ಸಾರಾಂಶ
‘ಸ್ವಚ್ಛತೆಯೇ ಆರೋಗ್ಯ’ ಎಂಬ ಅರಿವು ಜನರಲ್ಲಿ ಮೂಡಬೇಕಿದೆ. ಅಂದಾಗ ಮಾತ್ರ ಸ್ವಚ್ಛ ಹಾಗೂ ಸುಂದರ ಪರಿಸರ ನಿರ್ಮಾಣ ಸಾಧ್ಯ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಅಮೋಲ್ ಹಿರಿಕುಡೆ ಅಭಿಪ್ರಾಯಪಟ್ಟರು.
ಬ್ಯಾಡಗಿ: ‘ಸ್ವಚ್ಛತೆಯೇ ಆರೋಗ್ಯ’ ಎಂಬ ಅರಿವು ಜನರಲ್ಲಿ ಮೂಡಬೇಕಿದೆ. ಅಂದಾಗ ಮಾತ್ರ ಸ್ವಚ್ಛ ಹಾಗೂ ಸುಂದರ ಪರಿಸರ ನಿರ್ಮಾಣ ಸಾಧ್ಯ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಅಮೋಲ್ ಹಿರಿಕುಡೆ ಅಭಿಪ್ರಾಯಪಟ್ಟರು.
ಸ್ವಚ್ಛತೆಯೇ ಸೇವೆ ಅಭಿಯಾನದ ಅಂಗವಾಗಿ ತಾಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ತಾಲೂಕು ನ್ಯಾಯವಾದಿಗಳ ಸಂಘ ಬ್ಯಾಡಗಿ ಮತ್ತು ಪುರಸಭೆ ಬ್ಯಾಡಗಿ ಇವರ ಸಂಯುಕ್ತಾಶ್ರಯದಲ್ಲಿ ಕಾಕೋಳ ರೋಡ್ ಪೊಲೀಸ್ ಸ್ಟೇಷನ್ ಹತ್ತಿರದ ಉದ್ಯಾನ ಸ್ವಚ್ಛತಾ ಕಾರ್ಯಕ್ರಮ ಕಾರ‍್ಯಕ್ರಮದಲ್ಲಿ ಅವರು ಮಾತನಾಡಿದರು. ಮಾನವನ ಅಳಿವು ಉಳಿವು ಪ್ರಕೃತಿಯ ಮೇಲೆ ಅವಲಂಬಿತವಾಗಿದೆ. ಆದರೆ, ಮನುಷ್ಯ ಪರಿಸರ ನಾಶ ಮಾಡುತ್ತ ತನ್ನ ಅಸ್ತಿತ್ವಕ್ಕೆ ತಾನೇ ತಿಲಾಂಜಲಿ ಇಡುತ್ತಿದ್ದಾನೆ ಎಂದರು.ಈ ಸಂದರ್ಭದಲ್ಲಿ ಕಿರಿಯ ದಿವಾಣಿ ನ್ಯಾಯಾಧೀಶ ಸುರೇಶ ವಗ್ಗನವರ, ವಕೀಲರ ಸಂಘದ ಅಧ್ಯಕ್ಷ ಎಸ್.ಎನ್. ಬಾರ್ಕಿ, ಉಪಾಧ್ಯಕ್ಷ ಬಿ.ಜಿ. ಹಿರೇಮಠ, ಕಾರ್ಯದರ್ಶಿ ಎಂ.ಪಿ. ಹಂಜಗಿ, ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಪ್ಪಗೋಳ, ನ್ಯಾಯವಾದಿ ಬಿ.ಎಚ್. ಚೂರಿ, ಎಫ್.ಎಮ್. ಮುಳುಗುಂದ ಮತ್ತು ಎಂ.ಬಿ. ಹಾವೇರಿ, ಭಾರತಿ ಕುಲಕರ್ಣಿ ಶಿವರಾಜ ಅಂಗಡಿ, ಎಸ್.ಎಸ್. ಕೊಣ್ಣೂರ ಸೇರಿದಂತೆ ನ್ಯಾಯಾಂಗ ಇಲಾಖೆ ಶಿರಸ್ತೇದಾರ ಜೆ.ಬಿ. ಬಾರ್ಕಿ ಮತ್ತು ಪುರಸಭೆ ಸಿಬ್ಬಂದಿ ಉಪಸ್ಥಿತರಿದ್ದರು.