ಮಠ-ಮಂದಿರಗಳಿಂದ ಮನಸ್ಸಿಗೆ ನೆಮ್ಮದಿ: ಮರುಳಸಿದ್ದ ಶ್ರೀ

| Published : Feb 10 2025, 01:48 AM IST

ಮಠ-ಮಂದಿರಗಳಿಂದ ಮನಸ್ಸಿಗೆ ನೆಮ್ಮದಿ: ಮರುಳಸಿದ್ದ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ದೇವಾಲಯಕ್ಕೆ ಕಳಸ ಚಂದ, ಗ್ರಾಮಕ್ಕೆ ದೇವಾಲಯ ಇದ್ದರೆ ಚೆಂದ. ಮಠ-ಮಂದಿರಗಳಿಂದ ಮನಸ್ಸಿಗೆ ನೆಮ್ಮದಿ ಲಭಿಸುವುದು. ಶುದ್ಧ ಭಕ್ತಿ ಇದ್ದರೆ ಮನೆಯ ಮಂತ್ರಾಯಲವಾಗಲಿದೆ ಎಂದು ಅಥಣಿ ಶೆಟ್ಟರ ಮಠದ ಮರುಳಸಿದ್ದ ಮಹಾಸ್ವಾಮೀಜಿ ನುಡಿದರು.

ಕನ್ನಡಪ್ರಭ ವಾರ್ತೆ ಐಗಳಿ

ದೇವಾಲಯಕ್ಕೆ ಕಳಸ ಚಂದ, ಗ್ರಾಮಕ್ಕೆ ದೇವಾಲಯ ಇದ್ದರೆ ಚೆಂದ. ಮಠ-ಮಂದಿರಗಳಿಂದ ಮನಸ್ಸಿಗೆ ನೆಮ್ಮದಿ ಲಭಿಸುವುದು. ಶುದ್ಧ ಭಕ್ತಿ ಇದ್ದರೆ ಮನೆಯ ಮಂತ್ರಾಯಲವಾಗಲಿದೆ ಎಂದು ಅಥಣಿ ಶೆಟ್ಟರ ಮಠದ ಮರುಳಸಿದ್ದ ಮಹಾಸ್ವಾಮೀಜಿ ನುಡಿದರು.

ಸ್ಥಳೀಯ ಹನುಮಾನ ದೇವಾಲಯದ ಕಳಸಾರೋಹಣ ನೆರವೇರಿಸಿ ಮಾತನಾಡಿದ ಅವರು, ಪ್ರತಿ ಗ್ರಾಮದಲ್ಲಿ ಹನುಮಾನ ದೇವಾಲಯಗಳು ಇವೆ. ಭಕ್ತರ ಸಂಖ್ಯೆಯೂ ಸಹ ಹೆಚ್ಚಾಗಿದೆ. ಐಗಳಿ ಗ್ರಾಮ ಭಾವೈಕ್ಯತೆಗೆ ಹೆಸರಾಗಿದ್ದು, ದೇವರು ಭಕ್ತರಿಗೆ ಆಯುಷ್ಯ ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಹಾರೈಸಿದರು.

ಆದರ್ಶ ಶಿಕ್ಷಕ ಅಪ್ಪಾಸಾಬ ತೆಲಸಂಗ ಮಾತನಾಡಿ, ಹಿಂದಿನ ಸರ್ಕಾರದಲ್ಲಿ ಮಾಜಿ ಸಚಿವೆ ಶಶಿಕಲಾ ಜೋಲ್ಲೆ ₹5 ಲಕ್ಷ ಅನುದಾನ ನೀಡಿದ್ದರಿಂದ ಹನುಮಾನ ದೇವಾಲಯ ಶಿಖರ ಸುಂದರವಾಗಿ ನಿರ್ಮಾಣವಾಯಿತು ಎಂದರು. ಗ್ರಾಮದ ವಿವಿಧ ಸಂಘ-ಸಂಸ್ಥೆ ಹಾಗೂ ವೈಯಕ್ತಿಕವಾಗಿ ಸಹಾಯ, ಪ್ರಸಾದ ವ್ಯವಸ್ಥೆ ಹಾಗೂ ಕಳಸ ನೀಡಿದವರಿಗೂ ಗೌರವಿಸಿ ಸತ್ಕರಿಸಲಾಯಿತು.

ಕನ್ನಾಳ ಬಸವಲಿಂಗ ಸ್ವಾಮೀಜಿ, ಅಪ್ಪಯ್ಯ ಹಿರೇಮಠ, ಪೃಥ್ವಿರಾಜ ಹಿರೇಮಠ, ಬಸಯ್ಯ ಮಠಪತಿ, ಶಂಕರಯ್ಯ ಮಠಪತಿ ರವರು ನವಗೃಹ ಹಾಗೂ ಅಷ್ಟಲಕ್ಷ್ಮೀ ವಿಶೇಷ ಪೂಜೆ ನೆರವೇರಿಸಿದರು. ಸುಮಾರು 500 ಜನ ಕುಂಭ ಹೊತ್ತು ಬಸವೇಶ್ವರ ದೇವಸ್ಥಾನ, ಕನಕದಾಸ ವೃತ್ತ, ಮಾಳಿ ಓಣಿ, ಬಸವೇಶ್ವರ ವೃತ್ತ, ಮುಖ್ಯ ಬಜಾರ ಮೂಲಕ ದೇವಾಲಯವರೆಗೆ ಕುಂಭೋತ್ಸವ ಮೆರಗು ಮೂಡಿತು.

ತಾಪಂ ಮಾಜಿ ಸದಸ್ಯ ಅಣ್ಣಾರಾಯ ಹಾಲಳ್ಳಿಯಿಂದ ಅನ್ನಪ್ರಸಾದ, ನೂತನ ಕಳಸದ ವೆಚ್ಚ ಶಿವನಿಂಗ ಅರಟಾಳ ಸೇರಿದಂತೆ ಅನೇಕರು ವಿವಿಧ ರೂಪದಲ್ಲಿ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಯಿತು. ಗಣ್ಯರಾದ ಸಿ.ಎಸ್.ನೇಮಗೌಡ, ಗುರಪ್ಪ ಬಿರಾದಾರ, ಎ.ಎಸ್.ನಾಯಿಕ, ಎನ್.ಜಿ.ಪಾಟೀಲ, ಶಿವಾನಂದ ಸಿಂಧೂರ, ಅಪ್ಪಾಸಾಬ ಪಾಟೀಲ, ಅಪ್ಪು ಮಾಳಿ, ರವೀಂದ್ರ ಹಾಲಳ್ಳಿ, ಶ್ರೀಶೈಲ ಮಿರ್ಜಿ, ಬಸವರಾಜ ಬಿರಾದಾರ, ಸುರೇಶ ಬಿಜ್ಜರಗಿ, ಯಲ್ಲಪ್ಪ ಮಿರ್ಜಿ, ಗಣಪತಿ ಗುರವ, ಚನಬಸಪ್ಪ ಕನಶೆಟ್ಟಿ, ಸುಧಾಕರ ಡಂಬಳಕರ ಸೇರಿ ಹನುಮ ಮಾಲಾಧಾರಿಗಳು, ಗ್ರಾಪಂ ಅಧ್ಯಕ್ಷರು ಸದಸ್ಯರು ಇದ್ದರು.

ಮೆರವಣಿಗೆಯಲ್ಲಿ ದಿ ಪ್ರಿನ್ಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ರಾಮ-ಲಕ್ಷ್ಮಣ ಸೀತಾ ವೇಷ ಧರಿಸಿದ್ದು ಹಾಗೂ ಟ್ರ್ಯಾಕ್ಟರ್ ಮಾಲೀಕರು ಕುಂಭ ಹೊತ್ತ ಮಹಿಳೆಯರಿಗೆ ಬಿಸಿಲಿನಲ್ಲಿ ತಂಪು ಪಾನಿಯ ವ್ಯವಸ್ಥೆ ಕಲ್ಪಿಸಿದ್ದರು.