ಸಾರಾಂಶ
- ಅಸ್ವಸ್ಥರು ದಾವಣಗೆರೆ, ಶಿವಮೊಗ್ಗ, ಭದ್ರಾವತಿ ಆಸ್ಪತ್ರೆಗಳಿಗೆ ದಾಖಲು
- ಜಿಲ್ಲಾ ಸರ್ವೇಕ್ಷಣಾಧಿಕಾರಿ, ತಾಲೂಕು ಆರೋಗ್ಯಾಧಿಕಾರಿ, ವೈದ್ಯರು, ಸಿಬ್ಬಂದಿ ಗ್ರಾಮಕ್ಕೆ ಭೇಟಿ- ಕುಡಿಯುವ ನೀರು ಪೈಪ್ ಲೈನ್ ಚರಂಡಿಗಳಲ್ಲೇ ಹಾದುಹೋಗಿ ಕೊಳಕು ನೀರು ಪೂರೈಕೆ - - - ಕನ್ನಡಪ್ರಭ ವಾರ್ತೆ ದಾವಣಗೆರೆ
ಕಲುಷಿತ ನೀರು ಸೇವಿಸಿ ಏಳು ಜನ ಅಸ್ವಸ್ಥರಾದ ಘಟನೆ ಹೊನ್ನಾಳಿ ತಾಲೂಕು ಹುಣಸಘಟ್ಟ ಗ್ರಾಮದಲ್ಲಿ ವರದಿಯಾಗಿದೆ.ಹೊನ್ನಾಳಿ ತಾಲೂಕಿನ ಹುಣಸಘಟ್ಟ ಗ್ರಾಮದ ಕುಡಿಯುವ ನೀರಿನ ಪೈಪ್ ಲೈನ್ ಚರಂಡಿಗಳಲ್ಲೇ ಹಾದುಹೋಗಿದೆ. ಕೆಲವೆಡೆ ಚರಂಡಿ ನೀರು ಕುಡಿಯುವ ನೀರಿನ ಪೈಪ್‌ನಲ್ಲಿ ಸೇರಿಕೊಂಡಿದ್ದೇ ಕಲುಷಿತ ನೀರು ಪೂರೈಕೆಗೆ ಕಾರಣ ಎನ್ನಲಾಗಿದೆ.
ಕಲುಷಿತ ನೀರು ಸೇವಿಸಿ ಅಸ್ವಸ್ಥರಾದ ಏಳು ಜನರಿಗೆ ತಕ್ಷಣವೇ ದಾವಣಗೆರೆ, ಶಿವಮೊಗ್ಗ, ಭದ್ರಾವತಿ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ. ಮುಂಜಾಗ್ರತೆಯಾಗಿ ಆರೋಗ್ಯ ಇಲಾಖೆ ಗ್ರಾಮದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಿ.ಜಿ. ರಾಘವನ್, ತಾಲೂಕು ಆರೋಗ್ಯಾಧಿಕಾರಿ ಡಾ.ಗಿರೀಶ ಸೇರಿದಂತೆ ವೈದ್ಯರು, ಸಿಬ್ಬಂದಿ ಗ್ರಾಮಕ್ಕೆ ಭೇಟಿ ನೀಡಿದ್ದರು. ಗ್ರಾಮಕ್ಕೆ ಪೂರೈಕೆ ಆಗುತ್ತಿದ್ದ ನೀರಿನ ಸ್ಯಾಂಪಲ್ ಸಂಗ್ರಹಿಸಿ, ಪರೀಕ್ಷೆಗೆ ಕಳಿಸಲಾಗಿದೆ.
ಹುಣಸಘಟ್ಟ ಗ್ರಾಮಕ್ಕೆ ಕುಡಿಯುವ ನೀರು ಪೂರೈಸುವ ಪೈಪ್ ಲೈನ್ ಚರಂಡಿಗಳಲ್ಲೇ ಹಾದುಹೋಗಿದ್ದು, ಅಲ್ಲಲ್ಲಿ ನಲ್ಲಿ ನೀರಿನೊಳಗೆ ಚರಂಡಿ ನೀರು ಸಹ ಸೇರಿಕೊಳ್ಳುತ್ತಿದೆ. ಹೀಗೆ ಕುಡಿಯುವ ನೀರಿನ ಪೈಪ್ ಲೈನ್‌ಗೆ ಸೇರಿದ ಕಲುಷಿತ ನೀರು ಸೇವಿಸಿ, ಗ್ರಾಮಸ್ಥರು ಅಸ್ವಸ್ಥಗೊಂಡಿದ್ದಾರೆಂದು ಹೇಳಲಾಗಿದೆ.ಕೆಲವು ಕಡೆ ಪೈಪ್ ಲೈನ್ ಸೋರಿಕೆಯಾಗುತ್ತಿದೆ. ಮಿನಿ ವಾಟರ್ ಟ್ಯಾಂಕ್‌ಗೆ ಪೈಪ್ ಅಳವಡಿಸಿ, ಮನೆಗಳಿಗೆ ಗ್ರಾಮಸ್ಥರು ನೀರು ಪೂರೈಸಿಕೊಳ್ಳುತ್ತಿದ್ದಾರೆ. ಕುಡಿಯುವ ನೀರು ಪೂರೈಸುವ ವೇಳೆ ಸ್ವಚ್ಛತೆಗೆ ಗಮನಹರಿಸುವಂತೆ ಗ್ರಾಪಂ ಅಧಿಕಾರಿ, ಸಿಬ್ಬಂದಿಗೆ ಆರೋಗ್ಯಾಧಿಕಾರಿಗಳು ಸೂಚಿಸಿದರು.