ದಾಬಸ್‍ಪೇಟೆ: ದ್ವಿಚಕ್ರ ವಾಹನ ಸವಾರರಿಗೆ ಉಚಿತವಾಗಿ ಹೆಲ್ಮೆಟ್ ವಿತರಿಸುವ ಕಾರ್ಯಕ್ರಮವನ್ನು ಬೈಕ್ ಸವಾರರು ಹೆಲ್ಮೆಟ್ ಪಡೆಯಲು ಮುಗಿಬಿದ್ದ ದೃಶ್ಯ ನೆಲಮಂಗಲ ತಾಲೂಕು ಪ್ರಾದೇಶಿಕ ಸಾರಿಗೆ ಇಲಾಖೆ ಮತ್ತು ವಂಡರ್ ಲಾ ಸಹಯೋಗದಿಂದ ಪಟ್ಟಣದಲ್ಲಿ ಕಂಡು ಬಂತು.
ದಾಬಸ್‍ಪೇಟೆ: ದ್ವಿಚಕ್ರ ವಾಹನ ಸವಾರರಿಗೆ ಉಚಿತವಾಗಿ ಹೆಲ್ಮೆಟ್ ವಿತರಿಸುವ ಕಾರ್ಯಕ್ರಮವನ್ನು ಬೈಕ್ ಸವಾರರು ಹೆಲ್ಮೆಟ್ ಪಡೆಯಲು ಮುಗಿಬಿದ್ದ ದೃಶ್ಯ ನೆಲಮಂಗಲ ತಾಲೂಕು ಪ್ರಾದೇಶಿಕ ಸಾರಿಗೆ ಇಲಾಖೆ ಮತ್ತು ವಂಡರ್ ಲಾ ಸಹಯೋಗದಿಂದ ಪಟ್ಟಣದಲ್ಲಿ ಕಂಡು ಬಂತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ತಾಲೂಕು ಪ್ರಾದೇಶಿಕ ಸಾರಿಗೆ ಇಲಾಖೆಯ ಮೋಟಾರ್ ವಾಹನ ನಿರೀಕ್ಷಕ ದಿನೇಶ್ ಕುಮಾರ್ ಮಾತನಾಡಿ ವಾಹನ ಚಲಿಸುವಾಗ ಮಾಡುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಚಾಲನೆ ಮಾಡಬೇಕು ಅಂದಾಗ ಅಪರಾಧಗಳು ಕಡಿಮೆ ಆಗಲು ಸಾಧ್ಯ.ಲೈಸೆನ್ಸ್ ಇಲ್ಲದೇ ವಾಹನ ಚಲಾವಣೆ ಮಾಡುವುದು ಕಾನೂನು ಬಾಹಿರವಾಗಿದ್ದು, ಪ್ರಸ್ತುತ ನಡೆಯುತ್ತಿರುವ ರಸ್ತೆ ಅಪಘಾತಗಳಿಗೆ ರಸ್ತೆ ನಿಯಮಗಳ ಉಲ್ಲಂಘನೆಯೇ ಕಾರಣವಾಗಿದೆ.ಅದಕ್ಕಾಗಿ ಹೆಲ್ಮೇಟ್ ಧರಿಸಿ ಪ್ರಯಾಣಿಸಬೇಕು ಎಂದರು.ಸಾರಿಗೆ ಇಲಾಖೆಯ ಅಧಿಕಾರಿ ಕೀರ್ತಿ ಮಾತನಾಡಿ ಕುಟುಂಬದ ಮೇಲೆ ಪ್ರೀತಿ ,ವಿಶ್ವಾಸವಿರುವ ಪ್ರತಿಯೊಬ್ಬರು ವಾಹನ ಸವಾರರು ಹೆಲಗಮೆಟ್ ಧರಿಸಬೇಕು. ಚಾಲಕರ ಹಿತದೃಷ್ಠಿಗಾಗಿ ವಾಹನ ಕಾಯಿದೆ ನಿಯಮ ಉಲ್ಲಂಘನೆಗೆ ದಂಡ ಹೆಚ್ಚಳ ಮಾಡಲಾಗಿದೆ. ಅದನ್ನು ನಾಗರಿಕರು ಅರ್ಥ ಮಾಡಿಕೊಂಡು ಸಮರ್ಪಕ ದಾಖಲೆ ಇಟ್ಟುಕೊಳ್ಳಬೇಕು ಎಂದರು.
ಪಿಎಸ್‍ಐ ಸಿದ್ದಪ್ಪ ಮಾತನಾಡಿ ಭಾರತದಲ್ಲಿ ಪ್ರತಿವರ್ಷ ರೋಗರುಜಿನಗಳಿಗೆ ಬಲಿಯಾಗುವವರಿಗಿಂತ ರಸ್ತೆ ಅಪಘಾತಗಳಲ್ಲಿ ಸಾಯುವವರ ಸಂಖ್ಯೆ ಹೆಚ್ಚಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಹೆಲ್ಮೆಟ್ ಧರಿಸಿ ತಮ್ಮ ಪ್ರಾಣ ಕಾಪಾಡಿಕೊಳ್ಳಲು ಮುಂದಾಗಬೇಕು. ಹೆಲ್ಮೆಟ್ ಧರಿಸದವರನ್ನು ಹಿಡಿದು ದಂಡ ವಿಧಿಸುವುದು ಪೊಲೀಸರ ಉದ್ದೇಶವಲ್ಲ. ಪ್ರತಿಯೊಬ್ಬರೂ ಹೆಲ್ಮೆಟ್ ಧರಿಸಿ ತಮ್ಮ ಅಮೂಲ್ಯ ಜೀವ ಕಾಪಾಡಲಿ ಎಂಬ ಸದುದ್ದೇಶ ಪೊಲೀಸ್ ಇಲಾಖೆಯದ್ದಾಗಿದೆ ಎಂದರು.ಕಾರ್ಯಕ್ರಮದಲ್ಲಿ ಸಾರಿಗೆ ಇಲಾಖೆಯ ಅಧಿಕಾರಿ ನಾಗರಾಜಚಾರ್, ಅಂಬೇಡ್ಕರ್ ಸೇನೆ ಜಿಲ್ಲಾಧ್ಯಕ್ಷ ಟಗರು ಶಿವಸ್ವಾಮಿ, ವಂಡರ್ ಲಾ ಸಂಸ್ಥೆಯ ದೇವಯ್ಯ, ಲೋಕೇಶ್, ಸಂಘಟನೆಯ ಪದಾಧಿಕಾರಿಗಳಾದ ಮರಿಯಪ್ಪ ಮನು, ಶಿವು, ವಸಂತ್, ಹನುಮಂತರಾಜು ಮತ್ತೀತ್ತರಿದ್ದರು.
ಪೋಟೋ 1 : ದಾಬಸ್‍ಪೇಟೆ ಪಟ್ಟಣದಲ್ಲಿ ನೆಲಮಂಗಲ ತಾಲೂಕು ಪ್ರಾದೇಶಿಕ ಸಾರಿಗೆ ಇಲಾಖೆ ಮತ್ತು ವಂಡರ್ ಲಾ ಸಹಯೋಗದಿಂದ ಸಾರ್ವಜನಿಕರಿಗೆ ಉಚಿತ ಹೆಲ್ಮೆಟ್ ನ್ನು ತಾಲೂಕು ಪ್ರಾದೇಶಿಕ ಸಾರಿಗೆ ಇಲಾಖೆಯ ಮೋಟಾರ್ ವಾಹನ ನಿರೀಕ್ಷಕ ದಿನೇಶ್ ಕುಮಾರ್ ವಿತರಿಸಿದರು.