದೇವಪ್ಪ ಕಮ್ಮಾರ, ಯಲಬುರ್ಗಾ ತಾಲೂಕು ಎಂಆರ್‌ಡಬ್ಲು ಶಶಿಕಲಾ, ಕುಕನೂರು ಎಂಆರ್‌ಡಬ್ಲು ಶರಣಯ್ಯ ಶಶಿಮಠ, ಸಂಪನ್ಮೂಲ ವ್ಯಕ್ತಿ ಭೀಮಣ್ಣ ಹವಳಿ, ವೀರಭದ್ರೇಶ್ವರ ವಿಕಲಚೇತನ ಸಂಸ್ಥೆ ಅಧ್ಯಕ್ಷ ಈರಪ್ಪ ಕರೆಕುರಿ, ಶ್ರೀಕಾಂತಗೌಡ ಮಾಲಿಪಾಟೀಲ್, ಶಿವಮೂರ್ತಿ ಇಟಗಿ ಸೇರಿದಂತೆ ಮತ್ತಿತರರು ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))