ಹೊನ್ನಾಳಿ, ನ್ಯಾಮತಿಯಲ್ಲೂ ಶಾಂತಿಯುತ ಮತದಾನ

| Published : Jun 04 2024, 12:30 AM IST

ಸಾರಾಂಶ

ಜೂನ್ 3ರಂದು ಸೋಮವಾರ ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕುಗಳಲ್ಲಿ ವಿಧಾನ ಪರಿಷತ್ತಿನ ನೈಋತ್ಯ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರಗಳಿಗೆ ಶಾಂತಿಯುತ ಮತದಾನ ನಡೆಯಿತು

ಕನ್ನಡಪ್ರಭ ವಾರ್ತೆ, ಹೊನ್ನಾಳಿ

ಜೂನ್ 3ರಂದು ಸೋಮವಾರ ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕುಗಳಲ್ಲಿ ವಿಧಾನ ಪರಿಷತ್ತಿನ ನೈಋತ್ಯ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರಗಳಿಗೆ ಶಾಂತಿಯುತ ಮತದಾನ ನಡೆಯಿತು.

ಹೊನ್ನಾಳಿ ಕ್ಷೇತ್ರದಲ್ಲಿ 2204 ಪದವೀಧರ ಮತದಾರರಿದ್ದು, ಹೊನ್ನಾಳಿ ತಾಲೂಕು ಕಚೇರಿಯಲ್ಲಿ 3 ಮತಗಟ್ಟೆಗಳಲ್ಲಿ ಮತದಾನ ನಡೆಯಿತು. 1778 ಪದವೀಧರು ಮತದಾನ ಮಾಡಿದ್ದಾರೆ. ನ್ಯಾಮತಿ ತಾಲೂಕಿನಲ್ಲಿ ಒಂದು ಮತಗಟ್ಟೆ ಮಾಡಿದ್ದು 1012 ಮತದಾರರ ಪೈಕಿ 804 ಜನ ಮತದಾನ ಮಾಡುವ ಮೂಲಕ ಶೇಕಡ 79.45 ಮಾತದಾನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೈಋತ್ಯ ಶಿಕ್ಷಕರ ಕ್ಷೇತ್ರಕ್ಕೆ ಹೊನ್ನಾಳಿ ಮತ್ತು ನ್ಯಾಮತಿ ತಲಾ ಒಂದು ಮತಗಟ್ಟೆಯಲ್ಲಿ ಮತದಾನ ನಡೆದಿದ್ದು ಹೊನ್ನಾಳಿಯಲ್ಲಿ 321 ಮತದಾರರಿದ್ದು 290 ಜನ ಮತ ಚಲಾಯಿಸುವ ಮೂಲಕ ಶೇ.90.34 ಮತದಾನವಾಗಿದೆ.

ನ್ಯಾಮತಿಯಲ್ಲಿ ಶಿಕ್ಷಕರ ಕ್ಷೇತ್ರದ 76 ಜನ ಮತದಾರರಿದ್ದು, 71 ಜನ ಶಿಕ್ಷಕರು ಮತದಾನ ಮಾಡಿ ಶೇಕಡ 93.42 ಮತದಾನವಾಗಿದೆ. ಎಂದು ತಹಶೀಲ್ದಾರ್ ಪುರಂದರ ಅವರು ಮಾಹಿತಿ ನೀಡಿದ್ದಾರೆ.

ಅವಳಿ ತಾಲೂಕುಗಳ ಒಟ್ಟು ಮತದಾರರು ಪದವೀಧರ ಕ್ಷೇತ್ರಕ್ಕೆ 3216 ಇದ್ದು, ಈ ಪೈಕಿ ಒಟ್ಟು ಮತದಾನ 2582 ಶೇ.80.29 ಮತದಾನ ಇನ್ನು ಶಿಕ್ಷಕರ ಕ್ಷೇತ್ರದಲ್ಲಿ ಅವಳಿ ತಾಲೂಕುಗಳು ಸೇರಿ ಒಟ್ಟು ಮತದಾರರು 397. ಈ ಪೈಕಿ 361 ಮಂದಿ ಮತದಾನ ಮಾಡಿದ್ದು, ಒಟ್ಟು ಶೇಕಡ 90.93 ಮತದಾನವಾಗಿದೆ.

- - -

ಬಾಕ್ಸ್‌ ಚನ್ನಗಿರಿಯಲ್ಲಿ ಮತದಾನ ವಿವರ ಚನ್ನಗಿರಿ: ನೈಋತ್ಯ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರಗಳ ಮತದಾನದ ಪ್ರಕ್ರಿಯೆ ಚನ್ನಗಿರಿ ತಾಲೂಕಿನಲ್ಲಿ ಸೋಮವಾರ ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆವರೆಗೆ ಶಾಂತಿಯುತವಾಗಿ ನಡೆಯಿತು ಎಂದು ತಹಸೀಲ್ದಾರ್ ಎರ್ರಿಸ್ವಾಮಿ ತಿಳಿಸಿದ್ದಾರೆ. ತಾಲೂಕಿನಲ್ಲಿ ಒಟ್ಟು 2242 ಪುರುಷ ಮತದಾರರು, 1100 ಮಹಿಳಾ ಮತದಾರರು ಸೇರಿದಂತೆ ಒಟ್ಟು 3342 ನೋಂದಾಯಿತ ಪದವೀಧರ ಮತದಾರರಿದ್ದು, ಇವರಲ್ಲಿ 2727 ಮತದಾರರು ಮತಗಳನ್ನು ಚಲಾವಣೆ ಮಾಡಿದ್ದಾರೆ. ಶೇ.81.60 ಮತದಾನವಾಗಿದೆ. ಇನ್ನು ಶಿಕ್ಷಕರ ಕ್ಷೇತ್ರದಲ್ಲಿ 440 ಪುರುಷರು, 142 ಮಹಿಳೆಯರು ಸೇರಿ ಒಟ್ಟು 582 ಮತದಾರರಲ್ಲಿ 498 ಜನ ಮತಗಳನ್ನು ಚಲಾವಣೆ ಮಾಡಿದ್ದಾರೆ. ಶೇ.85.57ರಷ್ಟು ಮತದಾನವಾಗಿದೆ ಎಂದು ತಿಳಿಸಿದ್ದಾರೆ.

- - -

-3ಎಚ್.ಎಲ್.ಐ1:

ಸೋಮವಾರ ನೈಋತ್ಯ ಪದವೀಧರರು ಮತ್ತು ಶಿಕ್ಷಕರ ಕ್ಷೇತ್ರಗಳಿಗೆ ಮತದಾನ ನಡೆದ ಸಂದರ್ಭದಲ್ಲಿ ಹೊನ್ನಾಳಿ ತಾಲೂಕು ಕಚೇರಿ ಮತಗಟ್ಟೆಯಲ್ಲಿ ಸಾಲಿನಲ್ಲಿ ನಿಂತು ಮತದಾನದ ಹಕ್ಕು ಚಲಾಯಿಸಿದರು.