ಇಲ್ಲಿನ ಚಿದಂಬರ ನಗರದ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಶನಿವಾರ ಡಾ. ಬಿ.ಆರ್. ಅಂಬೇಡ್ಕರ್ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಹಾಕಿದ್ದ ಪೆಂಡಾಲ್ ಸುಂಟರಗಾಳಿಗೆ ಕುಸಿದು ಬಿದ್ದು, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಸುದೈವವಶಾತ್ ಸ್ಪಲ್ಪದರಲ್ಲಿಯೇ ಪಾರಾದ ಘಟನೆ ನಡೆದಿದೆ.
ರಾಣಿಬೆನ್ನೂರು:ಇಲ್ಲಿನ ಚಿದಂಬರ ನಗರದ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಶನಿವಾರ ಡಾ. ಬಿ.ಆರ್. ಅಂಬೇಡ್ಕರ್ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಹಾಕಿದ್ದ ಪೆಂಡಾಲ್ ಸುಂಟರಗಾಳಿಗೆ ಕುಸಿದು ಬಿದ್ದು, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಸುದೈವವಶಾತ್ ಸ್ಪಲ್ಪದರಲ್ಲಿಯೇ ಪಾರಾದ ಘಟನೆ ನಡೆದಿದೆ.
ವೇದಿಕೆ ಸಮಾರಂಭ ಮುಗಿದ ಸ್ವಲ್ಪ ಹೊತ್ತಿನಲ್ಲಿ ಜೋರಾಗಿ ಬೀಸಿದ ಗಾಳಿಗೆ ಪೆಂಡಾಲ್ ನೆಲಕ್ಕೆ ಉರುಳಿಬಿತ್ತು. ಅತಿಥಿಗಳು ಸೇರಿದಂತೆ ಯಾರಿಗೂ ಯಾವುದೇ ರೀತಿ ತೊಂದರೆಯಾಗಲಿಲ್ಲ. ಸಚಿವರ ಅಂಗರಕ್ಷಕರು ಅವರನ್ನು ಬಚಾವ್ ಮಾಡಿದರು. ಇದರಿಂದ ಭಾರಿ ಅನಾಹುತವೊಂದು ಸ್ವಲ್ಪದರಲ್ಲಿಯೇ ತಪ್ಪಿದಂತಾಯಿತು.