ಸಾರಾಂಶ
ಚಿತ್ರದುರ್ಗ:ಸಂವಿಧಾನದ ವಜ್ರ ಮಹೋತ್ಸವದ ಹಬ್ಬವನ್ನು 26ರಂದು ನಗರದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಆಚರಿಸಲಾಗುವುದೆಂದು ವಜ್ರ ಮಹೇಶ್ ಮತ್ತು ಸ್ನೇಹಿತರು ತಿಳಿಸಿದರು. ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನ್ಯಾಯವಾದಿ ನರಹರಿ, ಸಂವಿಧಾನದ ಹಬ್ಬ ಮುನ್ನಾ ದಿನ 25ರಂದು ಅಂಬೇಡ್ಕರ್ ಸರ್ಕಲ್‍ನಿಂದ ಬೆಳಗ್ಗೆ 10ಕ್ಕೆ ಬೈಕ್ ರ್‍ಯಾಲಿ ಹೊರಟು ನಗರದ ರಾಜ ಬೀದಿಗಳಲ್ಲಿ ಸಂಚರಿಸಲಿದೆ. ಎಲ್ಲಾ ಜಾತಿ ಧರ್ಮದವರು ಸಂವಿಧಾನದ ಹಬ್ಬದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.ವಜ್ರ ಮಹೇಶ್ ಮಾತನಾಡಿ, ಕೇವಲ ದಲಿತರಷ್ಟೆ ಅಲ್ಲ ಎಲ್ಲಾ ಜಾತಿಯವರು ಸಂವಿಧಾನದ ಹಬ್ಬದಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಿದರು.ನ್ಯಾಯವಾದಿ ವಿಶ್ವಾನಂದ ಮಾತನಾಡಿ, ಅಂಬೇಡ್ಕರ್ ಸಂವಿಧಾನದ ಮೂಲಕ ದೇಶದ ಪ್ರತಿಯೊಬ್ಬರಿಗೂ ಸಮಾನ ಹಕ್ಕು ನೀಡಿದ್ದಾರೆ. ಮೂಲಭೂತ ಹಕ್ಕನ್ನು ಕೇಳುವುದಷ್ಟೆ ಅಲ್ಲ. ಕರ್ತವ್ಯವನ್ನು ಎಲ್ಲರೂ ಪಾಲಿಸಿದಾಗ ಮಾತ್ರ ಸಂವಿಧಾನಕ್ಕೆ ನಿಜವಾದ ಅರ್ಥ ಸಿಗುತ್ತದೆ ಎಂದರು. ಬ್ಯಾಲಾಳ್ ಜಯಪ್ಪ ಮಾತನಾಡಿ, ವಜ್ರ ಮಹೋತ್ಸವದಲ್ಲಿ ನಾನಾ ಭಾಗಗಳಿಂದ ಜನರು ಆಗಮಿಸುವ ನಿರೀಕ್ಷೆಯಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ನ್ಯಾಯವಾದಿಗಳಾದ ಎಸ್.ಕೆ.ಸುರೇಶ್ ಬಂಜಗೆರೆ, ಎಸ್.ದಯಾನಂದ್, ಮುನಿ, ಸುನಿಲ್, ಪ್ರಸನ್ನ ಉಪಸ್ಥಿತರಿದ್ದರು.
---------ಫೋಟೊ: ವಜ್ರ ಮಹೇಶ್ ಮತ್ತು ಸ್ನೇಹಿತರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.