ಜನತೆಗೆ ಸೌಲಭ್ಯ ನೀಡುವುದು ಪಕ್ಷದ ಉದ್ದೇಶ: ರಕ್ಷಿತಾ

| Published : May 22 2024, 12:50 AM IST

ಜನತೆಗೆ ಸೌಲಭ್ಯ ನೀಡುವುದು ಪಕ್ಷದ ಉದ್ದೇಶ: ರಕ್ಷಿತಾ
Share this Article
  • FB
  • TW
  • Linkdin
  • Email

ಸಾರಾಂಶ

ಜನರಿಗೆ ಸೌಲಭ್ಯ ಒದಗಿಸುವುದರ ಜೊತೆಗೆ ಮುಖ್ಯವಾಗಿ ಅವರ ಏಳಿಗೆ ಬಯಸುವುದು ಕಾಂಗ್ರೆಸ್ ಪಕ್ಷದ ಮೂಲ ಉದ್ದೇಶವಾಗಿದೆ. ರಾಜ್ಯದಲ್ಲಿ ಐದು ಗ್ಯಾರಂಟಿಗಳನ್ನು ಒಂದು ವರ್ಷಗಳ ಕಾಲ ನೀಡಿ ಯಶಸ್ವಿಯಾಗಿದೆ ಎಂದು ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರಕ್ಷಿತಾ ಭರತಕುಮಾರ ಈಟಿ ಹೇಳಿದರು.

ಬಾಗಲಕೋಟೆ: ಜನರಿಗೆ ಸೌಲಭ್ಯ ಒದಗಿಸುವುದರ ಜೊತೆಗೆ ಮುಖ್ಯವಾಗಿ ಅವರ ಏಳಿಗೆ ಬಯಸುವುದು ಕಾಂಗ್ರೆಸ್ ಪಕ್ಷದ ಮೂಲ ಉದ್ದೇಶವಾಗಿದೆ. ರಾಜ್ಯದಲ್ಲಿ ಐದು ಗ್ಯಾರಂಟಿಗಳನ್ನು ಒಂದು ವರ್ಷಗಳ ಕಾಲ ನೀಡಿ ಯಶಸ್ವಿಯಾಗಿದೆ. ನುಡಿದಂತೆ ನಡೆಯುವುದು ನಮ್ಮ ಸರ್ಕಾರದ ಬದ್ದತೆ. ಶಕ್ತಿ ಯೋಜನೆಗಳ ಮೂಲಕ ಮಹಿಳೆಯರು ಹಾಗೂ ಬಡ, ಮಧ್ಯಮ ವರ್ಗದ ಕುಟುಂಬಗಳಿಗೆ ಆರ್ಥಿಕ ಶಕ್ತಿ ನೀಡಿದೆ. ಜನರು ಕೂಡಾ ಪ್ರೀತಿಯಿಂದ ಯೋಜನೆಗಳನ್ನು ಸ್ವಾಗತ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ ಜನರ ವಿಶ್ವಾಸ, ನಂಬಿಕೆ ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ್ದಾರೆ ಎಂದು ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರಕ್ಷಿತಾ ಭರತಕುಮಾರ ಈಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.