ನಗರಕ್ಕೆಶಾಂತಿಯುತ ಮತದಾನಕ್ಕೆ ಸಂದೇಶ್ ಸ್ವಾಮಿ ಅಭಿನಂದನೆ

| Published : Apr 29 2024, 01:30 AM IST

ನಗರಕ್ಕೆಶಾಂತಿಯುತ ಮತದಾನಕ್ಕೆ ಸಂದೇಶ್ ಸ್ವಾಮಿ ಅಭಿನಂದನೆ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ಎರಡ್ಮೂರು ದಶಕಗಳಲ್ಲಿ ನಾನು ಕಂಡಂತೆ ನರಸಿಂಹರಾಜ ಕ್ಷೇತ್ರ ಸೇರಿದಂತೆ ಮೈಸೂರಿನಲ್ಲಿ ಶೇ. 65ಕ್ಕೂ ಹೆಚ್ಚು ಮತಗಳು ಚಲಾವಣೆಯಾಗಿದ್ದು, ಮತದಾರರು ಹೆಚ್ಚಿನ ಉತ್ಸಾಹ ತೋರಿ ಮತದಾನ ಹಬ್ಬದಲ್ಲಿ ಭಾಗವಹಿಸಿದ್ದು ಅಭಿನಂದನೀಯ.

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರಿನಲ್ಲಿ ಶಾಂತಿಯುತ ಮತದಾನ ನಡೆಸಿದ ಚುನಾವಣಾಧಿಕಾರಿಗಳು ಹಾಗೂ ಮತದಾರರಿಗೆ ಬಿಜೆಪಿ‌ ಮುಖಂಡ ಹಾಗೂ ಮಾಜಿ ಮೇಯರ್‌ ಸಂದೇಶ್ ಸ್ವಾಮಿ ಅಭಿನಂದಿಸಿದ್ದಾರೆ.

ಕಳೆದ ಎರಡ್ಮೂರು ದಶಕಗಳಲ್ಲಿ ನಾನು ಕಂಡಂತೆ ನರಸಿಂಹರಾಜ ಕ್ಷೇತ್ರ ಸೇರಿದಂತೆ ಮೈಸೂರಿನಲ್ಲಿ ಶೇ. 65ಕ್ಕೂ ಹೆಚ್ಚು ಮತಗಳು ಚಲಾವಣೆಯಾಗಿದ್ದು, ಮತದಾರರು ಹೆಚ್ಚಿನ ಉತ್ಸಾಹ ತೋರಿ ಮತದಾನ ಹಬ್ಬದಲ್ಲಿ ಭಾಗವಹಿಸಿದ್ದು ಅಭಿನಂದನೀಯ. ಜಿಲ್ಲಾಡಳಿತ ಉತ್ತಮ ರೀತಿಯಲ್ಲಿ ಎಲ್ಲಾ ವ್ಯವಸ್ಥೆ ಮಾಡುವ ಮೂಲಕ ಶಾಂತಿಯುತ ಮತದಾನ ನಡೆಸಿರುವುದಕ್ಕೆ ಜಿಲ್ಲಾಧಿಕಾರಿಗಳು ಸೇರಿದಂತೆ ಚುನಾವಣೆಯ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗಕ್ಕೆ ಧನ್ಯವಾದಗಳನ್ನು ಅವರು ಸಲ್ಲಿಸಿದ್ದಾರೆ.

ಮೈಸೂರು ರಾಜ ಮಹಾರಾಜರ ಕೊಡುಗೆಗಳು ಹಾಗೂ ಪ್ರಧಾನಿ ನರೇಂದ್ರಮೋದಿಜೀ ಅವರು ಕಳೆದ ಒಂಬತ್ತು ವರ್ಷಗಳಲ್ಲಿ ನೀಡಿರುವ ಆಡಳಿತ ಮತ್ತು ಜನಪರ ಯೋಜನೆಗಳನ್ನು ಸ್ಮರಿಸಿ ಮತದಾರರು ಬಿಜೆಪಿಗೆ ಅತಿಹೆಚ್ಚು ಮತಗಳನ್ನು ನೀಡಿ ಬೆಂಬಲಿಸಿದ್ದಾರೆ. ಆದ್ದರಿಂದ ಯದುವೀರರು ಅತಿಹೆಚ್ಚು ಮತಗಳ ಅಂತರದಿಂದ ವಿಜಯ ಸಾಧಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಎನ್.ಆರ್. ಕ್ಷೇತ್ರದ ಬಿಜೆಪಿ ಬ್ಲಾಕ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಹಗಲು ರಾತ್ರಿ ಶ್ರಮ ವಹಿಸಿದ್ದಾರೆ. ಎಲ್ಲಾ ಮುಖಂಡರು ಮತ್ತು ಕಾರ್ಯಕರ್ತರಿಗೆ ವ್ಯಯಕ್ತಿಕವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಪಕ್ಷ ಹಾಗೂ ರಾಜವಂಶಸ್ಥರ ಮೇಲೆ ಅಭಿಮಾನವಿಟ್ಟು ಮತ ನೀಡಿ ನಮ್ಮನ್ನು ಆರ್ಶೀವದಿಸಿರುವ ಮತದಾರರಿಗೂ ಧನ್ಯವಾದ ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ.