ಸಾರಾಂಶ
-ಪಂಡಿತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಕರೆ
ಕನ್ನಡಪ್ರಭ ವಾರ್ತೆ ಕುಂದಾಣಕಳೆದ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದ ಜನರಿಂದ ಬಿಜೆಪಿಗೆ ೩೫ ಸಾವಿರ ಮತಗಳಿಸಲು ಸಾಧ್ಯವಾಯಿತು. ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಇದಕ್ಕಿಂತ ಹೆಚ್ಚು ಮತಗಳು ಹೆಚ್ಚಾಗುವ ರೀತಿಯಲ್ಲಿ ಪಕ್ಷ ಬಲವರ್ಧನೆ ಆಗಬೇಕು ಎಂದು ಮಾಜಿ ಶಾಸಕ ಪಿಳ್ಳಮುನಿಶಾಮಪ್ಪ ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕು ಪಂಡಿತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೋಂದಣಿ ಅಭಿಯಾನದ ಕುರಿತು ಏರ್ಪಡಿಸಿದ್ದ ಜಿಲ್ಲಾ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.ಚುನಾವಣೆ ಬಂದಾಗ ಮಾತ್ರ ಪಕ್ಷ ಕಟ್ಟಿದರೆ ಸಾಲದು. ವರ್ಷ ಪೂರ್ತಿ ಪಕ್ಷದ ಕಾರ್ಯಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು, ಗೊಂದಲವಿಲ್ಲದ ಪಕ್ಷಗಳಿಲ್ಲ, ಪಕ್ಷದ ಪದಾಧಿಕಾರಿಗಳು ಪ್ರತಿಯೊಂದು ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಪ್ರತಿ ಗ್ರಾಮಗಳ ಮನೆ ಮನೆಗೆ ತೆರಳಿ ಸಮರೋಪಾದಿಯಲ್ಲಿ ಸದಸ್ಯತ್ವ ಅಭಿಯಾನವನ್ನು ನೋಂದಣಿ ಮಾಡಿಸಬೇಕು ಎಂದರು.
ಪಕ್ಷದ ಸದಸ್ಯತ್ವ ಪಡೆಯಲು ೮೮೦೦೦೦೨೦೨೪ ನಂಬರಿಗೆ ಮಿಸ್ ಕಾಲ್ ನೀಡುವ ಮೂಲಕ ನೋಂದಣಿ ಮಾಡಬೇಕು. ಬೆಂಗಳೂರು ಗ್ರಾಮಾಂತರ ಜೆಲ್ಲೆಯಲ್ಲಿ ಸುಮಾರು ೮೫ ಸಾವಿರ ಜನ ಪಕ್ಷದ ಸದಸ್ಯತ್ವ ನೋಂದಣಿ ಮಾಡಿಸುವ ಗುರಿಯನ್ನು ಪಕ್ಷದ ವರಿಷ್ಠರು ಸೂಚಿಸಿದ್ದಾರೆ. ಪ್ರತಿಯೊಬ್ಬರೂ ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳಿದರು.ಪಕ್ಷದ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿ ಎಚ್.ಎಂ.ರವಿಕುಮಾರ್, ಸಿಕಾಯನಹಳ್ಳಿ ವಿನಯ್‌ಕುಮಾರ್, ಒಬಿಸಿ ಘಟಕದ ಜಿಲ್ಲಾಧ್ಯಕ್ಷ ವಿಜಯಪುರ ಕನಕರಾಜು, ಮಾಜಿ ಜಿಲ್ಲಾ ಅಧ್ಯಕ್ಷ ಎ.ವಿ.ನಾರಾಯಣಸ್ವಾಮಿ, ತಾ.ಅಧ್ಯಕ್ಷ ಸುಂದರೇಶ್, ಖಜಾಂಚಿ ಚನ್ನಕೇಶವ, ಮಾಜಿ ಗ್ರಾ.ಪಂ.ಅಧ್ಯಕ್ಷ ಸಿಕಾಯನಹಳ್ಳಿ ವಿನಯ್‌ಕುಮಾರ್, ಬುಳ್ಳಹಳ್ಳಿ ರಾಜಪ್ಪ, ನಂಜೇಗೌಡ, ಡೈರಿ ನಾಗೇಶ್, ರಮೇಶ್‌ಬಾಬು, ರವಿಕುಮಾರ್, ಬೈರೇಗೌಡ, ಜಗದೀಶ್, ಸುರೇಶ್, ವೆಂಕಟೇಶ್ ರಾಘವ ಸೇರಿದಂತೆ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.