ಸಾರಾಂಶ
ಔರಾದ್‌ನ ಹಳೆಗಂಜ್ ಬಡಾವಣೆಯಲ್ಲಿ ತಿಂಗಳುಗಳಿಂದ ಕೊಳವೆಬಾವಿ ಕೆಟ್ಟು ಕುಡಿಯಲು ನೀರಿಲ್ಲದೆ ಬಡಾವಣೆಯ ನಿವಾಸಿಗಳು ಪರದಾಡುವಂತಾಗಿದೆ. ಸಮಸ್ಯೆ ಕುರಿತು ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ತಿಳಿಸಿದರು ಯಾರೂ ಸ್ಪಂದಿಸುತ್ತಿಲ್ಲವೆಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಔರಾದ್
ಪಟ್ಟಣದ ಹಳೆಗಂಜ್ ಬಡಾವಣೆಯಲ್ಲಿ ತಿಂಗಳುಗಳಿಂದ ಕೊಳವೆಬಾವಿ ಕೆಟ್ಟು ನಿಂತಿದೆ. ದುರಸ್ತಿ ಮಾಡುವುದಾಗಿ ಮೋಟಾರ್ ಹೊರ ತೆಗೆದು ತಿಂಗಳು ಕಳೆದರೂ ದುರಸ್ತಿ ಕಾಣದೇ ಜನರು ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.ಈ ಸಮಸ್ಯೆ ಕುರಿತು ಪಟ್ಟಣ ಪಂಚಾಯಿತಿ ಗಮನಕ್ಕೆ ತರಲಾಗಿದೆ. ಸಿಬ್ಬಂದಿಗೆ ಕೇಳಿದರೆ ಸೂಕ್ತ ಉತ್ತರ ನೀಡುತ್ತಿಲ್ಲ. ಬಡಾವಣೆಯ ನಿವಾಸಿಗಳು ನೀರಿಗಾಗಿ ಕಾಯುವುದೇ ಒಂದು ಕೆಲಸವಾಗಿದೆ. ಇದು ಕೇವಲ ನಮ್ಮ ಬಡಾವಣೆಯ ಸಮಸ್ಯೆಯಿಲ್ಲ ಪಟ್ಟಣದ ಹಲವು ಬಡಾವಣೆಯ ಪರಿಸ್ಥಿತಿ ಕೂಡ ಹೀಗೆ ಇದೆ. ಬೇಸಿಗೆ ಮುಂಚೆಯೇ ಈ ರೀತಿ ಆದರೆ ಮುಂದಿನ ದಿನಗಳಲ್ಲಿ ಹೇಗೆ ಎಂದು ಪಟ್ಟಣ ಪಂಚಾಯತಿ ನಿರ್ಲಕ್ಷಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಟ್ಟಣ ಪಂಚಾಯತಿ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ರೀತಿಯ ಸ್ಪಂದನೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಅಧಿಕಾರಿಗಳು, ಜನ ಪ್ರತಿನಿಧಿಗಳು ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು. ಇಲ್ಲವಾದಲ್ಲಿ ಪಟ್ಟಣ ಪಂಚಾಯತಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ನಿವಾಸಿಗಳು ತಿಳಿಸಿದರು.ಬೇಸಿಗೆ ಮುಂಚೆಯೇ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಹಲವು ಬಾರಿ ಜನಪ್ರತಿನಿಧಿಗಳಿಗೆ ಹಾಗೂ ಪಟ್ಟಣ ಪಂಚಾಯತಿ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಸ್ಪಂದನೆ ಸಿಗುತ್ತಿಲ್ಲ. ಕೂಡಲೇ ಕೊಳವೆಬಾವಿ ಮೋಟಾರ್ ರಿಪೇರಿ ಮಾಡಿಸದಿದ್ದಲ್ಲಿ ನಿವಾಸಿಗರಿಂದ ಹೋರಾಟ ಅನಿವಾರ್ಯ.
- ಕುಮಾರಸ್ವಾಮಿ, ಹಳೆಗಂಜ್ ಬಡಾವಣೆಯ ನಿವಾಸಿ, ಔರಾದ್