ಭಗವಂತನ ಸ್ಮರಣೆಯಿಂದ ಶಾಂತಿ-ನೆಮ್ಮದಿ: ಕಣ್ವಶ್ರೀ

| Published : Jul 06 2024, 12:49 AM IST

ಭಗವಂತನ ಸ್ಮರಣೆಯಿಂದ ಶಾಂತಿ-ನೆಮ್ಮದಿ: ಕಣ್ವಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ದೇವದುರ್ಗ ಸಮೀಪದ ಸುರಪೂರ ತಾಲೂಕಿನ ಹುಣಸಿಹೊಳೆ ಶ್ರೀ ಕಣ್ವಮಠ ಮೂಲ ಸಂಸ್ಥಾನದಲ್ಲಿ ಜರುಗಿದ ಶ್ರೀ1008 ಶ್ರೀವಿದ್ಯಾಭಾಸ್ಕರತೀರ್ಥ ಶ್ರೀಪಾದಂಗಳವರ ಉತ್ತರಾಧನೆ ನಡೆಯಿತು.

ಕನ್ನಡಪ್ರಭ ವಾರ್ತೆ ದೇವದುರ್ಗ

ಭಗವಂತನ ನಿತ್ಯ ಸ್ಮರಣೆಯಿಂದ ಬದುಕಿನಲ್ಲಿ ಶಾಂತಿ-ನೆಮ್ಮದಿ ದೊರಕುತ್ತಿದ್ದು ಧಾರ್ಮಿಕ ಚಿಂತನೆಗಳತ್ತ ಭಕ್ತರು ಗಮನಹರಿಸಬೇಕಾಗಿದೆ. ಶ್ರೀಮಠ ಭಕ್ತರ ಆಶೋತ್ತರಗಳಿಗೆ ಸ್ಪಂದಿಸುವದೇ ಮುಖ್ಯ ಉದ್ದೇಶವಾಗಿದೆ ಎಂದು ಶ್ರೀ ವಿದ್ಯಾ ಕಣ್ವ ವಿರಾಜ ತೀರ್ಥಪಾದಂಗಳವರು ತಿಳಿಸಿದರು.

ಸುರಪೂರ ತಾಲೂಕಿನ ಹುಣಸಿಹೊಳೆ ಶ್ರೀ ಕಣ್ವಮಠ ಮೂಲ ಸಂಸ್ಥಾನದಲ್ಲಿ ಜರುಗಿದ ಶ್ರೀ1008 ಶ್ರೀವಿದ್ಯಾಭಾಸ್ಕರತೀರ್ಥ ಶ್ರೀಪಾದಂಗಳವರ ಉತ್ತರಾಧನೆ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಕೃಷಿ ಕ್ಚೇತ್ರದಲ್ಲಿ ಅಪಾರ ಆಸಕ್ತಿ ಹೊಂದಿದ್ದ ಶ್ರೀ ವಿದ್ಯಾಭಾಸ್ಕರತೀರ್ಥರು, ಸಂಸ್ಕೃತ ಸೇರಿದಂತೆ ಬಹುಭಾಷಾ ಪಂಡಿತರಾಗಿದ್ದರು. ಇಂತಹ ಯತಿಗಳ ಶ್ರಮ, ಸಂದೇಶ ಸರ್ವ ಕಾಲಕ್ಕೂ ಸರ್ವರಿಗೂ ಅತ್ಯಗತ್ಯ ಶ್ರೀವಿದ್ಯಾಕಣ್ವ ವಿರಾಜತೀರ್ಥಪಾದಂಗಳವರು ತಿಳಿಸಿದರು.

ಇದೇ ವೇಳೆ ಅಪೇಕ್ಷಾ ಎಸ್.ಎನ್.ಸರಕೀಲ್ರ ದಾಸವಾಣಿ ಕಾರ್ಯಕ್ರಮ ಮನಸೂರೆಗೊಳಿಸಿತು. ಹಾರ್ಮೋನಿಯಂ ಮಾರುತಿ ಸಾಂತಪೂರ, ತಬಲಾ ಸೇವೆ ಹೊನ್ನಲಿಂಗ ರುದ್ರಾಕ್ಷಿ ಮಾಡಿದರು.

ಉತ್ತರಾಧನೆ ನಿಮಿತ್ತ ಉಪಾಸ್ಯದೇವರಿಗೆ ಅಭಿಷೇಕ, ಸಂಸ್ಥಾನ ಪೂಜೆ, ಯತಿವೃಂದಾವನ ಹಸ್ತೋದಕ, ಮಹಮಂಗಳಾರತಿ ಹಾಗೂ ಭಕ್ತರಿಗೆ ತೀರ್ಥ-ಪ್ರಸಾದ, ಫಲ ಮಂತ್ರಾಕ್ಷತೆ ವಿತರಿಸಲಾಯಿತು. ಈ ಸಂದರ್ಭದಲ್ಲಿ ಮುಖಂಡರಾದ ಔದಂಬರಭಟ್ಟ, ಕೃಷ್ಠಾಚಾರ್ ತುರಡಗಿ, ಪ್ರಸನ್ನ ಆಲಂಪಲ್ಲಿ, ಮಧುಸೂಧನ ಆಚಾರ್ ಜೋಷಿ, ಪ್ರಮೋದಾಚಾರ್ ಜೋಷಿ, ಮಂಜುನಾಥ ಕುಲಕರ್ಣಿ ಹಾಗೂ ಇತರರು ಇದ್ದರು.