ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುದೇಶದ ಮತದಾರ ಪ್ರಭು ಪ್ರಧಾನಿ ನರೇಂದ್ರ ಮೋದಿ ನಾಯಕತ್ವವನ್ನು ಮೆಚ್ಚಿ ದೇಶದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಗೆ ಬಹುಮತ ನೀಡಿದ್ದು, ಜಿಲ್ಲೆಯ ಜನರು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣರನ್ನು ಗೆಲ್ಲಿಸಿ ತುಮಕೂರು ಅಭಿವೃದ್ಧಿಗೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ ಎಂದು ಬಿಜೆಪಿ ತುಮಕೂರು ಜಿಲ್ಲಾ ಕೋಶಾಧಿಕಾರಿ ಡಾ.ಎಸ್.ಪರಮೇಶ್ ತಿಳಿಸಿದ್ದಾರೆ. ಇಡೀ ದೇಶದಲ್ಲಿ ನರೇಂದ್ರ ಮೋದಿ ಅಭಿವೃದ್ಧಿಯ ಅಲೆಗೆ ಇಂಡಿಯಾ ಮೈತ್ರಿಕೂಟ ನೆಲಕಚ್ಚಿದ್ದು, ಭಾರೀ ಪ್ರಚಾರ, ಹಿಂಬಾಗಿಲ ರಾಜಕೀಯದ ನಡುವೆಯೂ ಇಂಡಿಯಾಗೆ ಬಹುಮತ ಪಡೆಯಲು ಸಾಧ್ಯವಾಗಿಲ್ಲ. ಮತ್ತೊಮ್ಮೆ ನಾವು ದೇಶದ ಅಭಿವೃದ್ಧಿ ನರೇಂದ್ರ ಮೋದಿಯವರನ್ನು ಆಯ್ಕೆ ಮಾಡಿಕೊಂಡಿರುವುದಾಗಿ ಮತದಾರ ನೇರ ಸಂದೇಶ ನೀಡಿದ್ದು ಅಭಿವೃದ್ಧಿಗೆ ಆಶೀರ್ವಾದ ನೀಡಿದ್ದಾನೆ ಎಂದರು.ರಾಜ್ಯದ ಗ್ಯಾರೆಂಟಿಗಳನ್ನು ಗಾಳಿಗೆ ತೂರಿ, ಮೋದಿಯೇ ದೇಶಕ್ಕೆ ಗ್ಯಾರೆಂಟಿಯನ್ನುವ ನೇರ ಸಂದೇಶ ನೀಡಿದ್ದು ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಬರೋಬ್ಬರಿ 1 ಲಕ್ಷದ 75 ಸಾವಿರ ಮತಗಳ ಅಂತರದಿಂದ ಗೆಲ್ಲುವ ಮೂಲಕ ಐತಿಹಾಸಿಕ ವಿಜಯ ಸಾಧಿಸಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.