ಕಾಂಗ್ರೆಸ್ ಕೊಡುಗೆಯನ್ನು ಜನರಿಗೆ ಮನವರಿಕೆ ಮಾಡಬೇಕು- ಗಡ್ಡದೇವರಮಠ

| Published : Apr 03 2024, 01:33 AM IST

ಸಾರಾಂಶ

ದೇಶಕ್ಕೆ ಕಾಂಗ್ರೆಸ್ ಪಕ್ಷ ೬೦-೭೦ ವರ್ಷದಿಂದ ನೀಡಿದ ಕೊಡುಗೆ ಅಪಾರ. ನಾವು ಕಾಂಗ್ರೆಸ್ ದೇಶಕ್ಕೆ ನೀಡಿದ ಕೊಡುಗೆಗಳನ್ನು ಜನರಿಗೆ ಮನವರಿಕೆ ಮಾಡುವ ಮೂಲಕ ಚುನಾವಣೆ ಗೆಲ್ಲಬೇಕು ಎಂದು ಹಾವೇರಿ-ಗದಗ ಲೋಕಸಭಾ ಚುನಾವಣಾ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಹೇಳಿದರು.

ಹಿರೇಕೆರೂರು: ದೇಶಕ್ಕೆ ಕಾಂಗ್ರೆಸ್ ಪಕ್ಷ ೬೦-೭೦ ವರ್ಷದಿಂದ ನೀಡಿದ ಕೊಡುಗೆ ಅಪಾರ. ನಾವು ಕಾಂಗ್ರೆಸ್ ದೇಶಕ್ಕೆ ನೀಡಿದ ಕೊಡುಗೆಗಳನ್ನು ಜನರಿಗೆ ಮನವರಿಕೆ ಮಾಡುವ ಮೂಲಕ ಚುನಾವಣೆ ಗೆಲ್ಲಬೇಕು ಎಂದು ಹಾವೇರಿ-ಗದಗ ಲೋಕಸಭಾ ಚುನಾವಣಾ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಹೇಳಿದರು.ತಾಲೂಕಿನ ದೂದಿಹಳ್ಳಿ ಗ್ರಾಮದಲ್ಲಿ ಚುನಾವಣಾ ಪ್ರಚಾರದ ವೇಳೆ ಮತದಾರರನ್ನು ಕುರಿತು ಮಾತನಾಡಿದರು.

ನಾವು ಯಾರನ್ನು ಟೀಕಿಸುವುದು ಬೇಡ, ನಮ್ಮ ಪಕ್ಷ ದೇಶಕ್ಕೆ ನೀಡಿರುವ ಮತ್ತು ದೇಶದ ಜನತೆಯ ಅಭಿವೃದ್ದಿಗೋಸ್ಕರ ಕೈಗೊಂಡಿರುವ ಯೋಜನೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಬೇಕಾಗಿದೆ. ಬಿಜೆಪಿಯವರು ಕಾಂಗ್ರೆಸ್ ಪಕ್ಷ ಜಾರಿಗೆ ತಂದಿರುವ ಜನಪರ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡುತ್ತಾ ರಾಜಕೀಯ ಮಾಡುತ್ತಿದ್ದಾರೆ. ಅದರೆ ನಾವು ಸದ್ಯ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ ಜೊತೆಗೆ ದೇಶದ ಜನತೆಗೆ ಇನ್ನು ಹೆಚ್ಚಿನ ಯೋಜನೆಗಳನ್ನು ಕೊಡುವ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ, ಕಾಂಗ್ರೇಸ್ ಯಾವತ್ತು ಬಡವರ ದೀನ ದಲಿತರ ಏಳಿಗೆಗಾಗಿ ಶ್ರಮಿಸಿದ ಪಕ್ಷ. ದೇಶದ ಬೆನ್ನೆಲಬು ರೈತ, ಅಂತಹ ರೈತರ ಪರವಾಗಿ ನಿಂತ ಪಕ್ಷ. ರೈತ ಸದೃಢನಾದರೇ ದೇಶ ಸದೃಢವಾಗುತ್ತದೆ. ನಾನು ಸಹ ರೈತ ಕುಟುಂಬದಿಂದ ಬಂದಂತವನು ರೈತರ ಕಷ್ಟ-ನಷ್ಟ ಅರಿತವನು. ಮುಂಬರುವ ದಿನಗಳಲ್ಲಿ ಸದಾ ನಿಮ್ಮ ನಡುವೆ ಇದ್ದು ನಿಮ್ಮ ಸೇವೆ ಮಾಡಲು ತಿರ್ಮಾನಿಸಿದ್ದು ಶಾಸಕರಾದ ಯು.ಬಿ. ಬಣಕಾರ ಅವರು ಕ್ಷೇತ್ರದ ಜನರ ನಡುವೆ ಇದ್ದು ಅವರ ಸಮಸ್ಯೆಗೆ ಸ್ಪಂದಿಸಲು ಸಲಹೆ ನೀಡಿದ್ದಾರೆ. ಅವರ ಸಲಹೆ ಮೇರೆಗೆ ಸ್ಥಳೀಯ ಸಮಸ್ಯೆಗಳ ಬಗ್ಗೆ ಹೆಚ್ಚು ಗಮನ ಹರಿಸುತ್ತೇನೆ. ಇಂದು ರಾಜ್ಯದಲ್ಲಿ ಜಾರಿಗೆ ತಂದಿರುವ ಗ್ಯಾರಂಟಿಗಳು ಜನರ ಮತ್ತು ಜನಪ್ರತಿನಿಧಿಗಳ ಸಂಬಂಧ ಹೆಚ್ಚಿಸುತ್ತಿದ್ದು ರಾಜ್ಯದ ಜನತೆಯ ಒಲವು ನಮ್ಮ ಪಕ್ಷ ಕಡೆ ಇದ್ದು ಹಾವೇರಿ-ಗದಗ ಕ್ಷೇತ್ರದಲ್ಲಿ ತಮ್ಮಗಳ ಆಶೀರ್ವಾದದಿಂದ ಗೆಲ್ಲುವ ಭರವಸೆ ಮೂಡಿದೆ ಎಂದರು.ಶಾಸಕ ಯು.ಬಿ. ಬಣಕಾರ ಮಾತನಾಡಿ, ಜನರ ಬವಣೆ ಅರಿತವರು ಮಾತ್ರ ಜನರ ಮತ್ತು ಕ್ಷೇತ್ರದ ಅಭಿವೃದ್ದಿ ಮಾಡಲು ಸಾಧ್ಯ. ಅಂತಹ ಯುವ ನಾಯಕರಲ್ಲಿ ಆನಂದ ಒಬ್ಬರು. ವಿಧಾನಸಭಾ ಚುನಾವಣೆಯಲ್ಲಿ ನನಗೆ ಹೇಗೆ ಬೆಂಬಲ ನೀಡಿ ನನ್ನನ್ನು ಹೇಗೆ ಗೆಲ್ಲಿಸಿದಿರೋ ಹಾಗೇ ಈಗ ಆನಂದ ಅವರಿಗೆ ಮತ ನೀಡುವ ಮೂಲಕ ಒಬ್ಬ ಯುವ ನಾಯಕನ್ನು ನಿಮ್ಮ ಕ್ಷೇತ್ರದ ಜನತೆಯ ಸೇವೆಗೆ ಅಣಿಗೊಳಿಸೋಣ. ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪಿಲ್ಲ ಎಂಬ ಸುಳ್ಳು ಸುದ್ದಿಗಳನ್ನು ಕೆಲವರು ಹಬ್ಬಿಸುತ್ತ ಜನರ ದಿಕ್ಕು ತಪ್ಪಸುವ ಕೆಲಸ ಮಾಡುತಿದ್ದಾರೆ. ಆದರೆ ಗ್ಯಾರಂಟಿ ಯೋಜನೆಯ ಲಾಭ ಪಡೆದವರಲ್ಲಿ ಅವರೇ ಮೊದಲಿಗರಾಗಿದ್ದಾರೆ. ಅಂತವರ ಮಾತಿಗೆ ಕಿವಿ ಕೊಡದೇ ವಾಸ್ತವಕತೆಗೆ ಗಮನ ಹರಿಸಿ ನಿಮ್ಮ ಕುಟುಂಬದ ಆರ್ಥಿಕ ಹೊರೆ ಕಡಿಮೆ ಮಾಡಿ ನಿಮ್ಮ ಕುಟುಂಬ ಸದೃಡ ಪಡಿಸುವಂತ ಕಾಂಗ್ರೆಸ್‌ಗೆ ಮತ ನೀಡುವ ಮೂಲಕ ಆನಂದ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಹಿರೇಕೆರೂರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ ಮಡಿವಾಳರ, ರಟ್ಟೀಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಡಿ. ಬಸನಗೌಡ್ರ.ಡಾ. ನಿಂಗಪ್ಪ ಚಳಗೇರಿ, ಹನುಮಂತಗೌಡ ಭರಮಗೌಡ್ರ, ಮಹೇಶ ಗುಬ್ಬಿ, ದುರಗಪ್ಪ ನೀರಲಗಿ,ಮಹೇಂದ್ರ ಬಡಳ್ಳಿ,ಶಿವಣ್ಣ ಗಡಿಯಣ್ಣನವರ, ನಾರಾಯಣಪ್ಪ ಗೌರಕ್ಕನವರ,ವಿ.ಎಸ್. ಪುರದ, ಗಣೇಶಪ್ಪ ಮಾಗನೂರ, ಕೆ.ಡಿ. ದಿವಿಗಿಹಳ್ಳಿ, ಕುಮಾರ ಜಕ್ಕಪ್ಪಳವರ, ತಿರಕಪ್ಪ ಬೋಗೇರ ಹಾಗೂ ಪಕ್ಷದ ಮುಖಂಡರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.