ಸಾರಾಂಶ
ಹಾಲುಮತ ಸಾಂಸ್ಕೃತಿಕ ವೈಭವ -2025 ಕಾರ್ಯಕ್ರಮವು ಜ. 12, 13, 14ರಂದು ಮೂರು ದಿನಗಳ ಕಾಲ ಅದ್ಧೂರಿಯಾಗಿ ಜರುಗಲಿದೆ.
ಕನ್ನಡಪ್ರಭ ವಾರ್ತೆ ಕುಕನೂರು
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ತಿಂಥಣಿ ಬ್ರಿಜ್ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರು ಪೀಠ ವತಿಯಿಂದ ಹಾಲುಮತ ಸಾಂಸ್ಕೃತಿಕ ವೈಭವ -2025 ಕಾರ್ಯಕ್ರಮವು ಜ. 12, 13, 14ರಂದು ಮೂರು ದಿನಗಳ ಕಾಲ ಅದ್ಧೂರಿಯಾಗಿ ಜರುಗಲಿದೆ. ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷವೂ ಕೂಡ ಕುಕನೂರು ಸೇರಿ ಸುತ್ತಮುತ್ತಲಿನ ಹಳ್ಳಿಗಳಿಂದ ಹಾಲುಮತ ಸಮಾಜದವರು ಗುರುಪೀಠಕ್ಕೆ ಧಾನ್ಯ, ದೇಣಿಗೆ ಇತರ ಸೇವೆಗಳನ್ನು ಮಾಡುತ್ತಾರೆ. ಈ ಬಾರಿಯೂ ಕೂಡ ಹೆಚ್ಚಿನ ರೀತಿಯಲ್ಲಿ ಜಾತ್ರೆಗೆ ಸೇವೆ ಸಲ್ಲಿಸುತ್ತಿದ್ದೇವೆ. ಚಿಂತನ-ಮಂಥನ, ಧಾರ್ಮಿಕ ಸಭೆ ಇತರ ಕಾರ್ಯಕ್ರಮಗಳು ಅದ್ಧೂರಿಯಾಗಿ ಜರುಗುತ್ತವೆ. ಪ್ರತಿದಿನ ಲಕ್ಷಾಂತರ ಭಕ್ತರು ಭಾಗಿಯಾಗುತ್ತಾರೆ ಎಂದು ಹೇಳಿದರು.
ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರು ತಿಂಥಣಿ ಬ್ರಿಜ್ ಪೀಠದ ತಾಲೂಕು ಸಮಿತಿಯ ಗಗನ ನೋಟಗಾರ, ತಾಲೂಕು ಹಾಲುಮತ ಸಮಾಜದ ಅಧ್ಯಕ್ಷ ಮಂಜುನಾಥ ಕಡೆಮನಿ, ಜಿಪಂ ಮಾಜಿ ಸದಸ್ಯ ಹನುಮಂತಗೌಡ ಚಂಡೂರು, ಸಿದ್ದಯ್ಯ ಕಳ್ಳಿಮಠ, ಸಂಗಮೇಶ ಗುತ್ತಿ, ಬಸವರಾಜ ಮಾಸೂರು, ರೆಹಮಾನಸಾಬ್ ಮಕಪ್ಪನವರ್, ಲಕ್ಷ್ಮಣ ಬೆದವಟ್ಟಿ, ಬಸವರಾಜ ಅಡವಿ, ಮಲ್ಲಪ್ಪ ಚಳ್ಳಮರದ, ಮಹೇಶ ಕವಲೂರು, ಶಿವಣ್ಣ ರಾಜೂರು, ಮಂಜುನಾಥ ಯಡಿಯಾಪುರ, ಸಂಗಪ್ಪ ನೋಟಗಾರ, ಯಲ್ಲಪ್ಪ ನೋಟಗಾರ, ಸಂತೋಷ ಬೆದವಟ್ಟಿ ಇತರರಿದ್ದರು.