ಸಂಸತ್ ಚುನಾವಣೆ: ಜಾಫರ್ ಷರೀಫ್ ದಾಖಲೆ ಗೆಲವು!

| Published : Mar 25 2024, 12:52 AM IST

ಸಾರಾಂಶ

ರಾಮನಗರ: ಹಿಂದಿನ ಕನಕಪುರ ಸಂಸತ್ ಕ್ಷೇತ್ರದಲ್ಲಾಗಲಿ ಅಥವಾ ಈಗಿನ ಬೆಂಗಳೂರು ಗ್ರಾಮಾಂತರ ಸಂಸತ್ ಕ್ಷೇತ್ರದಲ್ಲಾಗಲಿ ಈವರೆಗೆ ನಡೆದಿರುವ ಚುನಾವಣೆಗಳಲ್ಲಿ ಯಾವ ಅಭ್ಯರ್ಥಿಯಿಂದಲೂ ಕಾಂಗ್ರೆಸ್ ನ ಸಿ.ಕೆ. ಜಾಫರ್ ಷರೀಫ್ ಅವರ ದಾಖಲೆ ಮುರಿಯಲು ಸಾಧ್ಯವೇ ಆಗಿಲ್ಲ.

ರಾಮನಗರ: ಹಿಂದಿನ ಕನಕಪುರ ಸಂಸತ್ ಕ್ಷೇತ್ರದಲ್ಲಾಗಲಿ ಅಥವಾ ಈಗಿನ ಬೆಂಗಳೂರು ಗ್ರಾಮಾಂತರ ಸಂಸತ್ ಕ್ಷೇತ್ರದಲ್ಲಾಗಲಿ ಈವರೆಗೆ ನಡೆದಿರುವ ಚುನಾವಣೆಗಳಲ್ಲಿ ಯಾವ ಅಭ್ಯರ್ಥಿಯಿಂದಲೂ ಕಾಂಗ್ರೆಸ್ ನ ಸಿ.ಕೆ. ಜಾಫರ್ ಷರೀಫ್ ಅವರ ದಾಖಲೆ ಮುರಿಯಲು ಸಾಧ್ಯವೇ ಆಗಿಲ್ಲ.

ಕನಕಪುರ ಲೋಕಸಭಾ ಕ್ಷೇತ್ರದಲ್ಲಿ (1971)ನಡೆದ ಎರಡನೇ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಸಿ.ಕೆ. ಜಾಫರ್ ಷರೀಫ್ ಚಲಾವಣೆಯಾದ ಒಟ್ಟು ಮತಗಳಲ್ಲಿ ಮಾನ್ಯವಾದ ಮತಗಳ ಪೈಕಿ ಶೇ.61.14 ಮತಗಳ ಭಾರೀ ಅಂತರದಿಂದ ಪ್ರಚಂಡ ಗೆಲವು ಸಾಧಿಸಿ ಹೊಸ ದಾಖಲೆ ಬರೆದಿದ್ದರು.

ಕ್ಷೇತ್ರದ ಚೊಚ್ಚಲ ಸಂಸದರಾಗಿದ್ದ ಎಂ.ವಿ. ರಾಜಶೇಖರನ್ ಕಾಂಗ್ರೆಸ್ ತೊರೆದು ನ್ಯಾಷನಲ್ ಕಾಂಗ್ರೆಸ್ ಓರಿಜಿನಲ್ (ಎನ್ ಸಿಒ) ಪಕ್ಷದಿಂದ ಕಣಕ್ಕಿಳಿದರೆ, ಸಿ.ಕೆ. ಜಾಫರ್ ಷರೀಫ್ ಕಾಂಗ್ರೆಸ್ ನ ಹುರಿಯಾಳು ಆಗಿದ್ದರು. ಪಕ್ಷೇತರರಾಗಿ ಅಬ್ದುಲ್ ರಶೀದ್ ಸ್ಪರ್ಧೆ ಮಾಡಿದ್ದರು.

ಕ್ಷೇತ್ರದಲ್ಲಿ ಒಟ್ಟು 4,84,298 ಮತದಾರರಲ್ಲಿ 3,13,659 ಮಂದಿ (ಶೇ.64.77) ಮತ ಚಲಾಯಿಸಿದ್ದರು. ಇದರಲ್ಲಿ 3,05,086 ಮತಗಳು ಮಾತ್ರ ಮಾನ್ಯಗೊಂಡಿದ್ದವು. ಇದರಲ್ಲಿ ಸಿ.ಕೆ. ಜಾಫರ್ ಷರೀಫ್ - 2,43,987 (ಶೇ.79.97), ಎಂ.ವಿ. ರಾಜಶೇಖರನ್ - 57,468 (ಶೇ.18.84) ಹಾಗೆಯೇ ಅಬ್ದುಲ್ ರಷೀದ್ - 3631 (ಶೇ.1.19) ಮತಗಳು ಲಭಿಸಿದ್ದವು.

ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಚುನಾವಣೆಯಲ್ಲಿ ಸಿ.ಕೆ. ಜಾಫರ್ ಷರೀಫ್ ಅವರು ಪ್ರತಿಸ್ಪರ್ಧಿ ಎಂ.ವಿ. ರಾಜಶೇಖರನ್‌ ವಿರುದ್ಧ 1,86,519 (ಶೇ.61.14) ಭಾರೀ ಮತಗಳ ಅಂತರದಿಂದ ಜಯ ಸಾಸಿದರು. ಈ ಗೆಲುವು ದಾಖಲೆಯಾಗಿಯೇ ಇತಿಹಾಸದ ಪುಟದಲ್ಲಿ ಉಳಿದಿದೆ.

ಸಂಸದರಾಗಿ ಗೆಲುವಿನ ಖಾತೆ ತೆರೆದಿದ್ದ ಜಾಫರ್ ಷರೀಫ್ ಅವರನ್ನು ರಾಜಕೀಯ ಸನ್ನಿವೇಶಗಳು ಕ್ಷೇತ್ರ ತೊರೆಯುವಂತೆ ಮಾಡಿತು. ಮುಂದಿನ ಚುನಾವಣೆಯಲ್ಲಿ ಜಾಫರ್ ರವರು ಇಲ್ಲಿಂದ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ವಲಸೆ ಹೋದರು.

ಕನಕಪುರ ಲೋಕಸಭಾ ಕ್ಷೇತ್ರ ರಚನೆಯಾಗಿದ್ದು 1967ರಲ್ಲಿ. ಇಲ್ಲಿ ಮೊದಲ ಬಾರಿಗೆ ಸಂಸದರಾಗಿ ಕಾಂಗ್ರೆಸ್‌ನ ಎಂ.ವಿ. ರಾಜಶೇಖರನ್ ಆಯ್ಕೆಯಾಗಿದ್ದರು. ಈ ಚುನಾವಣೆಯಲ್ಲಿ ಸ್ವತಂತ್ರ ಪಾರ್ಟಿ ಸ್ಟೇಟ್ ಪಾರ್ಟಿಯಿಂದ ಬಿ.ಕೆ. ಪುಟ್ಟರಾಮಯ್ಯ ಸೇರಿ 6 ಮಂದಿ ಕಣದಲ್ಲಿದ್ದರು.

ಒಟ್ಟು 4,44,344 ಮತದಾರರಲ್ಲಿ 2,81,621 ಮಂದಿ ಚಲಾಯಿಸಿದ ಮತಗಳ ಪೈಕಿ 2,66,380 ಮತಗಳು ಮಾನ್ಯವಾಗಿದ್ದವು. ರಾಜಶೇಖರನ್ 1,21,394 (ಶೇ.45.57) ಮತಗಳನ್ನು ಪಡೆದು ಪ್ರತಿಸ್ಪರ್ಧಿ ಪಕ್ಷೇತರ ಅಭ್ಯರ್ಥಿ ಎಂ.ಬಿ.ದಾಸ್ (73,198 ಮತ)ಎದುರು 48,196 (ಶೇ.18.09)ಮತಗಳ ಅಂತರದಿಂದ ಗೆಲುವು ಕಂಡಿದ್ದರು.

1989 ರ ಚುನಾವಣೆಯಲ್ಲಿ ಕಾಂಗ್ರೆಸ್ ನ ಎಂ.ವಿ. ಚಂದ್ರಶೇಖರ ಮೂರ್ತಿ 4,72,265 ಮತಗಳನ್ನು ಪಡೆದು ಪ್ರತಿಸ್ಪರ್ಧಿ ಜನತಾ ದಳದ ಸಿ.ನಾರಾಯಣ ಸ್ವಾಮಿ (2,17,044) ವಿರುದ್ಧ 2,55,221 (ಶೇ.28.64) ಮತಗಳ ಹೆಚ್ಚಿನ ಅಂತರದಿಂದ ಗೆಲವು ಸಾಸಿದ ಎರಡನೇ ಅಭ್ಯರ್ಥಿಯಾಗಿದ್ದಾರೆ. ಈ ಚುನಾವಣೆಯಲ್ಲಿ ಒಟ್ಟು 13,55,284ಮತದಾರರ ಪೈಕಿ 9,23,505 ಮತಗಳು ಚಲಾವಣೆಯಾಗಿ 8,91,182 ಮತಗಳು ಮಾನ್ಯಗೊಂಡಿದ್ದವು.

ಇನ್ನು ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದವರ ಪಟ್ಟಿಯಲ್ಲಿ ಎಚ್ .ಡಿ. ಕುಮಾರಸ್ವಾಮಿ ಮೂರನೇ ಸ್ಥಾನದಲ್ಲಿದ್ದಾರೆ. 2009ರ ಚುನಾವಣೆಯಲ್ಲಿ ಒಟ್ಟು 19,04,135 ಮತದಾರರ ಪೈಕಿ 11,02,833 ಮಂದಿ ಮತ ಚಲಾಯಿಸಿದ್ದರು. ಇದರಲ್ಲಿ ಕುಮಾರಸ್ವಾಮಿ 4,93,177 ಪಡೆದು ಸಮೀಪ ಸ್ಪರ್ಧಿ ಬಿಜೆಪಿಯ ಸಿ.ಪಿ. ಯೋಗೇಶ್ವರ್ (3,63,027) ಅವರನ್ನು 1,30,275 (ಶೇ.27.25) ಮತಗಳಿಂದ ಪರಾಭವಗೊಳಿಸಿದ್ದರು.

ಬಾಕ್ಸ್‌............

ಬೆಂ.ಗ್ರಾ. ಕ್ಷೇತ್ರ ಪುನರ್‌ ವಿಂಗಡನೆ

ಈಗಿನ ಬೆಂಗಳೂರು ಗ್ರಾಮಾಂತರ ಕ್ಷೇತ್ರ 2008ರ ಕ್ಷೇತ್ರ ಪುನರ್ ವಿಂಗಡಣೆ ಸಂದರ್ಭ ರಚನೆಯಾಯಿತು. ಅದಕ್ಕೂ ಮುನ್ನ ರಾಮನಗರ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳು (ಹಿಂದಿನ ಸಾತನೂರು ಕ್ಷೇತ್ರವನ್ನೂ ಒಳಗೊಂಡು), ಬೆಂಗಳೂರಿನ ಉತ್ತರಹಳ್ಳಿ, ಆನೇಕಲ್ ಹಾಗೂ ಮಂಡ್ಯ ಜಿಲ್ಲೆಯ ಮಳವಳ್ಳಿ ವಿಧಾನಸಭಾ ಕ್ಷೇತ್ರವನ್ನು ಒಳಗೊಂಡ ಕನಕಪುರ ಲೋಕಸಭಾ ಕ್ಷೇತ್ರವು ಅಸ್ತಿತ್ವದಲ್ಲಿ ಇತ್ತು. ದೇಶದಲ್ಲಿಯೇ ಅತಿದೊಡ್ಡ ಲೋಕಸಭಾ ಕ್ಷೇತ್ರ ಎಂಬ ಖ್ಯಾತಿ ಇದರದ್ದಾಗಿತ್ತು.

ಬಾಕ್ಸ್‌.............ವರ್.

ಗೆದ್ದ ಅಭ್ಯರ್ಥ.

ಚಲಾವಣೆಯಾದ ಮ.

ಲಭಿಸಿದ ಮ.

ಗೆಲುವಿನ ಅಂತರ ಶೇಕಡವಾರು

196.

ಎಂ.ವಿ. ರಾಜಶೇಖರನ್ (ಕಾಂಗ್ರೆಸ್.

2,66,38.

1,21,39.

18.09%

197.

ಸಿ.ಕೆ. ಜಾಫರ್ ಷರೀಫ್ (ಕಾಂಗ್ರೆಸ್.

3,05,08.

2,43,98.

61.14%

197.

ಎಂ.ವಿ.ಚಂದ್ರಶೇಖರ ಮೂರ್ತಿ(ಕಾಂಗ್ರೆಸ್.

4,07,45.

1,92,1.

1.14%

198.

ಎಂ.ವಿ.ಚಂದ್ರಶೇಖರ ಮೂರ್ತಿ(ಕಾಂಗ್ರೆಸ್.

4,72,34.

2,52,38.

27.21%

198.

ಎಂ.ವಿ.ಚಂದ್ರಶೇಖರ ಮೂರ್ತಿ(ಕಾಂಗ್ರೆಸ್.

6,38,72.

3,05,21.

1.10%

198.

ಎಂ.ವಿ.ಚಂದ್ರಶೇಖರ ಮೂರ್ತಿ(ಕಾಂಗ್ರೆಸ್.

8,91,18.

4,72,26.

28.64%

199.

ಎಂ.ವಿ.ಚಂದ್ರಶೇಖರ ಮೂರ್ತಿ(ಕಾಂಗ್ರೆಸ್.

7,92,83.

3,01,45.

4.22%

199.

ಎಚ್.ಡಿ. ಕುಮಾರಸ್ವಾಮಿ(ಜೆಡಿಎಸ್.

10,45,91.

4,40,44.

10.27%

199.

ಎಂ.ಶ್ರೀನಿವಾಸ್(ಬಿಜೆಪಿ.

12,06,04.

4,70,38.

1.36%

19.

ಎಂ.ವಿ.ಚಂದ್ರಶೇಖರ ಮೂರ್ತಿ(ಕಾಂಗ್ರೆಸ್.

2,33,82.

5,32,91.

2.76%

200.

ತೇಜಸ್ವಿನಿ ರಮೇಶ್(ಕಾಂಗ್ರೆಸ್.

15,52,41.

5,83,92.

7.51%

200.

ಎಚ್.ಡಿ. ಕುಮಾರಸ್ವಾಮಿ(ಜೆಡಿಎಸ್.

19,04,13.

4,93,30.

27.25%

201.

ಡಿ.ಕೆ. ಸುರೇಶ್(ಕಾಂಗ್ರೆಸ್.

21,90,39.

6,52,72.

16.02 %

201.

ಡಿ.ಕೆ. ಸುರೇಶ್(ಕಾಂಗ್ರೆಸ್.

16,21,90.

8,78,25.

12.75

24ಕೆಆರ್ ಎಂಎನ್ 1,2,3ಜೆಪಿಜಿ

1.ಸಿ.ಕೆ.ಜಾಫರ್ ಷರೀಫ್

2.ಎಂ.ವಿ.ಚಂದ್ರಶೇಖರ ಮೂರ್ತಿ

3.ಎಚ್ .ಡಿ.ಕುಮಾರಸ್ವಾಮಿ