ಸಾರಾಂಶ
ಕನ್ನಡಪ್ರಭ ವಾರ್ತೆ ಕೊರಟಗೆರೆ
ಜಾತಿ ಧರ್ಮಗಳನ್ನು ಒಟ್ಟುಗೂಡಿಸಿ ಭಾವೈಕ್ಯತೆಯೊಂದಿಗೆ ಪರಸ್ಪರ ಸೌಹಾರ್ದತೆ ಬೆಳೆಸುವ ಗಣೇಶೋತ್ಸವ ಸಮಾಜದಲ್ಲಿ ಶಾಂತಿ ನಮ್ಮೆದಿಗೆ ಪೂರಕ ಎಂದು ಎಲೆರಾಂಪುರ ಕುಂಚಿಟಿರ ಮಹಾಸಂಸ್ಥಾನ ಮಠದ ಡಾ.ಶ್ರೀ ಹನುಮಂತನಾಥ ಸ್ವಾಮೀಜಿ ತಿಳಿಸಿದರು.ಪಟ್ಟಣದ ಆರಾಧ್ಯ ದೈವ ಹಾಗೂ ಉದ್ಬವ ಮೂರ್ತಿ ಕಟ್ಟೆ ಗಣಪತಿ ದೇವಾಲಯದ ಸಮುದಾಯ ಭವನದಲ್ಲಿ ಶ್ರೀ ಕಟ್ಟೆ ಗಣಪತಿ ದೇವಾಲಯ ಅಭಿವೃದ್ದಿ ಟ್ರಸ್ಟ್, ಶ್ರೀ ಕಟ್ಟೆಗಣಪತಿ ಯುವಕ ಮಂಡಲಿ ಹಾಗೂ ಮಹಿಳಾ ಮಂಡಲಿ ಸಹಯೋಗದಲ್ಲಿ ೧೬ನೇ ವರ್ಷದ ಗಣಪತಿ ಮಹೋತ್ಸವ ಪ್ರತಿಷ್ಠಾಪನಾ ವೇದಿಕೆಯಲ್ಲಿ ಲೋಕಕಲ್ಯಾಣಾರ್ಥ ಶ್ರೀ ಮಹಾಗಣಪತಿ ಮೋದಕ ಹೋಮ ಕಾರ್ಯಕ್ರಮದ ದಿವ್ಯಸಾನಿದ್ಯವಹಿಸಿ ಮಾತನಾಡಿದರು.
ನಾವೆಲ್ಲಾ ವಸುದೈವ ಕುಟುಂಬ ಎನ್ನವ ರೀತಿ ಬಾಳುತ್ತಿರುವ ಭಾರತ ದೇಶ ಜಗತ್ತಿಗೆ ಮಾದರಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಗಣೇಶೋತ್ಸವ ದ್ವೇಷ, ಅಸೂಯೆ, ಘರ್ಷಣೆಗಳಿಗೆ ಕಾರಣವಾಗಿ ಪೊಲೀಸರ ಸರ್ಪಕಾವಲಿನಲ್ಲಿ ಹಾಗೂ ಸರ್ಕಾರದಿಂದ ಆದೇಶ ಪಡೆದು ಭಕ್ತರಿಗೆ ಪ್ರಸಾದ ವಿರತಣೆ ಮಾಡುವ ಪರಿಸ್ಥಿತಿ ನಿರ್ಮಾಣ ವಾಗುತ್ತಿರುವುದು ವಿಷಾದನೀಯ ಎಂದರು.ಗಣೇಶೋತ್ಸವ ಕಾರ್ಯಕ್ರಮದಲ್ಲಿ ವೇ.ಬ್ರ. ಶ್ರೀ, ದತ್ತಾತ್ರೇಯ ದೀಕ್ಷಿತ್, ರಾಜೇಶ್ ದೀಕ್ಷಿತ್, ಶಿವನಂದನ್ ದೀಕ್ಷಿತ್, ಯದುನಂದನ ದೀಕ್ಷಿತ್, ರಘುನಂದನ್ ದೀಕ್ಷಿತ್ ಮತ್ತು ಚಂದ್ರಶೇಖರ್ ಶರ್ಮಾ ನೇತೃತ್ವದಲ್ಲಿ ಲೋಕಕಲ್ಯಾಣಾರ್ಥ ಶ್ರೀ ಮಹಾಗಣಪತಿ ಮೋದಕ ಹೋಮ ನೆರವೇರಿಸಲಾಯಿತು.ಕಾರ್ಯಕ್ರಮದಲ್ಲಿ ಡಾ.ಆತ್ಮರಾಮ್, ಡಾ.ಶುಭಾ, ನಿವೃತ್ತ ಪ್ರಾಚಾರ್ಯ ಕೆ.ಪಿ.ರಾಜಣ್ಣ, ಮಂಜುಳಾ ಮಯೂರ ಗೋವಿಂದರಾಜು, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ವಿ.ಪುರಷೋತ್ತಮ್ , ಉಪಾಧ್ಯಕ್ಷ ನಾಗರಾಜು, ಹರೀಶ್, ದೇವಾಲಯದ ಅಭಿವೃದ್ದಿ ಸಮಿತಿ ನಿರ್ದೇಶಕ ಎನ್.ಪದ್ಮನಾಭ್, ಯುವಕ ಸಂಘದ ಅಧ್ಯಕ್ಷ ಬೆನಕಾ ವೆಂಕಟೇಶ್, ಮಹಿಳಾ ಸಂಘದ ಅಧ್ಯಕ್ಷ ಗಿರಿಜಮ್ಮ, ಯುವಕ ಮಂಡಲಿಯ ನಿರ್ದೆಶಕರಾದ ಕೆ.ಬಿ.ಲೋಕೇಶ್, ವಿಜಯ್‌ಕುಮಾರ್, ಸಂಜಯ್, ಕೆ.ಪಿ.ಅಭಿಲಾಷ್, ಕೆ.ಪಿ.ಯಶಸ್ಸ್, ಬೆಸ್ಕಾಂ ನಟರಾಜು, ರಜಿಂತ್‌ಕುಮಾರ್, ಗುರುದತ್, ಸಿದ್ದೇಶ್ ಸಚಿನ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.