ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರಈ ಬಾರಿಯ ಚಾಮರಾಜನಗರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳು ಅಸಮರ್ಥರಾಗಿದ್ದು, ಬಿಎಸ್‌ಪಿಯಿಂದ ಸ್ಪರ್ಧಿಸಿರುವ ಅಭ್ಯರ್ಥಿ ಹೆಚ್ಚು ಬುದ್ಧಿವಂತ ಮತ್ತು ಪ್ರಬುದ್ಧರಾಗಿದ್ದು, ಜನರು ಇವರನ್ನು ಸ್ಪೀಕರಿಸುತ್ತಾರೆ ಎಂದು ಬಿಎಸ್‌ಪಿ ಪ್ರಧಾನ ಕಾರ್ಯದರ್ಶಿ ಹ.ರಾ. ಮಹೇಶ್ ಹೇಳಿದರು. ನಗರದ ಜಿಲ್ಲಾ ಕಾರ್ಯನಿತರ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಭ್ಯರ್ಥಿ ಹಾಕುವ ವಿಚಾರದಲ್ಲಿ ತಾಂತ್ರಿಕ ದೋಷವಾದ್ದರಿಂದ ರಾಜ್ಯ ಅಧ್ಯಕ್ಷರಾಗಿ ಕೆಲಸ ಮಾಡಿರುವ ಚಳುವಳಿಗಳಲ್ಲಿ ಭಾಗವಹಿಸಿ ಅನುಭವವಿರುವ ಎಂ. ಕೃಷ್ಣಮೂರ್ತಿಯನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದೇವ ಎಂದರು.
ಗೆಲ್ಲುವ ವಿಶ್ವಾಸವಿದೆ:ನಮ್ಮದು ಹಣ ಹೆಂಡ ಹಂಚಿ ಮತ ಪಡೆಯುವ ಸಂಸ್ಕೃತಿಯಿಲ್ಲ, ಸಂವಿಧಾನವನ್ನೇ ಪ್ರಣಾಳಿಕೆಯನ್ನು ಮಾಡಿಕೊಂಡಿದ್ದೇವೆ, ಈ ದಿಸೆಯಲ್ಲಿ ಪಕ್ಷ ಕಟ್ಟಿದ್ದೇವೆ, ಅಭ್ಯರ್ಥಿ ಘೋಷಣೆಯಾದ ನಂತರ ನಾವು ಎಂಟು ವಿಧಾನಸಭಾ ಕ್ಷೇತ್ರಗಳಲ್ಲೂ ಪ್ರಚಾರ ಮಾಡಿದ್ದೇವೆ ಹೋದೆಡೆಯಲ್ಲಾ ನಮ್ಮ ಅಭ್ಯರ್ಥಿಯ ಬಗ್ಗೆ ಗುಣಾತ್ಮಕ ಪ್ರಕ್ರಿಯೆಗಳು ಬರುತ್ತಿದ್ದು, ಗೆಲ್ಲುವು ವಿಶ್ವಾಸವಿದೆ. ಪ್ರಜಾಪ್ರಭುತ್ವ ಜಾಗೃತಿ ಮೂಡಿಸಿ ಮತ ಕೇಳ್ತೇವೆ:
ಕಾಂಗ್ರೆಸ್ ಬಿಜೆಪಿ ಅಭ್ಯರ್ಥಿಗಳಿಂತ ನಮ್ಮನ್ನು ಎಲ್ಲಾ ವರ್ಗದ ಜನರು ಬೆಂಬಲಿಸುತಿರುವುದು ವಿಶೇಷವಾಗಿದೆ. ನಮ್ಮದೇ ಆದ ಒಂದು ಲಕ್ಷ ಮತಗಳಿದ್ದು, ಇತರರು ಈ ಬಾರಿ ನಮ್ಮನ್ನು ಬೆಂಬಲಿಸುತ್ತಿದ್ದಾರೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಜಾಗೃತಿ ಮೂಡಿಸುವ ಮೂಲಕ ಮತ ಕೇಳುತ್ತಿದ್ದೇವ ಎಂದರು.ಕಾಂಗ್ರೇಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಬಗ್ಗೆ ಜನರು ಭ್ರಮಾನಿರಶನರಾಗಿದ್ದಾರೆ, ಗೆದ್ದ ಮೇಲೆ ಹೇಗೆ ಕ್ಷೇತ್ರ ಪ್ರತಿನಿಧಿಸುತ್ತಾರೆ ಎಂಬ ಆತಂಕ ಮೂಡಿದೆ. ನಮ್ಮ ಪಕ್ಷದ ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ಕೆಲಸ ಮಾಡುತ್ತಿದ್ದಾರೆ ಎಂದರು. ಸಂವಿಧಾನ ರಕ್ಷಣೆ ಮಾಡುತ್ತೇವೆ ಎನ್ನುವ ಕಾಂಗ್ರೆಸ್ ಯಾವತ್ತೂ ಸಂವಿಧಾನ ರಕ್ಷಿಸಿಲ್ಲ. ಗ್ಯಾರಂಟಿ ನೀಡಿದ್ದೆ ಸಂವಿಧಾನ ರಕ್ಷಣೆ ಎಂದುಕೊಂಡಿದ್ದಾರೆ. ಬಿಜೆಪಿಯವರು ಸಂವಿಧಾನ ಬದಲಿಸಲು ಹೊರಟಿದ್ದಾರೆ.ಕಾಂಗ್ರೆಸ್ ಅಭ್ಯರ್ಥಿ ಅಸಮರ್ಥರು:
ಚಾಮರಾಜನಗರದ ಕಾಂಗ್ರೆಸ್ ಅಭ್ಯರ್ಥಿ ಅಸಮರ್ಥರು. ಆ ಪಕ್ಷದವರಿಗೆ ಪ್ರಬುದ್ಧ ಸಮರ್ಥ ಅಭ್ಯರ್ಥಿ ಸಿಗಲಿಲ್ಲವೇ, ಮಂತ್ರಿ ತಮ್ಮ ಮಗನನ್ನೆ ಅಭ್ಯರ್ಥಿ ಮಾಡಬೇಕಿತ್ತಾ. ಪಕ್ಷದಲ್ಲಿ ಬೇರೆಯವರು ಇರಲಿಲ್ಲವೇ, ಬೇಜವಾಬ್ದಾರಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸುವ ಬದಲು ವಿದ್ಯಾವಂತ ಬುದ್ದಿವಂತ ಅಭ್ಯರ್ಥಿ ಎಂ.ಕೃಷ್ಣಮೂರ್ತಿ ಅಭ್ಯರ್ಥಿ ಗೆಲ್ಲಿಸಿ ಎಂದು ಮನವಿ ಮಾಡಿದರು.ಕಾಂಗ್ರೆಸ್ ಪಕ್ಷದವರು ನಮ್ಮ ಪಕ್ಷದದವರನ್ನೇ ಸೇರಿಸಿಕೊಂಡು ನಮ್ಮ ಮೇಲೆ ಅಪಪ್ರಚಾರ ಮಾಡುತ್ತಿದ್ದಾರೆ. ಪ್ರಜ್ಞಾವಂತ ಮತದಾರರು ಅಪಪ್ರಚಾರಕ್ಕೆ ಕಿವಿಗೊಡಬೇಡಿ. ಬಿಜೆಪಿಯವರು ಹೆಚ್ಚು ಪ್ರಚಾರಕ್ಕೆ ಬರುತ್ತಿಲ್ಲ. ಒಳ ಒಪ್ಪಂದ ಮಾಡಿಕೊಂಡಿರಬಹುದು ಎಂಬ ಸಂಶಯ ಮೂಡಿಸುತ್ತಿದೆ. ನಾವು ಎಂದಿಗೂ ಯಾರೊಂದಿಗೂ ಒಳ ಒಪ್ಪಂದ ಮಾಡಿಕೊಂಡಿಲ್ಲ. ಪತ್ರಿಕಾಗೋಷ್ಠಿಯಲ್ಲಿ ಬ್ಯಾಡಮೂಡ್ಲು ಬಸವಣ್ಣ, ಬ.ಮ. ಕೃಷ್ಣಮೂರ್ತಿ, ಎಸ್.ಪಿ. ಮಹೆಶ್, ಅಮಚವಾಡಿ ಪ್ರಕಾಶ್, ರಾಜಶೇಖರ್ ಇದ್ದರು.