ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ಗೆ ಲೋಕಸಭೆ ಚುನಾವಣೆಯಲ್ಲಿ ಜನರಿಂದ ಉತ್ತರ: ಎಚ್.ಡಿ.ಕುಮಾರಸ್ವಾಮಿ

| Published : Apr 14 2024, 01:48 AM IST

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ಗೆ ಲೋಕಸಭೆ ಚುನಾವಣೆಯಲ್ಲಿ ಜನರಿಂದ ಉತ್ತರ: ಎಚ್.ಡಿ.ಕುಮಾರಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜೆಡಿಎಸ್ ಕಥೆ ಮುಗಿದು ಹೋಯಿತು ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಮುಂದಿನ ಲೋಕಸಭೆಯಲ್ಲಿ ಜನರೇ ಉತ್ತರ ಕೊಡುತ್ತಾರೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಕನ್ನಡ ಪ್ರಭ ವಾರ್ತೆ ಗುಬ್ಬಿಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜೆಡಿಎಸ್ ಕಥೆ ಮುಗಿದು ಹೋಯಿತು ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಮುಂದಿನ ಲೋಕಸಭೆಯಲ್ಲಿ ಜನರೇ ಉತ್ತರ ಕೊಡುತ್ತಾರೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಗುಬ್ಬಿ ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಹಾಗೂ ಸಾರ್ವಜನಿಕರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ತುಮಕೂರು ಜಿಲ್ಲೆಗೆ ಹೇಮಾವತಿ ನೀರು ಹರಿಸಲು ಮಾಜಿ ಪ್ರಧಾನಿ ದೇವೇಗೌಡರು ತೊಂದರೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ಹೇಳುತ್ತಿದೆ. ಆದರೆ ಅದು ಸುಳ್ಳು ನೀರು ಹರಿಸಲು ದೇವೇಗೌಡರೆ ಕಾರಣ ಎಂದರು.

ದಲಿತರನ್ನು ಮತ ಬ್ಯಾಂಕ್ ಮಾಡಿಕೊಳ್ಳುವ ಮುನ್ನ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಸಮಾಜ ಕಲ್ಯಾಣ ಇಲಾಖೆಯಲ್ಲಿ 11 ಸಾವಿರ ಕೋಟಿ ಹಣ ಕಡಿತ ಮಾಡಿದನ್ನು ದಲಿತರು ಮರೆಯಬಾರದು. 2018ರ ಚುನಾವಣೆಯಲ್ಲಿ ರೈತರಿಗೆ ಒಂದು ಮಾತು ಕೊಟ್ಟಿದ್ದೆ. ಆತ್ಮಹತ್ಯೆ ಮಾಡಿಕೊಳ್ಳಬೇಡಿ. ನಮ್ಮ ಸರ್ಕಾರ ಬಂದರೆ ಸಾಲ ಮನ್ನಾ ಮಾಡುತ್ತೇನೆ ಎಂದಿದ್ದೆ. ಅದರಂತೆ ನನ್ನ ಅವಧಿಯಲ್ಲಿ ನಾನು ರೈತರ ಸಾಲ ಮನ್ನಾ ಮಾಡಿದ್ದೆ ಎಂದು ತಿಳಿಸಿದರು.

ಉದ್ಯೋಗ ಸೃಷ್ಟಿ ಕೇಂದ್ರ ಸರ್ಕಾರ ಮಾಡಲಿಲ್ಲ ಎಂದು ದೂರುವ ಕಾಂಗ್ರೆಸ್ ಹತ್ತು ತಿಂಗಳಲ್ಲಿ ಖಾಲಿ ಇರುವ 2.75 ಲಕ್ಷ ಸರ್ಕಾರಿ ಹುದ್ದೆ ಭರ್ತಿ ಮಾಡಿ ಯುವಕರಿಗೆ ಬದುಕು ಕಟ್ಟಿಕೊಳ್ಳಲು ಅವಕಾಶ ನೀಡಿ ಎಂದರು. ಅವರು ಖರ್ಗೆ ಮುಖ್ಯಮಂತ್ರಿ ಮಾಡಲು ಮನವಿ ಮಾಡಿದ್ದು, ನಾವು ಆದರೆ ಕಾಂಗ್ರೆಸ್ ಪಕ್ಷದಲ್ಲೇ ಇದಕ್ಕೆ ವಿರೋಧ ವ್ಯಕ್ತವಾಗಿತ್ತು. ಇದನ್ನು ದಲಿತರು ಮರೆಯಬಾರದು. ಮೇಕೆದಾಟು ಪಾದಯಾತ್ರೆ, ಕಾಂಗ್ರೆಸ್ ನಡೆ ಕೃಷ್ಣ ಕಡೆ ಇವೆಲ್ಲಾ ಮಾಡಿ ಕೊನೆಗೆ ಬಿಜೆಪಿ ಸಂಸದರ ಮೇಲೆ ದೂಷಿಸಿದ ಕನಕಪುರದ ಮಹಾನುಭಾವ ಜೆಡಿಎಸ್ ಮುಗಿದು ಹೋಗಿದೆ ಎನ್ನುತ್ತಾರೆ. ಇದಕ್ಕೆ ತಕ್ಕ ಉತ್ತರ ಈ ಮೈತ್ರಿ ನೀಡಲಿದೆ. ಎತ್ತಿನಹೊಳೆ ಯೋಜನೆ ಹಾಲು ಕರೆಯುವ ಹಸು ಇದ್ದಂತೆ ಆಗಿದೆ. ಈಗಾಗಲೇ 1.5 ಸಾವಿರ ಕೋಟಿ ಸಾಲ ಮಾಡಿರುವ ಕಾಂಗ್ರೆಸ್ ಜಿಲ್ಲೆಯಲ್ಲಿ ಜೆಡಿಎಸ್ ಗೆ ಬಂದ 4.20 ಲಕ್ಷ ಮತಗಳು ಮೈತ್ರಿ ಅಭ್ಯರ್ಥಿಗೆ ಕೊಟ್ಟು 3 ರಿಂದ 4 ಲಕ್ಷ ಅಂತರ ಗೆಲುವು ನೀಡುವಂತೆ ಮನವಿ ಮಾಡಿದರು.ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಜನತೆಗೆ ಮರಣ ಶಾಸನ ಬರೆದ ಕಾಂಗ್ರೆಸ್ ಗ್ಯಾರಂಟಿ ಹೆಸರಿನಲ್ಲಿ ಒಂದು ಕೈನಲ್ಲಿ ಕೊಟ್ಟು ಮತ್ತೊಂದು ಕೈನಲ್ಲಿ ಕಿತ್ತುಕೊಳ್ಳುತ್ತಿದೆ. ಉಚಿತ ವಿದ್ಯುತ್ ನೀಡಿ ಸಣ್ಣ ಉದ್ದಿಮೆದಾರರಿಂದ ಹೆಚ್ಚು ಸುಲಿಗೆ ನಡೆದಿದೆ. ಮದ್ಯದ ಬೆಲೆ, ಸ್ಟ್ಯಾಂಪ್ ಡ್ಯೂಟಿ ಹೆಚ್ಚಳ, ಹಾಲಿನ ದರ ಹೆಚ್ಚಳ ಹೀಗೆ ಮಾಡುತ್ತಾ ಬರಗಾಲ ತಂದರು. ರೈತರಿಗೆ ಪರಿವರ್ತಕ ನೀಡಲು ನಾವು 25 ಸಾವಿರ ನಿಗದಿ ಮಾಡಿದರೆ ಕಾಂಗ್ರೆಸ್ 3 ಲಕ್ಷ ಪಡೆಯುತ್ತಿದೆ ಎಂದು ಟೀಕಿಸಿದ ಅವರು, ಮೊದಲ ಬಾರಿಗೆ ಶಾಸಕರಾದವರಿಗೆ ನಿರಾಸೆ ತಂದು ಯಾವ ಕ್ಷೇತ್ರಕ್ಕೂ ಒಂದು ರುಪಾಯಿ ಅನುದಾನ ನೀಡಿಲ್ಲ. ಹತ್ತು ತಿಂಗಳಿಂದ ಗ್ಯಾರಂಟಿ ಜಪ ಮಾಡುತ್ತಾ ಸರ್ಕಾರಿ ನೌಕರರಿಗೆ ವೇತನ ನೀಡಲು ಹಣವಿಲ್ಲದಂತೆ ಮಾಡಿದ್ದಾರೆ. ಈ ಶೂನ್ಯ ಸರ್ಕಾರಕ್ಕೆ ಈ ಚುನಾವಣೆ ಒಳ್ಳೆಯ ಉತ್ತರ ನೀಡಲಿದೆ. ಈ ನಿಟ್ಟಿನಲ್ಲಿ ಮೈತ್ರಿ ಅಭ್ಯರ್ಥಿ ಸೋಮಣ್ಣ ಅವರ ಆಯ್ಕೆ ಮಾಡುವಂತೆ ಮನವಿ ಮಾಡಿದರು.ಲೋಕಸಭಾ ಎನ್ ಡಿ ಎ ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ ಮಾತನಾಡಿದರು. ವೇದಿಕೆಯಲ್ಲಿ ಸಂಸದ ಜಿ.ಎಸ್.ಬಸವರಾಜು, ಉಸ್ತುವಾರಿ ಕೆ.ಗೋಪಾಲಯ್ಯ, ವಿಧಾನ ಪರಿಷತ್ ಸದಸ್ಯ ಚಿದಾನಂದ ಮೂರ್ತಿ, ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್, ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು, ಜೆಡಿಎಸ್ ಜಿಲ್ಲಾಧ್ಯಕ್ಷ ಅಂಜಿನಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ರವಿ ಹೆಬ್ಬಾಕ, ಬಿಜೆಪಿ ತಾಲೂಕು ಅಧ್ಯಕ್ಷ ಪಂಚಾಕ್ಷರಿ, ಜೆಡಿಎಸ್ ತಾಲೂಕು ಅಧ್ಯಕ್ಷ ಚಿಕ್ಕವೀರಯ್ಯ, ಮುಖಂಡರಾದ ಕಳ್ಳಿಪಾಳ್ಯ ಲೋಕೇಶ್, ಚಂದ್ರಶೇಖರಬಾಬು, ಎನ್.ಸಿ.ಪ್ರಕಾಶ್, ಹೊನ್ನಗಿರಿಗೌಡ, ಬೆಟ್ಟಸ್ವಾಮಿ, ಹಾರನಹಳ್ಳಿ ಪ್ರಭಣ್ಣ, ಯೋಗಾನಂದಕುಮಾರ್, ಯತೀಶ್, ಗಂಗಣ್ಣ ಇತರರು ಇದ್ದರು.