ಭಗವಂತನು ಚನ್ನಮ್ಮನವರ ಅಗಲಿಕೆಯಿಂದ ದುಃಖತಪ್ತರಾಗಿರುವ ಎಚ್.ಡಿ.ದೇವೇಗೌಡರು ಮತ್ತು ಅವರ ಇಡೀ ಕುಟುಂಬ ವರ್ಗಕ್ಕೆ ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು, ಇಳೆಯ ಮೇಲಿನ ತಮ್ಮ ಬದುಕನ್ನು ಸಾರ್ಥಕ ಪಡಿಸಿಕೊಂಡಿರುವ ಚನ್ನಮ್ಮರ ಆತ್ಮಕ್ಕೆ ಚಿರಶಾಂತಿ ಕರುಣಿಸಲೆಂದು ಆಶಿಸುತ್ತೇನೆ.
ಮಂಡ್ಯ:
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಧರ್ಮಪತ್ನಿ, ಮಾತೃಶ್ರೀ ಚನ್ನಮ್ಮ ಅವರು ಭೌತಿಕವಾಗಿ ಇನ್ನಿಲ್ಲವಾದುದು ಅತ್ಯಂತ ದುಃಖದ ವಿಷಯ. ದೇವೇಗೌಡರೊಂದಿಗಿನ ಸುದೀರ್ಘ ದಾಂಪತ್ಯ ಜೀವನ ಮತ್ತು ಅವರ ಸಾರ್ವಜನಿಕ ಬದುಕಿನಲ್ಲಿ ಅವರಿಗೆ ನೆರಳಾಗಿದ್ದುಕೊಂಡು ಇಡೀ ಕುಟುಂಬವನ್ನು ಮುನ್ನಡೆಸಿದ ಶಕ್ತಿಯಾಗಿದ್ದರು.ಮುಖ್ಯಮಂತ್ರಿ ಮತ್ತು ಪ್ರಧಾನ ಮಂತ್ರಿಯ ಪತ್ನಿಯಾಗಿದ್ದರೂ ಸರಳತೆ ಸಾಕಾರ ಮೂರ್ತಿಯಂತಿದ್ದ ಅವರು ದೇವೇಗೌಡರಂತೆಯೇ ದೈವಭಕ್ತರಾಗಿದ್ದರು. ತಮ್ಮ ಪತಿಯ ಪ್ರತಿಕ್ಷಣದ ಆಗು ಹೋಗು, ಒಳಿತು ಕೆಡಕು ಎಲ್ಲವೂ ಭಗವಂತನ ಇಚ್ಛೆ ಎಂದು ನಂಬಿದ್ದರು.
ಭಗವಂತನು ಚನ್ನಮ್ಮನವರ ಅಗಲಿಕೆಯಿಂದ ದುಃಖತಪ್ತರಾಗಿರುವ ಎಚ್.ಡಿ.ದೇವೇಗೌಡರು ಮತ್ತು ಅವರ ಇಡೀ ಕುಟುಂಬ ವರ್ಗಕ್ಕೆ ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು, ಇಳೆಯ ಮೇಲಿನ ತಮ್ಮ ಬದುಕನ್ನು ಸಾರ್ಥಕ ಪಡಿಸಿಕೊಂಡಿರುವ ಚನ್ನಮ್ಮರ ಆತ್ಮಕ್ಕೆ ಚಿರಶಾಂತಿ ಕರುಣಿಸಲೆಂದು ಆಶಿಸುತ್ತೇನೆ.- ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಪೀಠಾಧ್ಯಕ್ಷರು. ಶ್ರೀಆದಿಚುಂಚನಗಿರಿ ಮಹಾಸಂಸ್ಥಾನ ಮಠ.
ಚನ್ನಮ್ಮರ ನಿಧನಕ್ಕೆ ಬಿ.ಪ್ರಕಾಶ್ ತೀವ್ರ ಸಂತಾಪಕೆ.ಆರ್.ಪೇಟೆ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪತ್ನಿ ಚನ್ನಮ್ಮರ ನಿಧನಕ್ಕೆ ಮಾಜಿ ಶಾಸಕ ಬಿ.ಪ್ರಕಾಶ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಜನತಾ ಪರಿವಾರದಲ್ಲಿದ್ದ ನಾನು ದೇವೇಗೌಡರ ಕುಟುಂಬದೊಂದಿಗೆ ನಿಕಟ ಒಡನಾಟ ಇಟ್ಟುಕೊಂಡು ಚನ್ನಮ್ಮರನ್ನು ಸಮೀಪದಿಂದ ಬಲ್ಲವನು. ಚನ್ನಮ್ಮನವರು ತಮ್ಮ ಜೀವನದಲ್ಲಿ ಎದುರಾದ ಕಷ್ಟ- ನೋವುಗಳಿಂದ ಕುಗ್ಗದೆ, ಎಲ್ಲವನ್ನೂ ಧೈರ್ಯದಿಂದ ಎದುರಿಸಿದ್ದ ಗಟ್ಟಿಗಿತ್ತಿ ಎಂದು ಹೇಳಿದ್ದಾರೆ.ದೇವೇಗೌಡರ ರಾಜಕೀಯ ಜೀವನದ ಏಳುಬೀಳಿನ ನಡುವೆ ದೊಡ್ಡ ಕುಟುಂಬವನ್ನು ಪೊರೆಯುತ್ತಾ ಬಂದ ಅವರು ಒಬ್ಬ ಆದರ್ಶ ಗೃಹಿಣಿಯಾಗಿತುಂಬು ಕುಟುಂಬಗಳಿಗೆ ಒಂದು ಆದರ್ಶ ಮಹಿಳೆಯಾಗಿದ್ದಾರೆ. ದೀರ್ಘಕಾಲದ ಸಂಗಾತಿಯನ್ನು ಈ ಇಳಿವಯಸ್ಸಿನಲ್ಲಿ ಕಳೆದುಕೊಂಡ ಎಚ್.ಡಿ.ದೇವೇಗೌಡರಿಗೆ ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತ ನೀಡಲಿ. ಗೌಡರ ಕುಟುಂಬ ಸದಸ್ಯರಿಗೆ ನನ್ನ ಸಂತಾಪಗಳು. ಅವರ ನೋವಿನಲ್ಲಿ ನಾನೂ ಭಾಗಿಯಾಗಿದ್ದೇನೆ. ಮೃತರ ಆತ್ಮಕ್ಕೆ ಚಿರಶಾಂತಿ ಲಭಿಸಲಿ ಎಂದು ಬಿ.ಪ್ರಕಾಶ್ ಸಂತಾಪ ಸೂಚಿಸಿದ್ದಾರೆ. ಚನ್ನಮ್ಮ ನಿಧನಕ್ಕೆ ಕೆಟಿಎಸ್ ಭಾವುಕ
ಮಂಡ್ಯ:ನಮ್ಮೆಲ್ಲರ ಮೇಲೆ ತಾಯಿ ಪ್ರೀತಿ ತೋರುತ್ತಿದ್ದ ಚನ್ನಮ್ಮ ಅವರ ನಿಧನದಿಂದ ತೀವ್ರ ದುಃಖವಾಗಿದೆ ಎಂದು ಮಾಜಿ ಶಾಸಕ ಕೆ.ಟಿ ಶ್ರೀಕಂಠೇಗೌಡ ಕಂಬನಿ ಮಿಡಿದಿದ್ದಾರೆ.
ಈ ರಾಷ್ಟ್ರದ ಧೀಮಂತ ನಾಯಕ, ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡರ ಧರ್ಮಪತ್ನಿ ಚನ್ನಮ್ಮ ನಮ್ಮೆಲ್ಲರನ್ನು ಅಗಲಿದ್ದಾರೆ, ಈ ಮಹಾತಾಯಿ ಬಹಳ ಜನರಿಗೆ ಅನ್ನ, ಆರೈಕೆ ಮಾಡಿದ್ದಾರೆ ಎಂದು ಸ್ಮರಿಸಿದ್ದಾರೆ.ದೇವೇಗೌಡರು ತಾಪಂನಿಂದ ವಿಧಾನಸಭೆಗೆ, ವಿಧಾನಸಭೆಯಲ್ಲಿ ಸಚಿವರಾಗಿ ಆನಂತರ ಮುಖ್ಯಮಂತ್ರಿಯಾಗಿ, ಆ ನಂತರ ಸಂಸದರಾಗಿ, ಪ್ರಧಾನ ಮಂತ್ರಿಯಾಗುವುದರಲ್ಲಿ ಇವರ ಅಪಾರ ಶ್ರಮ ಮತ್ತು ಕೊಡುಗೆ ಇದೆ ಎಂದು ನುಡಿದಿದ್ದಾರೆ.
ಸದಾ ಯಶಸ್ಸಿಗೆ ಬೆನ್ನಿಗೆ ನಿಂತವರು, ದೇವೇಗೌಡರೊಟ್ಟಿಗೆ ಬೆಂಗಳೂರು, ದೆಹಲಿಯಲ್ಲಿ ವಾಸ್ತವ್ಯ ಹೂಡಿ, ಪೋಷಣೆ ಮಾಡಿದರು, ಅತ್ಯಂತ ಅಪರೂಪದ ಮಹಿಳಾ ಮಾತೆಯಾಗಿದ್ದರು, ಸರಳತನಕ್ಕೆ ಹೆಸರಾಗಿದ್ದರು ಎಂದು ಸ್ಮರಿಸಿದ್ದಾರೆ.ದೊಡ್ಡ ಕುಟುಂಬ ನಿರ್ವಹಿಸಿದ್ದ ಸಾಧಕಿಶ್ರೀರಂಗಪಟ್ಟಣ:
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪತ್ನಿ ಮಾತೃ ಸ್ವರೂಪ ಚನ್ನಮ್ಮನವರು ಒಂದು ದೊಡ್ಡ ಕುಟುಂಬವನ್ನು ನಿರ್ವಹಿಸಿದ್ದ ಸಾಧಕಿ ಎಂದು ಜಿಪಂ ಮಾಜಿ ಸದಸ್ಯ ಕೆ.ಶೆಟ್ಟಹಳ್ಳಿ ಎಸ್.ಎಲ್.ಲಿಂಗರಾಜು ಹೇಳಿದ್ದಾರೆ.ಕಳೆದ 38 ವರ್ಷಗಳಿಂದಲೂ ಮಾಜಿ ಪ್ರಧಾನಿ ದೇವೇಗೌಡರ ಆದರ್ಶದಲ್ಲಿ ನಾನು ಬೆಳೆದು ನನಗೆ ರಾಜಕೀಯದ ಗುರುವಾಗಿದ್ದರು. ಅವರ ಮನೆಗೆ ಹೋದ ವೇಳೆ ದೇವೇಗೌಡರು ಇಲ್ಲದ ಸಮಯದಲ್ಲೂ ಅವರ ಪತ್ನಿ ಚನ್ನಮ್ಮ ಅವರು ಚೆನ್ನಾಗಿ ಮಾತನಾಡಿಸಿ ತಿಂಡಿ, ಊಟ ನೀಡಿ ಕಳುಹಿಸಿ ಕೊಡುತ್ತಿದ್ದರು. ಇಂದು ನಮ್ಮನ್ನು ಅಗಲಿದ ಚನ್ನಮ್ಮರ ಆತ್ಮಕ್ಕೆ ದೇವರು ಶಾಂತಿ ನೀಡಲಿ ಅವರ ಕುಟುಂಬದ ಸದಸ್ಯರಿಗೆ ದುಃಖ ತಡೆಯುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ.