ಸಾರಾಂಶ
ಶ್ರಾವಣ ಮಾಸ ಹಿಂದುಗಳಿಗೆ ಪವಿತ್ರ ಮಾಸವಾಗಿದ್ದು, ದೇವಸ್ಥಾನ ಹಾಗೂ ಮಠಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು ಮನಶಾಂತಿಗೆ ಸಹಾಯಕವಾಗಿವೆ ಎಂದು ಬೆಟಸೂರಮಠದ ಅಜ್ಜಯ್ಯ ಸ್ವಾಮೀಜಿ ನುಡಿದರು.
ಕನ್ನಡಪ್ರಭ ವಾರ್ತೆ ಸವದತ್ತಿ
ಶ್ರಾವಣ ಮಾಸ ಹಿಂದುಗಳಿಗೆ ಪವಿತ್ರ ಮಾಸವಾಗಿದ್ದು, ದೇವಸ್ಥಾನ ಹಾಗೂ ಮಠಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು ಮನಶಾಂತಿಗೆ ಸಹಾಯಕವಾಗಿವೆ ಎಂದು ಬೆಟಸೂರಮಠದ ಅಜ್ಜಯ್ಯ ಸ್ವಾಮೀಜಿ ನುಡಿದರು.ಪಟ್ಟಣದ ಗಿರಿಜನ್ನವರ ಓಣಿಯ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಅಂಗವಾಗಿ ಹಮ್ಮಿಕೊಂಡ 26ನೇ ವರ್ಷದ ರುದ್ರಾಭಿಷೇಕದ ಮಹಾಮಂಗಲೋತ್ಸವ ಕಾರ್ಯಕ್ರಮದಲ್ಲಿ ಮಹಾಪ್ರಸಾದಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇವಸ್ಥಾನಗಳಲ್ಲಿ ನಡೆಯುತ್ತಿರುವ ಅನ್ನದಾಸೋಹಗಳು ಶ್ರೇಷ್ಠತೆಗೆ ಸಾಕ್ಷಿಯಾಗಿದ್ದು, ನೂರಾರು ವರ್ಷಗಳ ಇತಿಹಾಸ ಹೊಂದಿರುವ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಇತ್ತೀಚಿನ ಮೂರು ದಶಕಗಳಿಂದ ನಡೆಯುತ್ತಿರುವ ಪ್ರತಿಯೊಂದು ಕಾರ್ಯಕ್ರಮಗಳು ಎಲ್ಲ ಸಮಾಜದ ಜನರಿಗೆ ಮಾದರಿಯಾವೆ ಎಂದರು.ಶಾಸಕ ವಿಶ್ವಾಸ ವೈದ್ಯ, ಬಿಜೆಪಿ ಮುಖಂಡ ವಿರುಪಾಕ್ಷ ಮಾಮನಿ, ಪುರಸಭೆ ಮಾಜಿ ಅಧ್ಯಕ್ಷ ಶಿವಾನಂದ ಹೂಗಾರ, ಅಲ್ಲಮಪ್ರಭು ಪ್ರಭುನವರ ಸೇರಿದಂತೆ ಅನೇಕ ಗಣ್ಯರು ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದುಕೊಂಡರು.ದೇವಸ್ಥಾನದಲ್ಲಿ ಶ್ರಾವಣ ಮಾಸ ಪೂರ್ತಿ ಹಮ್ಮಿಕೊಂಡ ರುದ್ರಾಭಿಷೇಕದ ಕೊನೆಯ ದಿನದೇವರಿಗೆ ರುದ್ರಾಭಿಷೇಕ, ಪುಷ್ಪಾಲಂಕಾರದೊಂದಿಗೆ, ಸತ್ಯನಾರಾಯಣ ಪೂಜೆ ಹಾಗೂ ಮಹಾಪ್ರಸಾದದೊಂದಿಗೆ ಮಂಗಲಗೊಂಡಿತು.
ವೇದಮೂರ್ತಿ ಗದಗಯ್ಯ ಚಿಕ್ಕಮಠ ಇವರ ವೈದಿಕತ್ವದಲ್ಲಿ ರುದ್ರಾಭಿಷೇಕ ಹಮ್ಮಿಕೊಳ್ಳಲಾಗಿತ್ತು. ಶ್ರೀನಿವಾಸ ಗದಗ ಸತ್ಯನಾರಾಯಣ ಪೂಜೆ ನಡೆಸಿಕೊಟ್ಟರು.ರಾಮಲಿಂಗೇಶ್ವರ ಅರ್ಬನ ಸೌಹಾರ್ದ ಸಂಘದ ಅಧ್ಯಕ್ಷ ಪುಂಡಲೀಕ ಬಾಳೋಜಿ, ಚಂದ್ರಣ್ಣ ಶಾಮರಾಯನವರ, ಸುಭಾಸ ಪವಾರ, ಬಿ.ಎನ್. ಪ್ರಭುನವರ, ಅರ್ಜುನ ಅಮ್ಮೋಜಿ, ಧರ್ಮರಾಜ ಗಿರಿಜನ್ನವರ, ವಿಠ್ಠಲ ಜಾಮದಾರ, ತಾನಾಜಿ ಶಿಂಧೆ, ರಾವ್‌ಸಾಹೇಬ ಜಾಮದಾರ, ಕೇದಾರ ಮೊಖಾಶಿ, ರವಿ ಗಿರಿಜನ್ನವರ, ಶಿವಾನಂದ ತಾರೀಹಾಳ, ಸಿದ್ದಪ್ಪ ರಾಹುತ, ಅಣ್ಣಪ್ಪ ಪವಾರ, ವಿ.ಜೆ. ಪವಾರ, ಮಲ್ಲೇಶ ರಾಜನಾಳ, ಅಂದುಸಿಂಗ್ ರಜಪುತ, ಮಾರುತಿ ಜಾಧವ, ಲಕ್ಷ್ಮಣ ಕಿಟದಾಳ, ಪ್ರಕಾಶ ಬಾಳೋಜಿ, ಅಶೋಕ ಶಿಂಧೆ, ಭೀಮಶಿ ನಲವಡೆ, ಆನಂದ ಶಿಂಧೆ, ಮಂಜು ನಿಕ್ಕಂ ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.