ವೃದ್ಧ ರೋಗಿಯೊಬ್ಬರನ್ನು ಸರ್ಕಾರದ 108 ಅ್ಯಂಬ್ಯುಲೆನ್ಸ್ ಬಾರದೆ, ಕೊನೆಗೆ ಗೂಡ್ಸ್ ಟೆಂಪೊದಲ್ಲಿ ಆಸ್ಪತ್ರೆಗೆ ಸಾಗಿಸಿದ ವಿಷಾದಕರ ಘಟನೆ ಭಾನುವಾರ ಸಂಜೆ ಇಲ್ಲಿನ ಉದ್ಯಾವರದಲ್ಲಿ ನಡೆದಿದೆ.
ಉಡುಪಿ: ಪ್ರಾಣಾಪಾಯ ಸ್ಥಿತಿಯಲ್ಲಿದ್ದ ವೃದ್ಧ ರೋಗಿಯೊಬ್ಬರನ್ನು ಸರ್ಕಾರದ 108 ಅ್ಯಂಬ್ಯುಲೆನ್ಸ್ ಬಾರದೆ, ಕೊನೆಗೆ ಗೂಡ್ಸ್ ಟೆಂಪೊದಲ್ಲಿ ಆಸ್ಪತ್ರೆಗೆ ಸಾಗಿಸಿದ ವಿಷಾದಕರ ಘಟನೆ ಭಾನುವಾರ ಸಂಜೆ ಇಲ್ಲಿನ ಉದ್ಯಾವರದಲ್ಲಿ ನಡೆದಿದೆ.
ರಾತ್ರಿ 7 ಗಂಟೆಗೆ ಈ ವೃದ್ಧ ರೋಗಿ ಅಸ್ವಸ್ಥಗೊಂಡರು, ತಕ್ಷಣ ಮನೆಯವರು ಆ್ಯಂಬ್ಯುಲೆನ್ಸ್‌ಗಾಗಿ 108ಕ್ಕೆ ಕರೆ ಮಾಡಿದರು, ಆದರೆ 9.30ರವರೆಗೂ ಆಂಬುಲೆನ್ಸ್ ಬರಲಿಲ್ಲ, ಅಷ್ಟರಲ್ಲಿ ರೋಗಿಯ ಪರಿಸ್ಥಿತಿ ಬಿಗಡಾಯಿಸಿತು, ಕೊನೆಗೆ ಮನೆಯವರು ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರಿಗೆ ಕರೆ ಮಾಡಿದರು.ತಕ್ಷಣ ಅಲ್ಲಿಗೆ ಧಾವಿಸಿದ ವಿಶು ಶೆಟ್ಟಿ ಅವರು ಖಾಸಗಿ ಅ್ಯಂಬ್ಯುಲೆನ್ಸ್‌ಗೆ ಕರೆ ಮಾಡಿದರೂ, ಭಾನವಾರುವಾದ್ದರಿಂದ ಯಾವ ಅ್ಯಂಬುಲೆನ್ಸ್ ಸಿಗಲಿಲ್ಲ. ಕೊನೆಗೆ ವಿಶು ಶೆಟ್ಟಿ ಅವರು ಸ್ಟ್ರೇಚರ್ ಇಲ್ಲದ ಕಾರಣ ಹೊದಿಕೆಯಲ್ಲಿ ರೋಗಿಯನ್ನು ಎತ್ತಿ, ತಮ್ಮದೇ ಗೂಡ್ಸ್ ಟೆಂಪೋದಲ್ಲಿ ಮಂಚ ಇರಿಸಿ ರೋಗಿಯನ್ನು ಅದರಲ್ಲಿ ಮಲಗಿಸಿ ಆಸ್ಪತ್ರೆಗೆ ದಾಖಲಿಸಿದರು. ಈ ಘಟನೆ ಬಗ್ಗೆ ವಿಶು ಶೆಟ್ಟಿ ಅಂಬಲಪಾಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಿಂದ ಈ ಸಮಸ್ಯೆ ಇದೆ. ಜಿಲ್ಲೆಯಲ್ಲಿ ಒಟ್ಟಿ 18ರಷ್ಟು ಈ ಸರ್ಕಾರಿ ಆ್ಯಂಬ್ಯುಲೆನ್ಸ್ ಗಳಿವೆ. ಆದರ ಅವುಗಳಲ್ಲಿ ದುರಸ್ತಿ, ಚಾಲಕರ ಸಮಸ್ಯೆ ಇತ್ಯಾದಿಗಳಿಂದ ಕೇವಲ ನಾಲ್ಕೈದು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಈ ಬಗ್ಗೆ ಜಿಲ್ಲಾಡಳಿಕ್ಕೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ, ಜಿಲ್ಲಾಧಿಕಾರಿ ಅವರು ಇನ್ನಾದೂ ಈ ಸಮಸ್ಯೆ ಪರಿಹರಿಸಬೇಕು, ದಯವಿಟ್ಟು, ಬಡ ಜನರ ಜೀವದ ಜೊತೆ ಚೆಲ್ಲಾಟವಾಡಬೇಡಿ ಎಂದು ಆಗ್ರಹಿಸಿದ್ದಾರೆ.