ಅಭಿವೃದ್ಧಿಗೆ ಕರ ವಸೂಲಿ ಮುಖ್ಯ ಭಾಗವಾಗಿದ್ದು, ಸಕಾಲದಲ್ಲಿ ಕರ ಸಂದಾಯ ಮಾಡುವ ಮೂಲಕ ಸಾರ್ವಜನಿಕರು ಪಟ್ಟಣದ ಅಭಿವೃದ್ಧಿಗೆ ಸಹಕರಿಸಬೇಕು.
ಗಜೇಂದ್ರಗಡ: ಪಟ್ಟಣದ ೨೩ ವಾರ್ಡ್‌ಗಳಲ್ಲಿ ಸಮರ್ಪಕ ಕುಡಿಯುವ ನೀರು ಸೇರಿ ಅಭಿವೃದ್ಧಿ ಕಾರ್ಯಗಳಿಗೆ ಬಜೆಟ್ ಹೊಂದಿಸಲಾಗಿದ್ದು, ಸಾರ್ವಜನಿಕರು ಪುರಸಭೆಗೆ ಸಕಾಲದಲ್ಲಿ ಕರ ಸಂದಾಯ ಮಾಡುವ ಮೂಲಕ ಪಟ್ಟಣದ ಅಭಿವೃದ್ಧಿಗೆ ಕೈಜೋಡಿಸಿ ಎಂದು ಶಾಸಕ ಜಿ.ಎಸ್. ಪಾಟೀಲ ಮನವಿ ಮಾಡಿದರು.
ಸ್ಥಳೀಯ ಪುರಸಭೆ ಆವರಣದಲ್ಲಿ ಸೋಮವಾರ ೨೦೨೬- ೨೭ನೇ ಸಾಲಿನ ವಾರ್ಷಿಕ ಬಜೆಟ್ ಮಂಡನೆ ಜತೆಗೆ ಪೌರಕಾರ್ಮಿಕರಿಗೆ ೨ ವಿಶ್ರಾಂತಿ ಗೃಹ ಉದ್ಘಾಟನೆ ಹಾಗೂ ರಾಸಾಯನಿಕ ಸಿಂಪಡಣಾ ೩ ವಾಹನಗಳಿಗೆ ಸಾರ್ವಜನಿಕ ಸೇವೆಗೆ ಚಾಲನೆ ನೀಡಿ ಮಾತನಾಡಿದರು.ಪಟ್ಟಣದ ಪ್ರತಿ ವಾರ್ಡಿನಲ್ಲಿ ಪುರಸಭೆಯಿಂದ ಸಮರ್ಪಕ ನೀರು ಪೂರೈಕೆಗೆ ಆದ್ಯತೆ ನೀಡಲಾಗುತ್ತಿದೆ. ಆದರೆ ನೀರಿನ ಕರ ನಿರೀಕ್ಷಿತ ಪ್ರಮಾಣದಲ್ಲಿ ವಸೂಲಿಯಾಗುತ್ತಿಲ್ಲ. ಅಭಿವೃದ್ಧಿಗೆ ಕರ ವಸೂಲಿ ಮುಖ್ಯ ಭಾಗವಾಗಿದ್ದು, ಸಕಾಲದಲ್ಲಿ ಕರ ಸಂದಾಯ ಮಾಡುವ ಮೂಲಕ ಸಾರ್ವಜನಿಕರು ಪಟ್ಟಣದ ಅಭಿವೃದ್ಧಿಗೆ ಸಹಕರಿಸಬೇಕು. ಅಲ್ಲದೆ ಮುಖ್ಯಾಧಿಕಾರಿ ನೀರಿನ ಕರ ವಸೂಲಿ ಸಂಗ್ರಹಕ್ಕೆ ಆದ್ಯತೆ ನೀಡಬೇಕು ಎಂದು ಸೂಚಿಸಿದರು.
ಪಟ್ಟಣದಲ್ಲಿ ಅಮೃತ್ ೨.೦ ಯೋಜನೆ ಕಾಮಗಾರಿ ಪ್ರಗತಿಯಲ್ಲಿದ್ದು, ಮುಂದಿನ ದಿನಗಳಲ್ಲಿ ಪ್ರತಿದಿನ ಪ್ರತಿ ಮನೆಗಳಿಗೆ ನೀರು ಪೂರೈಕೆಗೆ ಆಡಳಿತ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದರು. ಗಜೇಂದ್ರಗಡ ಪುರಸಭೆಯ ೨೦೨೬- ೨೭ನೇ ಸಾಲಿನ ಬಜೆಟ್ ವರದಿಯನ್ನು ಪುರಸಭೆ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ ಮಂಡಿಸಿದರು, ಶಾಸಕ ಜಿ.ಎಸ್. ಪಾಟೀಲ ಅವರು ಬಜೆಟ್ ವರದಿಗೆ ಅನುಮೋದನೆ ನೀಡಿದರು.ಈ ವೇಳೆ ಪುರಸಭೆ ಮಾಜಿ ಅಧ್ಯಕ್ಷ ಸುಭಾಸ ಮ್ಯಾಗೇರಿ, ಸ್ಥಾಯಿ ಸಮಿತಿ ಮಾಜಿ ಚೇರ್ಮನ್ ಮುದಿಯಪ್ಪ ಮುಧೋಳ, ಮಾಜಿ ಸದಸ್ಯರಾದ ಮುರ್ತುಜಾ ಡಾಲಾಯತ, ಶಿವರಾಜ ಘೋರ್ಪಡೆ, ರಾಜು ಸಾಂಗ್ಲೀಕರ ಮುಖಂಡರಾದ ಸಿದ್ದಪ್ಪ ಬಂಡಿ, ಚಂಬಣ್ಣ ಚವಡಿ, ಶ್ರೀಧರ ಬಿದರಳ್ಳಿ, ಉಮೇಶ ರಾಠೋಡ ಹಾಗೂ ಮಲ್ಲಿಕಾರ್ಜುನಯ್ಯ, ಎನ್.ಎಚ್. ಖುದಾನವರ, ಶಿವಕುಮಾರ ಇಲಾಳ, ರಾಘವೇಂದ್ರ ಮಂತಾ, ನಜೀರ ಸಾಂಗ್ಲೀಕರ, ಶಾರದಾ ರಾಠೋಡ, ಸುಮಂಗಲಾ ಇಟಗಿ ಸೇರಿ ಇತರರು ಇದ್ದರು.ಮುಂಡರಗಿ ತಾಲೂಕು ಆಸ್ಪತ್ರೆ ಸೌಲಭ್ಯ ಸದ್ಬಳಕೆಗೆ ಮನವಿ
ಮುಂಡರಗಿ: 100 ಹಾಸಿಗೆಗಳುಳ್ಳ ಪಟ್ಟಣದ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಫಿಜಿಸಿಯನ್, ಚಿಕ್ಕಮಕ್ಕಳ ತಜ್ಞರು, ಎಲುಬು ಕೀಲುಗಳ ತಜ್ಞರು, ಹಲ್ಲಿನ ತಜ್ಞರು, ಕಣ್ಣಿನ ತಜ್ಞರು, ಗೈನಾಕಾಲಾಜಿಸ್ಟ್ ಸೇರಿ ಎಲ್ಲ ತಜ್ಞ ವೈದ್ಯರಿದ್ದಾರೆ. ಜನತೆ ಸಕಲ ಸೌಲಭ್ಯಗಳುಳ್ಳ ತಾಲೂಕು ಸರ್ಕಾರಿ ಆಸ್ಪತ್ರೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ. ಲಕ್ಷ್ಮಣ ಪೂಜಾರ ತಿಳಿಸಿದರು.ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಏಪ್ರಿಲ್‌ನಲ್ಲಿ ಅರವಳಿಕೆ ತಜ್ಞರೂ ಆಗಮಿಸುವರು. ತಾಲೂಕು ಆಸ್ಪತ್ರೆಗೆ ತಾಲೂಕಿನ ಜನತೆ ಜತೆಗೆ ನೆರೆಯ ಕೊಪ್ಪಳ, ಶಿರಹಟ್ಟಿ, ಹೂವಿನಹಡಗಲಿ ಮುಂತಾದ ತಾಲೂಕುಗಳಿಂದಲೂ ರೋಗಿಗಳು ಬರುವುದರಿಂದ ತಿಂಗಳಿಗೆ ಸುಮಾರು 14 ಸಾವಿರ ರೋಗಿಗಳು ಆಸ್ಪತ್ರೆಯ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ.ಪ್ರತಿ ತಿಂಗಳು 1500 ಒಳರೋಗಿಗಳು ದಾಖಲಾಗುತ್ತಿದ್ದಾರೆ. ಪ್ರತಿ ತಿಂಗಳು 40ರಿಂದ 50 ಸಹಜ ಹೆರಿಗೆ ಮಾಡಿಸುತ್ತಿರುವುದರಿಂದ ಇದು ಸಹಜ ಹೆರಿಗೆಗೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಆಸ್ಪತ್ರೆಗೆ ಎಂಬ ಹೆಗ್ಗಳಿಕೆಗೆ ಕಾರಣವಾಗಿದ್ದು, ತಾಯಿ- ಮಗು ಸುರಕ್ಷತೆಯ ದೃಷ್ಟಿಯಿಂದ ಇಲ್ಲಿನ ನರ್ಸ್‌ಗಳು ಹಾಗೂ ವೈದ್ಯರು ಸಹಜ ಹೆರಿಗೆಗೆ ಆದ್ಯತೆ ನೀಡುತ್ತಿದ್ದಾರೆ. ಹೀಗಾಗಿ ಇದು ಜಿಲ್ಲೆಯಲ್ಲಿ ಉತ್ತಮ ತಾಲೂಕು ಆಸ್ಪತ್ರೆ ಎಂದು ಹೆಸರು ಮಾಡಿದೆ ಎಂದರು.